ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್
ಮುಂಬಯಿ : ನಗರದ ಯುವ ಸಂಘಟಕರಾದ ಸುರೇಶ್ ಕೆ. ಕಡಂದಲೆ, ಸುನೀಲ್ ಪಲಿಮಾರು ಮತ್ತು ನವೀನ್ ಪಡು ಇನ್ನ ಇವರ ನೇತೃತ್ವದಲ್ಲಿ ನ. 3ರಂದು ಮಾಟುಂಗಾದ ಡಾ. ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಲಕುಮಿ ತಂಡದ ’ರಡ್ಡೆಟ್ ಏರೆಡ್ಡೆ’ ನಾಟಕ ಪ್ರದರ್ಶನಗೊಂಡಿದ್ದು ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬೆಳಪು ಗ್ರಾಮದ ಅಭಿವೃದ್ದಿಯ ರೂವಾರಿ ಡಾ. ದೇವಿಪ್ರಸಾದ್ ಶೆಟ್ಟಿ ಮತ್ತು ಮುಲುಂಡ್ ಪ್ರೆಂಡ್ಸ್ ನ ಸ್ಥಾಪಕ ಸುರೇಶ್ ಶೆಟ್ಟಿ ಯೆಯ್ಯಾಡಿಯವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ವಹಿಸಿದ ಸಮಾಜ ಸೇವಕ, ಉದ್ಯಮಿ ಡಾ. ಸುರೇಂದ್ರ ಶೆಟ್ಟಿಯವರು ಮಾತನಾಡುತ್ತಾ ಸಮಾಜ ಸೇವೆಯೊಂದಿಗೆ ದೇಶ ಪ್ರೇಮವನ್ನು ಬೆಳೆಸೋಣ ಎಂದರು.
ಮೀರರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಾಣೂರು ಸಾಂತಿಂಜ ಜನಾರ್ಧನ ಭಟ್ ಆಶೀರ್ವಚನದ ಮಾತುಗಳನ್ನಾಡಿದರು.
ಅತಿಥಿಯಾಗಿ ಯಕ್ಷ ಮಾನಸದ ಅಧ್ಯಕ್ಷ ಶೇಖರ ಶೆಟ್ಟಿ ಉಪಸ್ಥಿತರಿದ್ದು ಮಾತನಾಡಿದರು.
ವೇದಿಕೆಯಲ್ಲಿ ಗಣ್ಯರಾದ ಸಿಬಿಡಿ ಭಾಸ್ಕರ ಶೆಟ್ಟಿ, ನಿಲೇಶ್ ಪೂಜಾರಿ, ಲತಾ ಜಯರಾಂ ಶೆಟ್ಟಿ, ಬಾಬುರಾಯ ಪ್ರಭು, ಕೃಷ್ಣ ಪೂಜಾರಿ, ಪ್ರಸನ್ನ ಕುಂಟಾಡಿ ಮೊದಲಾದವರು ಉಪಸ್ಥಿತರಿದ್ದರು.
ದ. ಕ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕು. ಕೀರ್ತಿಶ್ರೀ ಮೂಲ್ಯ ಹಾಗೂ ನೃತ್ಯವನ್ನು ಸಾದರಪಡಿಸಿದ ಕಲಾವಿದರನ್ನು ಗೌರವಿಸಲಾಯಿತು. ಕಾರ್ಯಕ್ರಮವನ್ನು ಸತೀಶ್ ಪೂಜಾರಿ ಎರ್ಮಾಳು ನಿರೂಪಿಸಿದರು.