ಕರಾವಳಿ

ಎಂಅರ್‌ಪಿಎಲ್‌ನ ಸಲ್ಫರ್, ಕೋಕ್ ಘಟಕಗಳನ್ನು ಮುಚ್ಚಲು ಆಗ್ರಹಿಸಿ ಸಂಸ್ಥೆ ಎದುರು ಸ್ಥಳೀಯರ ಪ್ರತಿಭಟನೆ

Pinterest LinkedIn Tumblr

Mrpl_off_Protest_1

ಸುರತ್ಕಲ್, ನ.4: ಎಂಆರ್‌ಪಿಎಲ್ ಕೈಗಾರಿಕೆಯ ಮಾಲಿನ್ಯದಿಂದಾಗುವ ಅಪಾಯದ ವಿರುದ್ಧ ಹಾಗೂ ಸಲ್ಫರ್, ಕೋಕ್ ಘಟಕಗಳನ್ನು ಮುಚ್ಚಲು ಒತ್ತಾಯಿಸಿ ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ವತಿಯಿಂದ ಎಂಅರ್‌ಪಿಎಲ್ ಕಾರ್ಗೊ ಗೇಟ್ ಮುಂಭಾಗದಲ್ಲಿ ಸೋಮವಾರ ಧರಣಿ ನಡೆಸಲಾಯಿತು.

ಎಂಆರ್‌ಪಿಎಲ್ ಮೂರನೆ ಹಂತದ ಕೋಕ್ ಮತ್ತು ಸಲ್ಫರ್ ಘಟಕವು ಜೋಕಟ್ಟೆ ಕಳವಾರು, ತೋಕೂರು, ಕೆಂಜಾರು ಗ್ರಾಮದ ಜನತೆಯ ಬದುಕನ್ನು ನರಕ ಯಾತನಮಯ ಮಾಡಿದೆ. ಸ್ಥಾವರ ಹೊರಬಿಡುವ ದುರ್ಗಂಧ, ಹಗಲು ರಾತ್ರಿ ವ್ಯತ್ಯಾಸವಿಲ್ಲದೆ ಕರ್ಕಶ ಶಬ್ದ, ವಾಯು, ಜಲ, ಶಬ್ದ ಮಾಲಿನ್ಯ ನಿತ್ಯ ನಿರಂತರವಾಗಿದೆ ಎಂದು ಹೋರಾಟಗಾರರು ದೂರಿದರು.

ಇದರ ವಿರುದ್ಧ ಹಲವು ಹೋರಾಟ ಗಳನ್ನು ಸಂಘಟಿಸಿದರೂ ಸರಕಾರ ಇತ್ತ ಗಮನಹರಿಸಿಲ್ಲ. ಜನತೆಯು ಮಾರಾಣಾಂತಿಕ ರೋಗರುಜಿನಗಳಿಗೆ ಬಲಿಯಾಗುತ್ತಿದ್ದಾರೆ. ಇದಲ್ಲದೆ ವಿಶೇಷ ಅರ್ಥಿಕ ವಲಯದಲ್ಲಿ ಕ್ಯಾನ್ಸರ್ ಕಾರಕ ನೂತನ ಸ್ಥಾವರಗಳು ತಲೆಎತ್ತಲಿವೆ ಎಂದು ಪ್ರತಿಭಟನಕಾರರು ಆತಂಕ ವ್ಯಕ್ತಪಡಿಸಿದರು.

ಸಭೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್. ಶಿವರಾಮ, ದಲಿತ ಸಂಘಟನೆಯ ನಾಯಕ ಶೇಖರ ಹೆಜಮಾಡಿ, ನಾಡದೋಣಿ ಮೀನುಗಾರರ ಸಂಘದ ಶರತ್ ಗುಡ್ಡೆಕೊಪ್ಲ, ಡಿವೈಎ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ವಸಂತ ಆಚಾರಿ, ಸಂತೋಷ್ ಬಜಾಲ್ ಮತ್ತಿತರರು ಮಾತನಾಡಿದರು.

ನಾಗರಿಕ ಹೋರಾಟ ಸಮಿತಿಯ ಬಿ.ಎಸ್.ಹಸನಬ್ಬ, ಹಸನ್ ಶರ್ೀ, ಮೊಯ್ದಿನ್ ಶರೀಫ್, ಮೋಹನ್, ಶರೀಫ್ ನಿರ್ಮುಂಜೆ, ಪಂಚಾಯತ್ ಅಧ್ಯಕ್ಷ ಶೇಕುಂಞಿ, ಬಿ.ಕೆ.ಇಮ್ತಿಯಾಝ್, ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತರ ವಿಭಾಗದ ಪ್ರಧಾನ ಕಾರ್ಯದರ್ಶಿ ಪಿ.ಎಚ್.ಎಂ.ರಫೀಕ್ ಕಾಟಿಪಳ್ಳ, ಜೆ.ಹುಸೈನ್ ಜೋಕಟ್ಟೆ, ಮಯ್ಯದ್ದಿ ಮತ್ತಿತರರು ಧರಣಿಯ ನೇತೃತ್ವ ವಹಿಸಿದ್ದರು.

ಎಂಆರ್‌ಪಿಎಲ್ ಕೈಗಾರಿಕಾ ಮಾಲಿನ್ಯದ ಅಪಾಯದ ವಿರುದ್ಧ ರಾಷ್ಟ್ರದ ಗಮನ ಸೆಳೆಯುವಂತೆ ದ.ಕ ಜಿಲ್ಲೆಗೆ ನ.5ರಂದು ಅಗಮಿಸಲಿರುವ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ಜೆಡಿಎಸ್ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಪಿ.ಎಚ್.ಎಂ. ರಫೀಕ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Write A Comment