ಕರಾವಳಿ

ಸದಾಶಿವ್ ಅಮೃಪುರ್‍ಕರ್ ನಿಧನಕ್ಕೆ ಗ್ರೇಗರಿ ಡಿ’ಅಲ್ಮೇಡಾ ಸಂತಾಪ

Pinterest LinkedIn Tumblr

Ravindra_Zende_photo_7

ಮುಂಬಯಿ, ಅ.03  ಚಲನಚಿತ್ರಗಳಲ್ಲಿ ಬಹುತೇಕವಾಗಿ ಖಳನಾಯಕನ ಪಾತ್ರಗಳನ್ನೇ ನಿರ್ವಹಿಸಿ ಬಾಲಿವುಡ್‌ನಲ್ಲಿ ತನ್ನದೇ ಆದ ಪ್ರತಿಷ್ಠೆಯನ್ನು ಸಿದ್ಧಿಗೊಳಿಸಿ ಇಂದಿಲ್ಲಿ ಸೋಮವಾರ ಬೆಳಿಗ್ಗೆ ನಿಧನರಾದ ಸದಾ ಸದಾಶಿವ್ ಅಮೃಪುರ್‍ಕರ್ ನಿಧನಕ್ಕೆ ಉಡುಪಿ ಜಿಲ್ಲೆಯ ಮೂಡುಬೆಳ್ಳೆ ಮೂಲದ ಮುಂಬಯಿ ಅಲ್ಲಿನ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಗ್ರೇಗರಿ ಎಲ್. ಡಿ’ಅಲ್ಮೇಡಾ ಸಂತಾಪ ಸೂಚಿಸಿದ್ದಾರೆ.

ವಿಲನ್ ಪಾತ್ರಗಳ ಮೂಲಕ ಬಾಲಿವುಡ್ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವಂತೆ ಇತರ ಭಾಷೆಗಳಲ್ಲೂ ನಟಿಸಿ ಚಿತ್ರರಸಿಕರ ಪಾಲಿನ ಅತ್ತ್ಯುತ್ತಮ ನಟ ಅಮೃಪುರ್‍ಕರ್ ತನ್ನ ನಿರ್ಮಾಪಕತ್ವ ಮತ್ತು ಚಲನಚಿತ್ರ ನಿರ್ಮಾಪಕಿ ಶ್ರೀಮತಿ ಲೀನಾ ಜಿ.ಡಿ’ಆಲ್ಮೇಡಾ ಅವರ ಸಹ ನಿರ್ಮಾಪಕತ್ವದಲ್ಲಿ ಮರಾಠಿ ಭಾಷೆಯಲ್ಲಿ ನಿರ್ಮಿತ ಮರಾಠಿ ಚಲನಚಿತ್ರ `ಒವಲಿತೆ ಭವುರಾಯ’ವನ್ನು ಯಶಸ್ವೀಯಾಗಿ ಚಿತ್ರೀಕರಿಸುವ ಲ್ಲೂ ಮತ್ತು ತನ್ನ ಸುಪುತ್ರಿ ನಟಿ ಸ್ಮೀತಾ ಜಿ.ಡಿ’ಅಲ್ಮೇಡಾ ಅವರನ್ನು ಚಿತ್ರದ ನಾಯಕಿ ನಟಿಯಾಗಿಸಿ ಆಯ್ಕೆಗೊಳಿಸಿದ್ದ ಅಮೃಪುರ್‍ಕರ್ ತುಳು-ಕನ್ನಡಿಗರಲ್ಲಿ ಅಪಾರವಾದ ಅಭಿಮಾನ ಇರಿಸಿದ್ದರು. ತನ್ನ ನಿರ್ಮಾಪಕತ್ವದ `ಹಸ್ರೀ’ ಚಲನಚಿತ್ರಕ್ಕೆ ಅತ್ತ್ಯುತ್ತಮ ನಿರ್ಮಾಪಕ, ಶ್ರೇಷ್ಠ ಫಿಲ್ಮ್ ಸೇರಿದಂತೆ ಮಹಾರಾಷ್ಟ್ರ ರಾಜ್ಯದ ಪ್ರತಿಷ್ಠಿತ ಐದು ಪುರಸ್ಕಾರಗಳು ಲಭಿಸುವಸಿದ್ದು ಅಮೃಪುರ್‍ಕರ್ ಮಾರ್ಗದರ್ಶನ ನಮಗೆ ಪ್ರೇರಣೆಯಾಗಿತ್ತು.

ಸಡಕ್, ಹಿಸ್ಕ್, ಅರ್ಧಸತ್ಯ, ಹಮ್ ಸಾಥ್ ಸಾಥ್ ಹೇ ಸೇರಿದಂತೆ ಅನೇಕ ಚಿತ್ರಗಳ ನಟನೆಯಿಂದ ಕೋಟ್ಯಾಂತರ ಚಿತ್ರಪ್ರೇಕ್ಷಕರ ಮನ, ಮನೆ ಮಾತಾಗಿರುವ ಅಮೃಪುರ್‍ಕರ್ ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ವಾರವಷ್ಟೇ ಅಂಧೇರಿ ಪಶ್ಚಿಮದ ಕೋಕಿಲಾ ಬೆನ್ ಧೀರೂಭಾಯಿ ಅಂಬಾನಿ ಅಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದು ಇಂದು ಬೆಳಿಗ್ಗೆ ನಿಧನ ಹೊಂದಿದ್ದು ನಮಗೆ ದುಃಖ ತಂದಿದೆ ಎಂದೂ ಗ್ರೇಗರಿ ಡಿ’ಅಲ್ಮೇಡಾ ತಿಳಿಸಿದ್ದಾರೆ.

ಮೃತರ ನಿಧನಕ್ಕೆ ನಿರ್ಮಾಪಕಿ ಶ್ರೀಮತಿ ಲೀನಾ ಜಿ. ಡಿ’ಅಲ್ಮೇಡಾ, ನಟಿ ಸ್ಮೀತಾ ಜಿ.ಡಿ’ಅಲ್ಮೇಡಾ ಅವರೂ ಸಂತಾಪ ಸೂಚಿದ್ದಾರೆ. ಗ್ರೇಗರಿ ಡಿ’ಅಲ್ಮೇಡಾ ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.

Write A Comment