ಕರಾವಳಿ

ಬಿಜೆಪಿ ವತಿಯಿಂದ ಎರಡು ದಿನಗಳ ಪ್ರಶಿಕ್ಷಣ ಪರಿಚಯವರ್ಗದ ಸಮಾರೋಪ ಸಮಾರಂಭ.

Pinterest LinkedIn Tumblr

bjp-shibira

ಮಂಗಳೂರು,ನ.೦3: ಪಕ್ಷದಲ್ಲಿ ಕಾಲಕಾಲಕ್ಕೆ ನಡೆಯುವ ಪ್ರಶಿಕ್ಷಣವು ಪಕ್ಷಕ್ಕೆ ಬದ್ಧತೆಯನ್ನು ದೃಢಗೊಳಿಸುವುದಲ್ಲದೆ, ಅಧ್ಯಯನಶೀಲ ಕಾರ್ಯಕರ್ತನನ್ನು ರೂಪಿಸುತ್ತದೆ. ಬಿಜೆಪಿಯಲ್ಲಿ ವಿಶಿಷ್ಟ ಕಲ್ಪನೆಯಾದ ಪ್ರಶಿಕ್ಷಣವು ಸಮರ್ಥ ಭಾರತ ನಿರ್ಮಾಣಕ್ಕಾಗಿ ಕಾರ್ಯಕರ್ತರು ಹೆಗಲು ಜೋಡಿಸಲು ಪ್ರೇರಣೆಯಾಗಿದೆ ಎಂದು ಮಾಜಿ ಸಚಿವ, ಕರ್ನಾಟಕ ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಪ್ರಮುಖ ಕಾರ್ಯಕರ್ತರಿಗಾಗಿ ಸಂಘನಿಕೇತನದಲ್ಲಿ ನಡೆದ ಎರಡು ದಿನಗಳ ಪ್ರಶಿಕ್ಷಣ ಪರಿಚಯವರ್ಗದ ಸಮಾರೋಪ ಸಮಾರಂಭದಲ್ಲಿ (ದಿನಾಂಕ 02-11-2014) ಮುಖ್ಯ ಭಾಷಣಕಾರರಾಗಿ ಮಾತನಾಡಿದರು.ಇತ್ತೀಚೆಗೆ ದೇಶದಲ್ಲಿ ನಡೆದ ರಾಜಕೀಯ ಪರಿವರ್ತನೆಯ ನಂತರ ದೇಶವಾಸಿಗಳಿಗೆ ಒಳ್ಳೆಯ ದಿನಗಳು ಅನುಭವಕ್ಕೆ ಬರುತ್ತಿದೆ. ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರಭಾವ ಪಸರಿಸುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ನೈಜ ಸಾಧನೆಗಳನ್ನು ಜನತೆಗೆ ನೆನಪಿಸಿಕೊಳ್ಳುತ್ತಾ ನಿಖರ ಮತ್ತು ಸ್ಪಷ್ಟ ವಿಷಯಗಳೊಂದಿಗೆ ಕಾರ್ಯಕರ್ತರು ನಾಯಕತ್ವವನ್ನು ಬೆಳೆಸಿಕೊಳ್ಳಬೇಕು. ಜೊತೆಗೆ ಅಭಿವೃದ್ಧಿಯನ್ನು ಮರೆತು, ಗೋಕಳ್ಳರಿಗೆ ಅತ್ಯಾಚಾರಿಗಳಿಗೆ ಬೆನ್ನೆಲುಬಾಗಿ ನಿಂತು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ನಿರ್ಲಕ್ಷ್ಯವನ್ನು ತೋರಿದ ರಾಜ್ಯ ಸರಕಾರದ ವಿರುದ್ಧ ಜನ ಜಾಗೃತಿಯನ್ನು ರೂಪಿಸಬೇಕಾಗಿದೆ ಎಂದು ಅವರು ಕರೆ ನೀಡಿದರು.

ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷ ರವಿಶಂಕರ ಮಿಜಾರ್ ಪ್ರಶಿಕ್ಷಣ ವರ್ಗದ ಅವಲೋಕನ ಮಾತುಗಳನ್ನಾಡುತ್ತಾ ಪಕ್ಷದ ಸದಸ್ಯತನ ಅಭಿಯಾನದಲ್ಲಿ ಕಾರ್ಯಕರ್ತರು ಸಕ್ರಿಯ ತೊಡಗಿಸಿಕೊಳ್ಳುವಂತೆ ಕೋರಿದರು.ಪಕ್ಷದ ಮಂಡಲ ಪ್ರಭಾರಿಗಳಾದ ಜಿಲ್ಲಾ ಉಪಾಧ್ಯಕ್ಷ ಎ.ಉಮಾನಾಥ ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ಅಶೋಕ್ ಕೃಷ್ಣಾಪುರ ಮತ್ತು ಬಿಜೆಪಿ ದಕ್ಷಿಣ ಮಂಡಲ ಪ್ರಧಾನ ಕಾರ್ಯದರ್ಶಿ ವೇದವ್ಯಾಸ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮಂಡಲ ಕಾರ್ಯದರ್ಶಿ ರಮೇಶ್ ಕಂಡೆಟ್ಟು ಸ್ವಾಗತಿಸಿದರು. ಅರುಣ್ ಶೇಟ್ ವೈಯಕ್ತಿಕ ಗೀತೆ ಹಾಡಿದರು. ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು ವಂದಿಸಿದರು. ನ್ಯಾಯವಾದಿ ಬಿ.ರವೀಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

 

Write A Comment