ಕರಾವಳಿ

ಕೋಡಿಕೆರೆ ನಿವಾಸಿ ಮನೋಜ್‌ ಕುಲಾಲ್‌ಗೆ ಗೂಂಡಾಕಾಯ್ದೆ : ಮಾಜಿ ಸಚಿವ ಪಾಲೆಮಾರ್‌ ಖಂಡನೆ

Pinterest LinkedIn Tumblr

Palmar_Byte_kodikere

ಮಂಗಳೂರು,ನ.03 : ಸುರತ್ಕಲ್‌ ಕೋಡಿಕೆರೆ ನಿವಾಸಿ ಮನೋಜ್‌ ಕುಲಾಲ್‌ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿರುವ ಪೊಲೀಸರ ಕ್ರಮ ಖಂಡನೀಯ ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕಾನೂನು ಸುವ್ಯವಸ್ಥೆ ಕುಸಿದಿದೆ. ಕೊಲೆ, ಸುಲಿಗೆ ಅತ್ಯಾಚಾರದಂತಹ ಪ್ರಕರಣ ಅವ್ಯಾಹತವಾಗಿ ನಡೆಯುತ್ತಿದೆ. ಇಂತಹ ಪ್ರಕರಣಗಳ ನೈಜ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ಬದಲು ಕಾಂಗ್ರೆಸ್‌ ನಾಯಕರು ಪೊಲೀಸ್‌ ಇಲಾಖೆಯನ್ನು ಸ್ವಂತಕ್ಕೆ ಬಳಸಿಕೊಳ್ಳುವಲ್ಲಿ ನಿರತರಾಗಿದ್ದಾರೆ ಎಂದು ಅವರು ಪ್ರಕಟನೆಯಲ್ಲಿ ಆರೋಪಿಸಿದ್ದಾರೆ.

ಜಿಲ್ಲೆಯಲ್ಲಿ ಕೊಲೆ, ಕೊಲೆಯತ್ನ, ಸುಲಿಗೆ, ಕಳವು ಮುಂತಾದ ಗಂಭೀರ ಅಪರಾಧ ಪ್ರಕರಣಗಳು ವರದಿಯಾಗುತ್ತಿದ್ದರೂ ಪೊಲೀಸ್‌ ಇಲಾಖೆ ಸ್ಪಂದಿಸುತ್ತಿಲ್ಲ. ಗೋಹತ್ಯೆ , ಗೋ ಕಳವು ಪ್ರಕರಣಗಳ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್‌ ಇಲಾಖೆ ವಿಫಲವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಬೇಕಾದೀತು ಎಂದು ಅವರು ಎಚ್ಚರಿಸಿದ್ದಾರೆ.

2 Comments

  1. ಅಯ್ಯೋಯ್ಯೋ ನಿನ್ನ ಅವಸ್ತೆ ಮಾರಾಯ …ಅಧಿಕಾರ ಅವಧಿಯಲ್ಲಿ ಲೂಟುದನ್ನೆಲ್ಲ ಲೂಟಿ ಗೂಂಡಾ ಗಳನ್ನೆಲ್ಲ ಸರಿಯಾಗಿ ಬೆಳೆಸಿ ಈಗ
    ಅವರಿಂದ ಪ್ರತಿಭಟನೆ ಗಲಾಟೆ ದೊಂಬಿ ಕಳ್ಳತನ ಮಾಡಿಸಿ ಜಾತಿ ವಿಷಯ ಗಳಲ್ಲಿ ವಿಷ ಬೆರೆಸಿ ಈಗ ಬೇರೆ ಪಕ್ಷದವರ ಮೇಲೆ ಬೆರಳು ತೋರಿಸು….
    ನೀನು ಕಳಿಸಿದ ಪಾಟವೇ ನಿನ್ನ ಚೇಲಾಗಳು ಮುಂದುವರಿಸಿದ್ದಾರೆ …..ಬ್ಲೂ ಫಿಲ್ಮ್ ನೋಡೋಕೆ ಮನೆಯಲ್ಲಿ ಪುರೊಸತ್ತು ಇರದ ನೀನು ಮತ್ತು ನಿನ್ನ ಪಟಿಂಗರು ಇಡೀ ಪ್ರಪಂಚದಲ್ಲಿಯೇ ಮೊದಲ ದೇಶದ ಹಿರಿಮೆ ಗೇರಿಸಿದರು ಅದರಲ್ಲಿ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆ ಯು ಸೇರಿತು ನಿನ್ನಂತಹ ಮಹಾನ್ ಕಾಮೇಶನಿಂದಾಗಿ ….ಇನ್ನೂ ನೀನು ಮಾಡಿದ ಕೆಲಸಕ್ಕೆನ್ತು ನಿನ್ನವರು ಮತ್ತು ಕಾಂಗಿಗಳು ಪ್ರತಿಭಟನೆ ಧಿಕ್ಕಾರ ಮಾಡಿಯೇ ಇಲ್ಲ ಆದರೆಯಾವುದೋ ಕೋತಿ ವಿಷಯಕ್ಕೆ ನಿನ್ನಿಂದ ಪ್ರತಿಭಟನೆ …

  2. OY SAUKARR RE BLUE FILM STOCK UNTA , SWALPA KALLSI NAVU NODUTTEVE, SADANADALLI MATHRA BROKER ADARE SALADU, JANARIGU NIMAGE OTU HAKUVA JANARIGU SAHA KALUHISIRI.

Write A Comment