ಕರಾವಳಿ

ನೂತನ ನಿಯಮಾವಳಿ : ಮಿಯಾರಿನಲ್ಲಿ ಪ್ರಾಯೋಗಿಕ ಕಂಬಳ -ನಂದಳಿಕೆ, ಇರುವೈಲು ಕೋಣಗಳು ಪ್ರಥಮ.

Pinterest LinkedIn Tumblr

karkala_ajekar_kambla_3

ವರದಿ : ಶೇಖರ ಅಜೆಕಾರು.

ಕಾರ್ಕಾಳ / ಅಜೆಕಾರು,ನ.೦3 : ನೂತನ ನಿಯಮಾವಳಿಗಳ ಅನುಷ್ಠಾನ ಸಾಧ್ಯತೆಗಳ ಪರಿಶೀಲನೆಗಾಗಿ ಕಂಬಳ ಸಮಿತಿ ಮಿಯಾರಿನಲ್ಲಿ ನವೆಂಬರ್ 2 ರಂದು ಆಯೋಜಿಸಿದ್ದ ಬಹು ನಿರೀಕ್ಷೆಯ ಪ್ರಾಯೋಗಿಕ ಕಂಬಳ ಮರುದಿನ ಬೆಳಗ್ಗೆ 8.00 ಗಂಟೆಗೆ ಪೂರ್ಣಗೊಂಡಿತು. ವಾರ್ಷಿಕ ಕಂಬಳಗಳಂತಹ ಜನಾಕರ್ಷಣೆಯೊಂದಿಗೆ ಯಶಸ್ವಿಯಾಗಿ ನಡೆಯಿತು. ಕಂಬಳ ಋತುವಾಗಮನಕ್ಕೆ ಮುನ್ನವೇ ಕೋಣಗಳ ಓಟದ ಸಾಧ್ಯತೆಗಳನ್ನು ಅಧ್ಯಯನ ಮಾಡಲು ಮತ್ತು ಕಂಬಳಾಭಿಮಾನಿಗಳಿಗೆ ಮುಂದಿನ ಖತುವಿನ ವಿಜೇತರ ಬಗೆಗಿನ ಮುನ್ನೋಟ ನೀಡುವಲ್ಲಿ ಕಂಬಳ ಯಶಸ್ವಿಯಾಯಿತು.

karkala_ajekar_kambla_1 karkala_ajekar_kambla_2 karkala_ajekar_kambla_4

ಹಗ್ಗ ಹಿರಿಯ 16 ಜೊತೆ ಮತ್ತು ನೇಗಿಲು ಹಿರಿಯ 14 ಜೊತೆ ಕೋಣಗಳ ಓಟಕ್ಕೆ ಮತ್ತು ಒಂದು ಸುತ್ತಿಗೆ ಮಾತ್ರ ಅನ್ವಯವಾದ ಲೀಗ್ ಪದ್ಯಾಟ ಕಂಬಳಾಬಿಮಾನಿಗಳ ಕುತೂಹಲ ತಣಿಸುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಯಿತು. ಓಟಗಾರರಿಗೆ ಅತೀ ಹೆಚ್ಚು ಸಲ ಒಂದೇ ಕೋಣ ಜೋಡಿ ಜೊತೆ ಓಡುವ ಅವಕಾಶ ಅವರ ಸಾಮರ್ಥ್ಯ ತೋರ್ಪಡಿಕೆಯ ವೇದಿಕೆಯಾಯಿತು.

ಹಗ್ಗ ಹಿರಿಯವಿಭಾಗದ ಲೀಗ್ ನಲ್ಲಿ 16 ಜೊತೆ ಕೋಣಗಳ ಪೈಕಿ ನಂದಳಿಕೆ ಶ್ರೀಕಾಂತ್ ಭಟ್, ಅತ್ತೂರು ಗುಂಡ್ಯಡ್ಕ ಬೋಳ ಶ್ರೀನಿವಾಸ ಕಾಮತ್‌ರ -ಎ, ಮಾಳ ಆನಂದ ನಿಲಯ ಶೇಖರ ಶೆಟ್ಟಿ ಮತ್ತು ಕಾರ್ಕಳ ಜೀವನ್‌ದಾಸ್ ಅಡ್ಯಂತಾಯರ ಬಿ ಜೋಡಿ ಕೋಣಗಳು ಮೂರು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ವಿಜೇತರಾಗಿ 15 ಪಾಯಿಂಟ್ ಮತ್ತು ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್ ಎ ಮತ್ತು ಬಿ, ಫಲಿಮಾರು ಅಗ್ಗದಕಳಿಯ ಗಣೇಶ ದೇವಾಡಿಗ ಮತ್ತು ಅತ್ತೂರು ಗುಂಡ್ಯಡ್ಕ ಶ್ರೀನಿವಾಸ ಕಾಮತ್ ಅವರ ಕೋಣಗಳು ಲೀಗ್‌ನಲ್ಲಿ ಸೆಣಸಿ 8 ರ ಹಂತಕ್ಕೆ ಬಂದವು. ಬಳಿಕದ ಹಂತಗಳಲ್ಲಿ ಹಿಂದಿನ ಸಾಮಾನ್ಯ ಮಾದರಿಗಳನ್ನೇ ಅನುಸರಿಸಲಾಯಿತು.

karkala_ajekar_kambla_6 karkala_ajekar_kambla_7 karkala_ajekar_kambla_8ನೇಗಿಲು ಹಿರಿಯ ವಿಭಾಗದ 14 ಜೊತೆ ಕೋಣಗಳ ಪೈಕಿ ಬೋಳದಗುತ್ತು, ಪಣೋಲಿ ಬೈಲು, ನೀರೆ ಭದ್ರಗುತ್ತು, ಮೋರ್ಲ ಗಿರೀಶ್ ಆಳ್ವ, ರೆಂಜಾಳ ಬೈಲಂಗಡಿ, ಕುಂಡಡ್ಕ ಮುರವಾಳ, ಇರುವೈಲು ಪಾಣಿಲ, ಪನೋಳಿ ಬೈಲು ಬಂಡಾರ ಮನೆ ಕೋಣಗಳು ೮ ರ ಹಂತಕ್ಕೆ ತೇರ್ಗಡೆಯಾದವು.ವರ್ಷದ ಮೊದಲ ಕಂಬಳದಲ್ಲಿ 3 ಜೊತೆ ಕನಹಲಗೆ ಕೋಣಗಳು ಭಾಗವಹಿಸಿದರೂ ಬಹುಮಾನ ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ.

ಅಡ್ಡ ಹಲಗೆ ವಿಭಾಗದಲ್ಲಿ ಹಂಕರಜಾಲು ಭೀಮಣ್ಣ ಶೆಟ್ಟಿ ಅವರ ಎ-ಬಿ ಕೋಣಗಳು ಮೊದಲೆರಡು ಸ್ಥಾನ ಪಡೆದವು.

karkala_ajekar_kambla_9 karkala_ajekar_kambla_10 karkala_ajekar_kambla_11

ಹಗ್ಗ ಹಿರಿಯ ವಿಭಾಗ: ನಂದಳಿಕೆ ಶ್ರೀಕಾಂತ್ ಭಟ್ ಪ್ರಥಮ ( ಓಡಿಸಿದವರು: ನಕ್ರೆ ಜಯಕರ ಮಡಿವಾಳ) ಮತ್ತು ಕಾರ್ಕಳ ಜೀವನ್ ದಾಸ್ ಅಡ್ಯಂತಾಯ (ಓ:ಹೊಕ್ಕಾಡಿಗೋಳಿ ಸುರೇಶ ಶೆಟ್ಟಿ) ದ್ವಿತೀಯ ಸ್ಥಾನ ಪಡೆದರು.ಅತ್ತೂರು ಗುಂಡ್ಯಡ್ಕ ಬೋಳ ಶ್ರೀನಿವಾಸ ಕಾಮತ್ ಮತ್ತು ಮಾಳ ಆನಂದ ನಿಲಯ ಶೇಖರ ಎ.ಶೆಟ್ಟಿ ಸೆಮಿ ಪೈನಲ್ ತಲುಪಿದ್ದರು.

ಹಗ್ಗ ಕಿರಿಯ ವಿಭಾಗ: ಕಾಂತಾವರ ಬಾಂದೊಟ್ಟು ನಿಕಿಲ್ ಮೋಕ್ಷಿ ಕುಮಾರ್ ( ಓ: ಗುರುಪ್ರಸಾದ್ ಕೋಟ್ಯಾನ್) ಪ್ರಥಮ ಮತ್ತು ಜಪ್ಪು ಮುನ್ಕು ತೋಟಗುತ್ತು ಅನೀತ್ ಶೆಟ್ಟಿ (ಓ: ಮಾರ್ನಾಡ್ ರಾಜೇಶ) ದ್ವಿತೀಯ ಪಡುಬಿದಿರೆ ಪಾದೆಬೆಟ್ಟು ಅನ್ವಿ ಶೆಟ್ಟಿ ಮತ್ತು ಕುಕ್ಕುಂದೂರು ನಂದಿಕುಮೇರ್ ಯುವರಾಜ್ ಶೆಟ್ಟಿ ಕೋಣಗಳು ಸೆಮಿಫೈನಲ್ ತಲುಪಿದ್ದರು.

karkala_ajekar_kambla_12 karkala_ajekar_kambla_13 karkala_ajekar_kambla_14

ನೇಗಿಲು ಕಿರಿಯ ವಿಭಾಗದಲ್ಲಿ ಬೋಳದ ಗುತ್ತು ಸತೀಶ್ ಶೆಟ್ಟಿ ಪ್ರಥಮ ಮತ್ತು ರೆಂಜಾಳ ಕುದ್ರಾಡಿ ವಿದ್ಯಾನಂದ ಹೆಗ್ಡೆ ದ್ವಿತಿಯ ಸ್ಥಾನ ಪಡೆದರು.

ಮಾರೂರು ಶೀತೋಟ್ಟು ಸುಂದರಿ ಅಣ್ಣಿ ಪೂಜಾರಿ ಮತ್ತು ಬಂಗಾಡಿ ಮಲ್ಲಿಗೆ ಮನೆ ಕಾಸೀಂ ಸಾಹೇಬ್ ಅವರ ಕೋಣಗಳು ಸೆಮಿ ಹಂತದವರೆಗೆ ಸ್ಪರ್ಧೆ ನೀಡಿದ್ದವು.

karkala_ajekar_kambla_15 karkala_ajekar_kambla_16 karkala_ajekar_kambla_17 karkala_ajekar_kambla_18

ನೇಗಿಲು ಹಿರಿಯ ವಿಭಾಗದಲ್ಲಿ ಇರುವೈಲು ಪಾಣಿಲ ಬಾಡ ಪೂಜಾರಿ ( ಓ: ಕೊಳಕೆ ಇವರ್ವತ್ತೂರು ಆನಂದ ) ಪ್ರಥಮ ಮತ್ತು ಬೋಳದ ಗುತ್ತು ಸತೀಶ್ ಶೆಟ್ಟಿ (ಓ: ಹೊಕ್ಕಾಡಿಗೋಳಿ ಸುರೇಶ್ ಶೆಟ್ಟಿ ) ದ್ವಿತೀಯ ಬಹುಮಾನ ಗಳಿಸಿದರು.

ಪನೋಳಿ ಬೈಲು ಬಂಡಾರಮನೆ ನವೀನ್ ಕುಮಾರ್ ಅವರ ಕೋಣಗಳು ಸೆಮಿ ಪೈನಲ್ ತಲುಪಿದ್ದವು.

Write A Comment