ಕರಾವಳಿ

ಉಡುಪಿ ಜಿಲ್ಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ: 23 ಜನರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Pinterest LinkedIn Tumblr

ಉಡುಪಿ: 59ನೇ ಕರ್ನಾಟಕ ರಾಜ್ಯೋತ್ಸವನ್ನು ಉಡುಪಿಯಲ್ಲಿ  ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜಿಲ್ಲೆಯ ಎಮ್‌ಜಿಎಂ ಕ್ರೀಡಾಂಗಣದಲ್ಲಿ  ಏರ್ಡಡಿಸಲಾಗಿರುವ ಸಮಾರಂಭದಲ್ಲಿ ಉಸ್ತುವಾರಿ ಸಚಿವರಾದ ವಿನಯ್‌ಕುಮಾರ್‌ ಸೊರಕೆಯವರು ಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣ ನಡೆಸಿ ಮಾತನಾಡಿದ ಸೊರಕೆ ಉಡುಪಿಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜಿನ ಬೇಡಿಕೆ ಹೆಚ್ಚುತ್ತಿದ್ದು, ಈ  ಹಿನ್ನಲೆಯಲ್ಲಿ ಉಪ್ಪೂರಿನಲ್ಲಿ ಸರಕಾರಿ ಜಾಗವನ್ನು ಗುರುತಿಸಲಾಗಿದೆ. ಶೀಘ್ರವೇ ಸರಕಾರಿ ವುದ್ಯಕೀಯ ಕಾಲೇಜೊಂದನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

UDp_kannada_Rajyotsava (1) UDp_kannada_Rajyotsava (2) UDp_kannada_Rajyotsava UDp_kannada_Rajyotsava (4) UDp_kannada_Rajyotsava (3) UDp_kannada_Rajyotsava (5) UDp_kannada_Rajyotsava (6) UDp_kannada_Rajyotsava (7) Udupi_Kannaa_Rajyotsava (2) Udupi_Kannaa_Rajyotsava (1) Udupi_Kannaa_Rajyotsava (3) Udupi_Kannaa_Rajyotsava (6) Udupi_Kannaa_Rajyotsava (5) Udupi_Kannaa_Rajyotsava (4) Udupi_Kannaa_Rajyotsava (7) Udupi_Kannaa_Rajyotsava (9) Udupi_Kannaa_Rajyotsava (8)

119 ಎಕ್ರೆ ಸರಕಾರಿ ಜಾಗವನ್ನು ನಿವೇಶನ ರಹಿತರಿಗಾಗಿ ಗುರುತಿಸುವ ಕೆಲಸ ಈಗಾಗಲೇ ನಡೆದಿದ್ದು ನಗರೋತ್ಥಾನ ಯೋಜನೆಯಡಿಯಲ್ಲಿ ವಿವಿಧ ಅಭಿವ್ರಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಇನ್ನಷ್ಟು ಗ್ರಾಮಗಳಿಗೆ ಅಳವಡಿಸುವ ಬಘ್ಗೆ ಚಿಂತನೆ ನಡೆದಿದೆ. 1559.42 ಲಕ್ಷ ರೂ. ಹಣ ಮಂಜುರಾಗಿದ್ದು ಈ  ವೆಚ್ಚದಲ್ಲಿ ಗ್ರಾಮೀಣ ಭಾಗದ ರಸ್ತೆಗಳ ಅಭಿವ್ರದ್ಧಿ ಕಾರ್ಯಕ್ಕೆ ಕೈ ಹಾಕಲಾಗುತ್ತದೆ.

ರಾಜ್ಯ ಸರಕಾರವು ನೌಕರರಿಗಾಗಿ ಭಾಗ್ಯ ಸಂಜೀವಿನಿ ಎಂಬ ನೂತನ ಜಿವಾ ವಿಮಾ ಸ್ಕೀಮ್ ಜಾರಿಗೆ ತಂದಿದ್ದು ಈ ಯೋಜನೆಯು ಕ್ಯಾನ್ಸರ್ ಒಳಗೊಂಡಂತೆ ೭ ಕಾಯಿಲೆಗಳು ಹಾಗೂ ೪೦೦ಕ್ಕೂ ಅಧಿಕ ವಿವಿಧ ಚಿಕಿತ್ಸೆಗಳನ್ನು ನೀಡುವುದಕ್ಕೆ ಅನುಕೂಲಕಾರಿಯಾಗಲಿದೆ.  ರಾಜ್ಯಾದ್ಯಂತ ೧೪೭ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಲಭ್ಯವಾಗಲಿದೆ ಎಂದ ಅವರು ಉಡುಪಿ ಜಿಲ್ಲೆಗೆ ನೀರಿನ ಕೊರತೆ ನೀಗಿಸುವ ಸಲುವಾಗಿ ವೆಂಟೆಡ್ ಡ್ಯಾಮ್ ನಿರ್ಮಿಸುವ ಕುರಿತು ಯೋಜನೆಯಿದೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೨೩ ಮಂದಿ ಸಾಧಕರನ್ನುನ್ಮಾನಿಸಿ ಗೌರವಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮಕ್ಕೂ ಮೊದಲು ನಡೆದ ಪುರಮೆರವಣಿಗೆಯಲ್ಲಿ ವಿವಿಧ ಶಾಲೆಯ ಹಲವು ವಿದ್ಯಾರ್ಥಿಗಳು ಪಾಲ್ಘೊಂಡಿದರು.

ಉಡುಪಿ ಶಾಸಕ ಪ್ರಮೋದ್ ಮದ್ವರಾಜ್, ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಪ್ರಭಾರ ಜಿಲ್ಲಾಧಿಕಾರಿ ಕುಮಾರ್ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂಡ್ರ ಪ್ರಸಾದ್,  ಎಸ್ಪಿ ಸಂತೋಷ್ ಕುಮಾರ್,  ಜಿ .ಪಂ. ಅಧ್ಯಕ್ಷೆ ಸವಿತಾ ಕೋಟ್ಯಾನ್,  ತಾ.ಪಂ. ಅಧ್ಯಕ್ಷೆ ಸುನಿತಾ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರು: ಮುಳುಗುತಜ್ಞ ಮಂಜುನಾಥ ನಾಯ್ಕ್, ಕಣ್ನೇರಿ, ಕುಂದಾಪುರ ತಾಲೂಕು( ಸಮಾಜ ಸೇವೆ ಕ್ಷೇತ್ರ), ವೆರೋನಿಕಾ ಕರ್ನೆಲಿಯೋ ಕೆಮ್ಮಣ್ಣು ಉಡುಪಿ (ಸಮಾಜ ಸೇವೆ), ಹಾಜಿ ಕೆ.ಅಬೂಬಕ್ಕರ್ ಕಬ್ಯಾಡಿ ಪರ್ಕಳ (ಸಮಾಜ ಸೇವೆ), ಗಣೇಶ್ ವಿ.ಕೊರಗ, ಕುಂದಾಪುರ(ಸಮಾಜ ಸೇವೆ ), ಡಾ.ಎಚ್. ಶಾಂತರಾಮ್, ಮಣಿಪಾಲ (ಶಿಕ್ಷಣ), ಮ್ಯಾಥ್ಯೂ ಸಿ. ನೀನಾನ್ ಬ್ರಹ್ಮಾವರ(ಶಿಕ್ಷಣ), ಹಾಜಿ ಮಾಸ್ಟರ್ ಮೊಹಮೂದ್ ಕೋಡಿ ಕುಂದಾಪುರ (ಶಿಕ್ಷಣ), ಬಿ.ಬಿ. ಶೆಟ್ಟಿಗಾರ್ ಉಡುಪಿ(ಪತ್ರಿಕೋದ್ಯಮ), ಲಕ್ಷ್ಮಣ ಸುವರ್ಣ, ರೂಪಂ ಸ್ಟುಡಿಯೋ ಕಾಪು(ಛಾಯಾಚಿತ್ರ ಗ್ರಾಹಕ), ನಾಗ ಶಿರೂರು,ಕರಂಗಲ್ಪಾಡಿ ಮಂಗಳೂರು (ಸಾಹಿತ್ಯ), ಅನುರಾಧ ಎ.ಪಿ. ಮಯ್ಯ(ಸಂಗೀತ), ಪವನ ಬಿ. ಆಚಾರ್ ಮಣಿಪಾಲ( ಸಂಗೀತ ಕ್ಷೇತ್ರ), ರಾಘವ ಶೇರಿಗಾರ, ಅಲೆವೂರು(ಸ್ಯಾಕ್ಸೋಫೋನ್), ರಾಘವೇಂದ್ರ ಮಯ್ಯ ಹಾಲಾಡಿ ಕುಂದಾಪುರ(ಯಕ್ಷಗಾನ ಕ್ಷೇತ್ರ), ಕ್ರಿಯೇಟಿವ್ ಯೂತ್ ಕ್ಲಬ್, ಕೊಕ್ಕರ್ಣೆ, ಉಡುಪಿ (ಸಂಘ ಸಂಸ್ಥೆ).

ಪ್ರೊ.ಎ.ರಾಜಾ ಎಂ.ಎಸ್., ನ್ಯೂರೋ ಸರ್ಜನ್ ಆದರ್ಶ ಆಸ್ಪತ್ರೆ, ಉಡುಪಿ(ವೈದ್ಯಕೀಯ), ಪೆರ್ಡೂರು ರತ್ನಾಕರ ಕಲ್ಯಾಣಿ, ಕುಂಜಿಬೆಟ್ಟು ಉಡುಪಿ, (ರಂಗಭೂಮಿ ಕ್ಷೇತ್ರ), ಸುನಿಲ್ ಕುಮಾರ್ ನೆಲ್ಲಿಗುಡ್ಡೆ, ಕಾರ್ಕಳ(ರಂಗಭೂಮಿ ಕ್ಷೇತ್ರ), ಕೆ.ಜಯಕಷ್ಣ ಹೆಗ್ಡೆ, ಕಾರ್ಕಳ, (ಕ್ರೀಡೆ ಕ್ಷೇತ್ರ), ಚಂದ್ರಯ್ಯ ಆಚಾರ್ಯ, ಕಳಿ ಆಲೂರು ಗ್ರಾಮ ಕುಂದಾಪುರ, (ಶಿಲ್ಪಕಲೆ ಕ್ಷೇತ್ರ), ಭಾಸ್ಕರ್ ಶೆಟ್ಟಿ, ಕಷಿ ಕುಟೀರ ಮಣೂರು-ಪಡುಕೆರೆ ಗ್ರಾಮ ಕೋಟತಟ್ಟು, ಉಡುಪಿ (ಕಷಿ). ಬೊಗ್ಗು ಪರವ, ಮೂಡುಬೆಳ್ಳೆ ಉಡುಪಿ ( ದೈವನರ್ತನ), ಮನೋಹರ ಎಸ್.ಕುಂದರ್,(ಯಕ್ಷಗಾನ ಛಾಯಾಚಿತ್ರಗ್ರಾಹಕ ಕ್ಷೇತ್ರ).

Write A Comment