ಕರಾವಳಿ

ಕುಂದಾಪುರ: 59 ನೇ ಕನ್ನಡ ರಾಜ್ಯೋತ್ಸವ; ಉಪವಿಭಾಗಾಧಿಕಾರಿ ಚಾರುಲತಾ ಸೋಮಲ್ ಅವರಿಂದ ಧ್ವಜಾರೋಹಣ

Pinterest LinkedIn Tumblr

ಕುಂದಾಪುರ: 59ನೇ ಕನ್ನಡ ರಾಜ್ಯೋತ್ಸವನ್ನು ಕುಂದಾಪುರ ತಾಲೂಕಿನ ಗಾಂಧಿ ಮೈದಾನದಲ್ಲಿ ಶನಿವಾರ ಬೆಳಿಗ್ಗೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರಾದ ಚಾರುಲತಾ ಸೋಮಲ್ ಅವರು ಧ್ವಜಾರೋಹಣಗೈಯುವ ಮೂಲಕ ಕನ್ನಡ ರಾಜ್ಯೋತ್ಸವ ಸಂದೇಶವನ್ನು ಹೇಳಿದರು.

Kundapura_kannada_Rajyotsava (26) Kundapura_kannada_Rajyotsava (2) Kundapura_kannada_Rajyotsava (3) Kundapura_kannada_Rajyotsava (25) Kundapura_kannada_Rajyotsava (24) Kundapura_kannada_Rajyotsava (27) Kundapura_kannada_Rajyotsava (30) Kundapura_kannada_Rajyotsava (29) Kundapura_kannada_Rajyotsava (28) Kundapura_kannada_Rajyotsava (22) Kundapura_kannada_Rajyotsava (20) Kundapura_kannada_Rajyotsava (21) Kundapura_kannada_Rajyotsava (19) Kundapura_kannada_Rajyotsava (23) Kundapura_kannada_Rajyotsava (12) Kundapura_kannada_Rajyotsava (10) Kundapura_kannada_Rajyotsava (7) Kundapura_kannada_Rajyotsava (8) Kundapura_kannada_Rajyotsava (9) Kundapura_kannada_Rajyotsava (11) Kundapura_kannada_Rajyotsava (14) Kundapura_kannada_Rajyotsava (5) Kundapura_kannada_Rajyotsava (6) Kundapura_kannada_Rajyotsava (4) Kundapura_kannada_Rajyotsava (1) Kundapura_kannada_Rajyotsava (13) Kundapura_kannada_Rajyotsava (15) Kundapura_kannada_Rajyotsava (16) Kundapura_kannada_Rajyotsava (18)

ಈ ಸಂದರ್ಭ ಮಾತನಾಡಿದ ಅವರು ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯ ಎಂದು ಮಾತನ್ನು ಆರಂಭಿಸಿದ ಅವರು ವಿಶಾಲ ಕಡಲು, ಗಿರಿ-ಶ್ರಂಗಗಳನ್ನು, ಹಚ್ಚ ಹಸಿರಿನ ಸೊಬಗನ್ನು ಹೊಂದುರಿವ ಈ ನೆಲ ಪಾವಿತ್ರ್ಯವಾದುದು. ಕನ್ನಡ ಭಾಷೆಯನ್ನು ಉಳಿಸಿ ಬೆಲೆಸುವ ಮಹತ್ತರ ಜವಬ್ದಾರಿ ನಮ್ಮೆಲ್ಲರದ್ದು. ನಮ್ಮ ತಾಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ೬ ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಚಾರ. ಪ್ರಶಸ್ತಿಗೆ ಭಾಜಕರಾದ ಎಲ್ಲರಿಗೂ ಅಭಿನಂದನೆ. ಈ ಸಂದರ್ಭದಲ್ಲಿ ಎಲ್ಲಾ ಜಾತಿ ಅಂತಸ್ತನ್ನು ಮೀರಿ ಕನ್ನಡ ನೆಲದಲ್ಲಿ ವಾಸಿಸುವ ಎಲ್ಲರ ಏಳಿಗೆಯ ನಮ್ಮ ಗುರಿಯೆಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಎಲ್ಲರೂ ಶ್ರಮಿಸೋಣ ಎಂದರು.

ಈ ಸಂದರ್ಭದಲ್ಲಿ ಪೊಲೀಸರು, ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಕಾರ್ಯಕ್ರಮ ನಡೆಯಿತು. ಅಲ್ಲದೇ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನೆರೆದ ಜನರನ್ನು ರಂಜಿಸಿತು.

ಕುಂದಾಪುರ ತಹಶಿಲ್ದಾರ್ ಗಾಯತ್ರಿ ನಾಯಕ್, ಬೈಂದೂರು ಶಾಸಕ ಗೋಪಾಲ ಪೂಜಾರಿ, ಕುಂದಾಪುರ ಪುರಸಭಾಧ್ಯಕ್ಷೆ ಕಲಾವತಿ ಯು.ಎಸ್., ಕುಂದಾಪುರ ಡಿವೈ‌ಎಸ್ಪಿ ಸಿ.ಬಿ. ಪಾಟೀಲ್, ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಟಿ. ಶ್ರೀಯಾನ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷ ಭಾಸ್ಕರ ಬಿಲ್ಲವ ಉಪಸ್ಥಿತರಿದ್ದರು.

Write A Comment