ಕರಾವಳಿ

ಉಡುಪಿ: ಬಾರಿನಲ್ಲಿ ಕೆಲಸ ಮಾಡುತ್ತಿದ್ದ ಬಾಲಕಾರ್ಮಿಕನ ರಕ್ಷಣೆ

Pinterest LinkedIn Tumblr
ಉಡುಪಿ: ಸಾರ್ವಜನಿಕ ದೂರಿನಂತೆ ಸಾಸ್ತಾನದ ಮಧುರಾ ಬಾರ್ ಆಂಡ್ ರೆಸ್ಟೋರೆಂಟ್‌ನಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿರುವ ಸುಮಾರು 13 ವರ್ಷ ಪ್ರಾಯದ ಉತ್ತರ ಪ್ರದೇಶ ಮೂಲದ ಚರಣ್ (ಹೆಸರು ಬದಲಿಸಿದೆ)ನನ್ನು ಬುಧವಾರ ಕೆಲಸದಿಂದ ಮುಕ್ತಿಗೊಳಿಸಿ ಕೆದೂರಿನ ಬಾಲ ಕಾರ್ಮಿಕ ವಿಶೇಷ ವಸತಿ ಶಾಲೆ ಸ್ಪೂರ್ತಿಧಾಮದಲ್ಲಿ ಪುನರ್ವಸತಿಗಾಗಿ ದಾಖಲಿಸಲಾಗಿದೆ.
udp_ child labour_rakshane. (2) udp_ child labour_rakshane. (3) udp_ child labour_rakshane. udp_ child labour_rakshane. (1) udp_ child labour_rakshane. (4)
ಕಾರ್‍ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಎಚ್.ಪಿ. ಜ್ಞಾನೇಶ್, ಉಡುಪಿ 2ನೇ ವೃತ್ತದ ಕಾರ್ಮಿಕ ನಿರೀಕ್ಷಕ ಜೀವನ್ ಕುಮಾರ್, ಕುಂದಾಪುರದ ಕಾರ್ಮಿಕ ನಿರೀಕ್ಷಕ ಸತ್ಯನಾರಾಯಣ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಪ್ರಭಾಕರ್ ಆಚಾರ್, ಸ್ಪೂರ್ತಿಧಾಮದ ಮುಖ್ಯ ಕಾರ್ಯ ನಿರ್ವಾಹಕ ಡಾ.ಕೇಶವ ಕೋಟೇಶ್ವರ, ಕೋಟ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಗೋಪಾಲ್, ರವೀಂದ್ರ ಎಚ್. ಭಾಗವಹಿಸಿದ್ದರು.

Write A Comment