ಕರಾವಳಿ

13.72 ಕೋ.ರೂ. ವೆಚ್ಚದಲ್ಲಿ ದ.ಕ.ದ 5 ಬೀಚ್‌ಗಳ ಅಭಿವೃದ್ಧಿ : ಜಿಲ್ಲಾಧಿಕಾರಿ

Pinterest LinkedIn Tumblr

DC_MEET_PICS

ಮಂಗಳೂರು, ಅ.29: ಕೇಂದ್ರ ಸರಕಾರದ ವಿಶೇಷ ಅನುದಾನದಡಿ ದ.ಕ. ಜಿಲ್ಲೆಯ 5 ಬೀಚ್‌ಗಳನ್ನು ಪ್ರಥಮ ಹಂತದಲ್ಲಿ ಸುಮಾರು 13.72 ಕೋಟಿ ರೂ. ವೆಚ್ಚದಲ್ಲಿ ವಿಶೇಷ ಮೂಲಭೂತ ಸೌಲಭ್ಯಗಳು, ಭದ್ರತಾ ವ್ಯವಸ್ಥೆಗಳೊಂದಿಗೆ ಅಭಿವೃದ್ಧಿಪಡಿಸ ಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಇಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದ.ಕ.ದ 5, ಉಡುಪಿಯ 6 ಹಾಗೂ ಉತ್ತರ ಕನ್ನಡದ 12 ಬೀಚ್‌ಗಳನ್ನು ಅಭಿವೃದ್ಧಿಗೊಳಿಸಲು ಕೇಂದ್ರ ಸರಕಾರವು ಒಟ್ಟು 50 ಕೋ.ರೂ.ಗಳ ವಿಶೇಷ ಅನುದಾನವನ್ನು ಮಂಜೂರು ಮಾಡಿದೆ. ಅದರಲ್ಲಿ ದ.ಕ. ಜಿಲ್ಲೆಗೆ 13.72 ಕೋ.ರೂ., ಉಡುಪಿಗೆ 9.13 ಕೋ.ರೂ. ಹಾಗೂ ಉತ್ತರ ಕನ್ನಡಕ್ಕೆ 32.36 ಕೋ.ರೂ. ಮಂಜೂರಾಗಿದೆ ಎಂದರು.

ದ.ಕ. ಜಿಲ್ಲೆಗೆ ಮಂಜೂರಾಗಿರುವ 13.72 ಕೋ.ರೂ. ವೆಚ್ಚದಲ್ಲಿ ಪ್ರಥಮ ಹಂತವಾಗಿ ಐದು ಬೀಚ್‌ಗಳಾದ ಸೋಮೇಶ್ವರ, ಉಳ್ಳಾಲ, ಸುರತ್ಕಲ್, ತಲಪಾಡಿ ಹಾಗೂ ಸುಲ್ತಾನ್ ಬತ್ತೇರಿಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಸಂಸ್ಥೆ(ಕೆಆರ್‌ಐಡಿಎಲ್)ಯ ಸುಪರಿಂಟೆಂಡಿಂಗ್ ಎಂಜಿನಿಯರ್ ಟಿ.ಎಸ್.ಕಲದಗಿ ಮುಂದಿನ 6 ತಿಂಗಳೊಳಗೆ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣ ಗೊಳಿಸುವುದಾಗಿ ಹೇಳಿದರು.

ಯೋಜನೆಗಳ ಅನುಷ್ಠಾನದ ಕುರಿತಂತೆ ಸಂಬಂಧ ಪಟ್ಟ ಅಧಿಕಾರಿ ಗಳು ಹಾಗೂ ಬೀಚ್ ಅಭಿವೃದ್ಧಿ ಘಟಕಗಳ ಮುಖಂಡರ ಉಪಸ್ಥಿತಿ ಯಲ್ಲಿ ಸಲಹೆ ಸೂಚನೆಗಳನ್ನು ಕ್ರೋಡೀ ಕರಿಸಲಾಯಿತು. ಅಭಿವೃದ್ಧಿ ಕಾಮಗಾರಿಗಳಡಿ ಬೀಚ್‌ಗಳಲ್ಲಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ನಿಟ್ಟಿನಲ್ಲಿ ಅತ್ಯುತ್ತಮ ಪಾರ್ಕಿಂಗ್ ವ್ಯವಸ್ಥೆ, ತಂಗುಧಾಮ, ಆಹಾರ ವ್ಯವಸ್ಥೆ, ತ್ಯಾಜ್ಯ ನಿರ್ವಹಣೆ, ಪಾದಚಾರಿಗಳಿಗೆ ಆಸನ ವ್ಯವಸ್ಥೆಗಳನ್ನು ಅಳವಡಿಸುವ ಕುರಿತು ಚರ್ಚೆ ನಡೆಯಿತು.

ಉಳ್ಳಾಲ ಬೀಚ್‌ನಲ್ಲಿ ಪ್ಲೇ ಏರಿಯಾ ರಚಿಸಿ :

ಉಳ್ಳಾಲ ಬೀಚ್‌ಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರು ಕುಟುಂಬ ಸಮೇತರಾಗಿ ಮಕ್ಕಳು ಮರಿಗಳೊಂದಿಗೆ ಬರುವುದರಿಂದ ಅಲ್ಲಿ ಕುಳಿತುಕೊಳ್ಳಲು ಆಸನಗಳ ಅಳವಡಿಕೆ ಅಥವಾ ನಡೆದಾಡಲು ದಾರಿಯನ್ನು ವ್ಯವಸ್ಥೆ ಮಾಡುವ ಬದಲು ಮಕ್ಕಳ ಆಟದ ಪ್ರದೇಶವನ್ನು ಅಭಿವೃದ್ಧಿಪಡಿಸುವುದು ಉತ್ತಮ ಎಂದು ದ.ಕ. ಜಿ.ಪಂ. ಸಿಇಒ ತುಳಸಿ ಮದ್ದಿನೇನಿ ಅಭಿಪ್ರಾಯಿಸಿದರು.

ಪಾರ್ಕಿಂಗ್ ವ್ಯವಸ್ಥೆ, ಸ್ವಚ್ಛತಾ ಯಂತ್ರಗಳಿಗೆ ಪ್ರಮುಖ ಆದ್ಯತೆ ನೀಡಿ :

ಸುರತ್ಕಲ್- ಪಣಂಬೂರಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಅತ್ಯಗತ್ಯವಾಗಿದ್ದು, ಈ ಬಗ್ಗೆ ಈ ಹಿಂದೆ ಚರ್ಚೆ ನಡೆದಿದ್ದರೂ ಯಾವುದೇ ಪ್ರಗತಿಯಾಗಿಲ್ಲ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಜಿ.ಪಂ. ಸಿಇಒ ತುಳಸಿ ಮದ್ದಿನೇನಿ ಅಸಮಾಧಾನ ವ್ಯಕ್ತಪಡಿಸಿದರು.

ಸುರತ್ಕಲ್ ಬೀಚ್‌ನಲ್ಲಿ ಲೈಫ್‌ಗಾರ್ಡ್ ಕಡ್ಡಾಯ. ಸುಲ್ತಾನ್ ಬತ್ತೇರಿ ಯಲ್ಲಿ ಬಾರ್ಜ್ ಲ್ಯಾಂಡಿಂಗ್ ಮೂಲಕ ಪ್ರವಾಸಿಗರು ತಮ್ಮ ವಾಹನಗಳನ್ನು ಒಂದು ತೀರದಿಂದ ಮತ್ತೊಂದು ತೀರಕ್ಕೆ ಕೊಂಡೊಯ್ದು ವಿಹಾರಕ್ಕೆ ಅನುಕೂಲ ಕಲ್ಪಿಸಿದರೆ ಉತ್ತಮ ಎಂದು ತುಳಸಿ ಮದ್ದಿನೇನಿ ಸಲಹೆ ನೀಡಿದರು. ಬೀಚ್‌ಗಳಲ್ಲಿ ಹೈ ಮಾಸ್ಟ್ ದೀಪಗಳ ಬದಲು ಫೆಡ್ ಲೈಟ್ ವ್ಯವಸ್ಥೆಯನ್ನು ಒದಗಿಸಿದರೆ ಸೂಕ್ತ ಎಂದು ಸಲಹೆ ನೀಡಿದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಡಾ.ಜಗದೀಶ್, ಬೀಚ್‌ಗಳ ವೈವಿಧ್ಯತೆ ಹಾಗೂ ವಿಶೇಷತೆಗೆ ತಕ್ಕುದಾದ ರೀತಿಯಲ್ಲಿ ಅಭಿವೃದ್ಧಿ ಪಡಿಸಿದರೆ ಸೂಕ್ತ ಎಂದು ಅಭಿಪ್ರಾಯಿಸಿದರು.

ರೆಸ್ಕೂ ಬೋಟ್‌ಗಿಂತ ಜೆಟ್ ಸ್ಕೈ ಉತ್ತಮ:

ದೋಣಿ (ರೆಸ್ಕೂ ಬೋಟ್) ಬದಲು ಜೆಟ್ ಸ್ಕೈ ಮೂಲಕ ಕ್ಷಿಪ್ರವಾಗಿ ಸಮುದ್ರದಲ್ಲಿ ರಕ್ಷಣಾ ಕಾರ್ಯವನ್ನು ಕಡಿಮೆ ಮಾನವ ಶಕ್ತಿಯ ಬಳಕೆಯೊಂದಿಗೆ ಮಾಡಲು ಸಾಧ್ಯ. ಮಾತ್ರವಲ್ಲದೆ ರೆಸ್ಕೂ ಬೋಟ್‌ಗೆ ತಲಾ 30 ಲಕ್ಷ ರೂ. ವೆಚ್ಚ ತಗಲಿದರೆ, ಜೆಟ್ ಸ್ಕೈ ಸುಮಾರು 12 ಲಕ್ಷ ರೂ. ವೌಲ್ಯದಲ್ಲಿ ಲಭ್ಯವಾಗಲಿದೆ ಎಂದು ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿಯ ಯತೀಶ್ ಬೈಕಂಪಾಡಿ ಸಲಹೆ ನೀಡಿದರು.

ಪ್ರಸ್ತುತ ಮಂಜೂರು ಆಗಿರುವ ಹಣಕಾಸಿನ ಮಿತಿಯೊಳಗೆ ಪ್ರಸ್ತಾವಿತ ಅಭಿವೃದ್ಧಿ ಯೋಜನೆಗಳಲ್ಲಿ ಸಭೆಯಲ್ಲಿ ವ್ಯಕ್ತವಾದ ಸಲಹೆ, ಸೂಚನೆಗಳಂತೆ ಬದಲಾವಣೆ ಮಾಡಿಕೊಂಡು ಅಭಿ ವೃದ್ಧಿಗೆ ಮುಂದಾಗುವಂತೆ ಪ್ರವಾಸೋ ದ್ಯಮ ಇಲಾಖೆಗೆ ಸೂಚಿಸಿದ ಜಿಲ್ಲಾ ಧಿಕಾರಿ ಎ.ಬಿ.ಇಬ್ರಾಹೀಂ, ಟೆಂಡರ್ ಆಹ್ವಾನಿಸಿ ನವೆಂಬರ್‌ನಲ್ಲಿ ಕೆಲಸ ಆರಂಭಿ ಸಬೇಕೆಂದು ನಿರ್ದೇಶನ ನೀಡಿದರು. ಸಭೆಯಲ್ಲಿ ಬೀಚ್ ಅಭಿವೃದ್ಧಿ ಯೋಜನೆಗಳ ಸಲಹೆಗಾರ ಸ್ನೇಹ್‌ರೂಝ್ ಡೇವಿಡ್ ಕರಡು ಯೋಜ ನೆಗಳ ಬಗ್ಗೆ ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿವೃತ್ತ ನಿರ್ದೇಶಕ ಎಂ.ಆರ್.ವಾಸುದೇವ್ ಉಪಸ್ಥಿತರಿದ್ದು ಸಲಹೆ ನೀಡಿದರು.

Write A Comment