ಕರಾವಳಿ

`ತುಳುವೆರ ಪರ್ಬ’ ಪೂರ್ವ ಸಿದ್ದತೆ ಸಭೆ

Pinterest LinkedIn Tumblr

Tulu_Meet_adyar_1

ಮಂಗಳೂರು: ಅಖಿಲ ಭಾರತ ತುಳು ಒಕ್ಕೂಟದ ವತಿಯಿಂದ ಡಿ.12 ರಿಂದ 14ರವರೆಗೆ ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ನಡೆಯಲಿ ರುವ ವಿಶ್ವ ತುಳುವೆರೆ ಪರ್ಬದ ಪೂರ್ವ ಸಿದ್ದತೆಯ ಉದ್ದೇಶದ ತುಳು ಒಕ್ಕೂಟದ ಸದಸ್ಯ ಸಂಸ್ಥೆಗಳ ಪದಾಧಿ ಕಾರಿಗಳೊಂದಿಗೆ ಸಮಾಲೋಚನೆ ಸಭೆ ಅಡ್ಯಾರ್ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಿತು.

ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ತುಳುವೆರೆ ಪರ್ಬದ ಸ್ವಾಗತ ಸಮಿತಿಯ ಅಧ್ಯಕ್ಷ ಮುಂಬೈಯ ಉದ್ಯಮಿ ಐಕಳ ಹರೀಶ್ ಶೆಟ್ಟಿ, ಗೌರವ ಅಧ್ಯಕ್ಷ ಅಡ್ಯಾರ್ ಮಹಾಬಲ ಶೆಟ್ಟಿ, ತುಳುವೆರೆ ಪರ್ಬದ ದುಬೈ ಸಮಿತಿಯ ಸಂಚಾಲಕ ಸುಧಾಕರ್ ಆಳ್ವಾ, ಮುಂಬೈ ಸಮಿತಿಯ ಅಧ್ಯಕ್ಷ ಜಯ ಕೃಷ್ಣ ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ. ಪದಾಧಿಕಾರಿಗಳಾದ ಎ,ಸಿ, ಭಂಡಾರಿ, ದಾಮೋದರ ನಿಸರ್ಗ, ಎಸ್.ಆರ್. ಹೆಗ್ಡೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಏಳು ಲಕ್ಷ ಪುಂಡಿಪಣವು ಕೂಪನ್‌ಗಳನ್ನು ವಿತರಿಸಲಾಯಿತು. ತುಳುವೆರೆ ಪರ್ಬ ಕಾರ್ಯ ಕ್ರಮದ ಪ್ರಧಾನ ಸಂಚಾಲಕ ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮದ ಸ್ವರೂಪದ ಚಿತ್ರಣ ನೀಡಿದರು.

ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಸುಧಾಕರ್ ರಾವ್ ಪೇಜಾವರವರು ತುಳುವೆರೈಸಿರಿ ಸ್ಪರ್ಧಾ ಕಾರ್ಯಕ್ರಮ ಗಳ ಮಾಹಿತಿ ನೀಡಿದರು. ಸಾಂಸ್ಕೃ ತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ತಂಡದವರು ಅ.31ರ ಒಳಗೆ ಹೆಸರು ನೋಂದಾಯಿಸಲು ಕೋರಲಾಯಿತು.

ಗೊಬ್ಬುದ ಕಲಾ ಕ್ರೀಡೋತ್ಸವ ಸಮಿತಿಯ ಅಧ್ಯಕ್ಷ ವಿಜಯನಾಥ ವಿಠ್ಠಲ ಶೆಟ್ಟಿ ಮಾತನಾಡಿ, ತುಳು ನಾಡಿನ ಕ್ರೀಡೋತ್ಸವಗಳಲ್ಲಿ ಭಾಗವಹಿಸುವ ತುಳುವರು ತುಳುನಾಡಿನ ಸಾಂಪ್ರದಾ ಯಿಕ ತೊಡುಗೆಗಳಲ್ಲಿ ಭಾಗವಹಿಸಲು ವಿನಂತಿಸಿದರು. ಆರ್ಥಿಕ ಸಮಿತಿಯ ಸಂಚಾಲಕ ತಾರಾನಾಥ ಶೆಟ್ಟಿ ಬೋಳಾರ ಪುಂಡಿಪಣವು ಅಭಿಯಾ ನದ ನೇತೃತ್ವ ವಹಿಸಿದರು.

ಪ್ರಚಾರ ಸಮಿತಿಯ ಸಂಚಾಲಕ ಪ್ರದೀಪ್ ಆಳ್ವಾ ಮಾತನಾಡಿ, ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರಚಾರ ಫಲಕಗಳನ್ನು ಅನಾವರಣ ಗೊಳಿಸುವ ಕಾರ್ಯಕ್ರಮ ಸಂಘಟಿ ಸಲು ತಿಳಿಸಿದರು.

ಸಹ್ಯಾದ್ರಿ ಐಸಿರಿ ಅಂತರ್ ಕಾಲೇಜು ವಿವಿಧ ವಿನೋದಾವಳಿ ಕಾರ್ಯಕ್ರಮದ ಸಂಚಾಲಕಿ ಶ್ರೀಲತಾ ಮಾತನಾಡಿ, ಈ ಕಾರ್ಯಕ್ರಮ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಸಲಾಗುತ್ತಿದೆ. ಪಿಯುಸಿ, ಪದವಿ ಮತ್ತು ವೃತ್ತಿ ಪರ ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.

ಕಾರ್ಯಕ್ರಮದ ಪ್ರಧಾನ ಕಾರ್ಯ ದರ್ಶಿ ನಿಟ್ಟೆ ಶಶಿಧರ ಶೆಟ್ಟಿ, ಸ್ವಾಗತಿಸಿದರು. ದಯಾನಂದ ಕಟೀಲ್ ವಂದಿಸಿದರು ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.

Write A Comment