ಕರಾವಳಿ

ಕುಲಾಲ ಸಂಘ, ಥಾಣೆ- ಕಸಾರ – ಕರ್ಜತ್ ಮತ್ತು ಭಿವಂಡಿ ಸಮಿತಿಯ ಸ್ನೇಹ ಸಮ್ಮಿಲನ

Pinterest LinkedIn Tumblr

ವರದಿ : ಈಶ್ವರ ಎಂ. ಐಲ್ / ಚಿತ್ರ : ದಿನೇಶ್ ಕುಲಾಲ್

Kulal_saga_bomby_1

ಮುಂಬಯಿ : ಕುಲಾಲ ಸಂಘ ಮುಂಬಯಿ ಯ ಥಾಣೆ- ಕಸಾರ – ಕರ್ಜತ್ ಮತ್ತು ಭಿವಂಡಿ ಪರಿಸರದ ಸ್ಥಳೀಯ ಸಮಿತಿಯ 11ನೇ ವಾರ್ಷಿಕ ಸ್ನೇಹ ಸಮ್ಮಿಲನವು ಅ. 26ರಂದು ಕಲ್ಯಾಣ ಜೋಕರ್ ಪ್ಲಾಜಾ ಸಮೀಪದ ಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಗಿರೀಶ್ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ವರ್ಷಂಪ್ರತಿ ಸ್ಥಳೀಯ ಸಮಿತಿಗಳಲ್ಲಿ ಜರಗುವ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳುತ್ತಿದ್ದು ಸಂಘದ ಬೆಳವಣಿಗೆಗೆ ಪೂರಕವಾಗಿದೆ. ಮಂಗಳೂರಿನ ಕುಲಾಲ ಭವನದ ಕನಸು ಸದ್ಯದಲ್ಲೇ ಪೂರ್ಣಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಗಿರೀಶ್ ಸಾಲ್ಯಾನ್ ನುಡಿದರು.  ಉಪಾಧ್ಯಕ್ಷ ದೇವದಾಸ ಕುಲಲ್ ಅವರು ಮಾತನಾಡುತ್ತಾ ನಮ್ಮ ಸಮಾಜ ಹಾಗೂ ಸಂಘದ ಮೇಲೆ ಎಲ್ಲರಿಗೂ ಅಭಿಮಾನವಿರಲಿ ಎಂದರು. ಅಮೂಲ್ಯ ಪತ್ರಿಕೆಯ ಉಪಸಂಪಾದಕ ಮುಂಡ್ಕೂರು ಶಂಕರ್ ವೈ ಮೂಲ್ಯ ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಅಮೂಲ್ಯದ ಸದಸ್ಯರಾಗಬೇಕೆಂದು ವಿನಂತಿಸಿದರು.

ಪ್ರಧಾನ ಕಾರ್ಯದರ್ಶಿ ಡಿ. ಐ. ಮೂಲ್ಯ, ಕೋಶಾಧಿಕಾರಿ ಜಯ ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಬಂಜನ್, ನವಿಮುಂಬಯಿ ಸಮಿತಿಯ ಕಾರ್ಯಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.

Kulal_saga_bomby_2 Kulal_saga_bomby_3 Kulal_saga_bomby_4 Kulal_saga_bomby_5

ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷ ಕೃಷ್ಣ ಎಸ್. ಮೂಲ್ಯ ಸ್ವಾಗತಿಸಿದರು. ವೇದಿಕೆಯಲ್ಲಿ ಉಪ ಕಾರ್ಯಧ್ಯಕ್ಷ ಬಾಬು ಟಿ. ಕುಲಾಲ್, ಸ್ಥಳೀಯ ಸಮಿತಿಯ ಕಾರ್ಯದರ್ಶಿ ಲಕ್ಷ್ಮಣ್ ಸಿ. ಮೂಲ್ಯ, ಸದಾಶಿವ ಜಿ. ಬಂಗೇರ,ಆಶಾ ಕೆ. ಕುಲಾಲ್, ರೇಖಾ ಎ. ಮೂಲ್ಯ, ಕುಶಲಾ ಜಿ. ಬಂಗೇರ, ಉಮಾ ಸಾಲ್ಯಾನ್,  ಡಾ. ನೆಖೇಶ್ ಮೂಲ್ಯ ಮೊದಲಾದವರು ಉಪಸ್ಥಿತರಿದ್ದರು

ಸಮಿತಿಯು ಸಕ್ರಿಯ ಕಾರ್ಯಕರ್ತರಾದ ಲಕ್ಮಣ ಸಿ. ಮೂಲ್ಯ,,  ದೀಪಕ್ ಕೆ. ಮೂಲ್ಯ,, ಸದಾನಂದ ಐ. ಸಾಲ್ಯಾನ್, ಸಾಹಡ್ ದಂಪತಿಯನ್ನು ಸನ್ಮಾನಿಸಲಾಯಿತು. ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಳಿಗೆ ವಿದ್ಯಾರ್ಥಿವೇತನ ಹಾಗು ದತ್ತು ಸ್ವೀಕಾರ ನಡೆಯಿತು.

ಸ್ಥಳೀಯ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ವೇದಿಕೆಯಲ್ಲಿದ್ದ ಅತಿಥಿಗಳನ್ನು ಗೌರವಿಸಿದರು.  ಲಕ್ಷ್ಮಣ್ ಸಿ. ಮೂಲ್ಯ ಕಾರ್ಯಕ್ರಮವನ್ನು ನಿರ್ವಹಿಸಿದ್ದು ಆನಂದ ಬಿ, ಮೂಲ್ಯ ವಂದನಾರ್ಪಣೆಗೈದರು.

ರಂಗೋಲಿ, ಛದ್ಮ ವೇಶ ಸ್ಪರ್ಧೆಗಳು್,  ಸಮೂಹ ನೃತ್ಯ, ಮಹಿಳಾ ಸದಸ್ಯರಿಂದ ವಿವಿಧ ಕಾರ್ಯಕ್ರಮಗಳು ನಡೆಯಿತು.

Write A Comment