ಕರಾವಳಿ

ವಿಶ್ವ ತುಳುವೆರೆ ಪರ್ಬಕ್ಕೆ ಭರದ ಸಿದ್ಧತೆ – ರಮಾನಾಥ ರೈ

Pinterest LinkedIn Tumblr

Tulu_Parbha_Press_1

ಮಂಗಳೂರು : ಅಖಿಲ ಭಾರತ ತುಳು ಒಕ್ಕೂಟ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಜಂಟಿ ಆಶ್ರಯದಲ್ಲಿ ಡಿಸೆಂಬರ್ 12 ರಿಂದ 14ರ ತನಕ ಮೂರು ದಿನಗಳ ಕಾಲ ನಗರದ ಹೊರವಲಯದ ಅಡ್ಯಾರಿನ ಸಹ್ಯಾದ್ರಿ ಇಂಜಿನೀಯರಿಂಗ್ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿರುವ ವಿಶ್ವ ತುಳುವೆರೆ ಪರ್ಬ’ದ ಸಮ್ಮೇಳನಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದೆ ಎಂದು ವಿಶ್ವ ತುಳುವೆರೆ ಪರ್ಬ ಸಮಿತಿಯ ಅಧ್ಯಕ್ಷ, ರಾಜ್ಯ ಅರಣ್ಯ ಖಾತೆ ಸಚಿವ ಬಿ.ರಮಾನಾಥ ರೈ ತಿಳಿಸಿದರು.

Tulu_Parbha_Press_2 Tulu_Parbha_Press_3

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವರು, 2009ರಲ್ಲಿ ನಡೆದ ಚಾರಿತ್ರಿಕ ವಿಶ್ವ ತುಳು ಸಮ್ಮೇಳನದ ರೂವಾರಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಗೌರವಾಧ್ಯಕ್ಷತೆ ಮತ್ತು ಮಾರ್ಗದರ್ಶನದಲ್ಲಿ ಈ ಸಮ್ಮೇಳನವನ್ನು ಸಂಯೋಜಿಸಲಾಗುತ್ತಿದೆ.  ಸಮ್ಮೇಳನವನ್ನು ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಪೂರ್ವಭಾವಿಯಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ತುಳು ಸಂಸ್ಕೃತಿಗೆ ಸಂಬಂಧಪಟ್ಟ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೇರೆ ಬೇರೆ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ವಿವಿಧ ಸಮಿತಿಗಳನ್ನು ರಚಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

ತುಳುವೆರೈಸಿರಿ: ಒಕ್ಕೂಟದ ಸದಸ್ಯ ಸಂಸ್ಥೆಗಳಿಗೆ ಪರ್ಬದ ಸಂದರ್ಭದಲ್ಲಿ ಆಯೋಜಿಸಲಾಗುವ “ತುಳುವೆರೈಸಿರಿ” ತುಳು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರಾಜ್ಯ, ಪರರಾಜ್ಯಗಳ 20 ತಂಡಗಳು ಪಾಲ್ಗೊಳ್ಳಲಿವೆ.

Tulu_Parbha_Press_4 Tulu_Parbha_Press_5

ಪರ್ಬದ ಗಮ್ಮತ್ತ್:

ಪರ್ಬದ ಸಂದರ್ಭದಲ್ಲಿ ಏಕಕಾಲದಲ್ಲಿ ಎರಡು ಸಭಾಂಗಣಗಳಲ್ಲಿ ಸಾಂಸ್ಕೃತಿಕ, ಸಾಹಿತ್ಯ, ಮನರಂಜನೆ, ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಲಾಗುವುದು. ತುಳು ಸಿನೆಮಾ ಪದರಂಗಿತ, ತುಳುವೆರೆ ತುತ್ತೈತ, ಬ್ಯಾರಿ-ಕೊಂಕಣಿ ಕಲಾ ವೈವಿಧ್ಯ, ತುಳುನಾಡ ವೈಭವ, ಮುಂಬೈ ತುಳುವೆರ್, ತುಳು ಕಲಾಸಿರಿ, ತುಳುವೆರೈಸಿರಿ ಪಂಥ, ತೆಲಿಕೆ- ನಲಿಕೆ, ಆಟ-ಕೂಟ ನಡೆಯಲಿದೆ. ಶ್ರೀ ಭೂತನಾಥೇಶ್ವರ ಗೊಬ್ಬುದ ಕಲದಲ್ಲಿ ಸುಮಾರು ೨೦ ವಿವಿಧ ಕ್ರೀಡಾಸ್ಪರ್ಧೆಗಳು, ಮುಲ್ಕಿ ಸುಂದರರಾಮ ಶೆಟ್ಟಿ ಸ್ಮರಣಾರ್ಥ “ತುಳುನಾಡ ಕಬಡಿ” ಮೊದಲಾದ ವೈವಿಧ್ಯಮಯ ಸ್ಪರ್ಧೆಗಳು ಸಂಘಟಿಸಲ್ಪಡಲಿದೆ.

“ತೊಡು ಬಡವುಗ್ ಅಟಿಲ್ ಅರಗಣೆ”

ಫುಡ್‌ಕೋರ್ಟ್‌ತುಳುನಾಡಿನ ವಿವಿಧ ಜನಾಂಗಗಳ ಖಾದ್ಯಗಳ ಪರಿಚಯ ನೀಡಲಿದೆ.ಪ್ರದರ್ಶನ ಮಳಿಗೆಗಳು, ಪ್ರದರ್ಶನಾಲಯಗಳು ದೇಶ ವಿದೇಶಗಳಿಂದ ಆಗಮಿಸುವ ತುಳುವರಿಗೆ ಈ ಪರ್ಬವು “ತುಳು ವಿಶ್ವರೂಪ” ದರ್ಶನ ನೀಡಲಿದೆ.

Tulu_Parbha_Press_6 Tulu_Parbha_Press_7 Tulu_Parbha_Press_8

ಪುಂಡಿ ಪಣವು ದೇಣಿಗೆ:

ತುಳು ನಾಡಿನ ವಿವಿಧ ಜನಾಂಗಗಳ ಖಾದ್ಯಗಳ ಪರಿಚಯವನ್ನು ಈ ಪರ್ಬದಲ್ಲಿ ನೀಡಲಾಗುವುದು. ಪ್ರದರ್ಶನ ಮಳಿಗೆಗಳು, ಪ್ರದರ್ಶನಾಲಯಗಳು ದೇಶ ವಿದೇಶಗಳಿಂದ ಆಗಮಿಸುವ ತುಳುವರಿಗೆ ತುಳು ವಿಶ್ವರೂಪ ದರ್ಶನ ನೀಡಲಿದೆ. ಈ ತುಳು ಪರ್ಬಕ್ಕೆ ತುಳುವರು `ಪುಂಡಿ ಪಣವು’ (ಸಹಾಯಧನ) ನೀಡಬೇಕು. “ಪುಂಡಿ ಪಣವು” ಸಂಗ್ರಹ ಅಭಿಯಾನವು ಈಗಾಗಲೇ ಆರಂಭವಾಗಿದ್ದು ನೂರು ರೂಪಾಯಿ ದೇಣಿಗೆಯನ್ನು ಪ್ರತಿಯೊಬ್ಬ ತುಳುವನೂ ನೀಡಿ ಸಹಕರಿಸಿ ಪರ್ಬದಲ್ಲಿ ಪಾಲ್ಗೊಳ್ಳಬೇಕು ಎಂದು ಎಂದು ಆರ್ಥಿಕ ಸಮಿತಿ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಈ ಸಂದರ್ಭದಲ್ಲಿ ವಿನಂತಿಸಿದರು.

ಈ ಕಾರ್ಯಕ್ರಮದ ಯಶಸ್ಸಿಗಾಗಿ ಒಕ್ಕೂಟದ ಸದಸ್ಯ ಸಂಸ್ಥೆಗಳೊಂದಿಗೆ ವಿವಿಧ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸಂಘಟನೆಗಳು ಕೈಜೋಡಿಸುತ್ತಿದೆ. ಯುವಜನಾಂಗಕ್ಕೆ ತುಳು ಭಾಷೆ,ಸಂಸ್ಕೃತಿಯ ಬಗ್ಗೆ ಒಲವು ಮೂಡಿಸುವ ದೃಷ್ಟಿಯಿಂದ “ಸಹ್ಯಾದ್ರಿ- ತುಳುವೆರೈಸಿರಿ” ಎನ್ನುವ ವಿವಿಧ ವಿನೋದಾವಳಿ ಸ್ಪರ್ಧೆಯನ್ನು ಪದವಿಪೂರ್ವ, ಪದವಿ ಹಾಗೂ ವೃತ್ತಿಪರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಸಂಯೋಜಿಸಲಾಗಿದೆ.‌

TULU_VERA_PRBHA_1

ಆಸಕ್ತ ಪೋಷಕ- ಪ್ರಾಯೋಜಕರನ್ನು ವಿವಿಧ ಕಾರ್ಯಕ್ರಮ,ಸ್ಪರ್ಧೆ,ಪ್ರದರ್ಶನಗಳಿಗೆ ನಿರೀಕ್ಷಿಸಲಾಗುತ್ತಿದ್ದು ಸ್ವಯಂ ಸ್ಪೂರ್ತಿಯಿಂದ ಪಾಲ್ಗೊಳ್ಳುವ ಕಲಾವಿದರನ್ನು, ಸಾಹಿತಿ, ಸಂಘಟಕರನ್ನು ಪರ್ಬ ಸಮಿತಿಯು ಸಂತೋಷದಿಂದ ಬರಮಾಡಿಕೊಳ್ಳುತ್ತಿದೆ. ಅ.31ರ ಮುಂಚಿತವಾಗಿ ಆಸಕ್ತ ಕಲಾವಿದರು, ಸಾಹಿತಿಗಳು, ಸಂಘಟಕರು ಪರ್ಬ ಸಮಿತಿಯನ್ನು ಸಂಪರ್ಕಿಸಬಹುದಾಗಿದೆ. ವಿಶ್ವ ತುಳುವೆರೆ ಪರ್ಬ, ಮಹಿಳಾ ಒಕ್ಕೂಟ ಬಿಲ್ಡಿಂಗ್, ಉರ್ವಾ ಸ್ಟೋರ್, ಅಶೋಕನಗರ ಪೋಸ್ಟ್, ಮಂಗಳೂರು- 6, ದೂರವಾಣಿ: 0824-2454291, ಅಥವಾ ಈ ಮೇಲ್: tuluparbha@gmail.com ಸಂಪರ್ಕಿಸಬಹುದಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಶ್ರೀ ಧರ್ಮಪಾಲ ಯು.ದೇವಾಡಿಗ, ತುಳು ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಎಂ.ಜಾನಕಿ ಬ್ರಹ್ಮಾವರ, ಆರ್ಥಿಕ ಸಮಿತಿ ಅಧ್ಯಕ್ಷರು ಪ್ರೊ. ಎಂ. ಬಿ. ಪುರಾಣಿಕ್, ಪ್ರಚಾರ ಸಮಿತಿ ಅಧ್ಯಕ್ಷ ಶ್ರೀ ಪ್ರದೀಪಕುಮಾರ ಕಲ್ಕೂರ, ಸಂಯೋಜಕರಾದ ಶ್ರೀ. ಎ.ಸಿ. ಭಂಡಾರಿ,ಶ್ರೀ ಅಡ್ಯಾರ್ ಮಹಾಬಲ ಶೆಟ್ಟಿ, ಶ್ರೀ ದಾಮೋದರ ನಿಸರ್ಗ, ಪ್ರಧಾನ ಸಂಚಾಲಕರು ಕದ್ರಿ ನವನೀತ ಶೆಟ್ಟಿ – ಕಾರ್ಯದರ್ಶಿ ಶ್ರೀ ರತ್ನಕುಮಾರ್,ಕೋಶಾಧಿಕಾರಿ ಶ್ರೀ ಕರುಣಾಕರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Write A Comment