ಕರಾವಳಿ

ಪ್ರತಿಷ್ಠಿತ ಇನ್‌ಲ್ಯಾಂಡ್ ಸಂಸ್ಥೆಯ ನೂತನ ವಸತಿ ಸಮುಚ್ಚಯ ಇನ್‌ಲ್ಯಾಂಡ್ ಎಕ್‌ಲಾನ್ ಉದ್ಘಾಟನೆ

Pinterest LinkedIn Tumblr

inland_Echlane_Inugr

ಮಂಗಳೂರು, ಅ.26: ಕರ್ನಾಟಕದ ಪ್ರತಿಷ್ಠಿತ ಬಿಲ್ಡರ್‌ಗಳಲ್ಲಿ ಒಂದಾದ ಇನ್‌ಲ್ಯಾಂಡ್ ಸಂಸ್ಥೆಯು ನಗರದ ಎಂ.ಜಿ. ರೋಡ್‌ನ ಬಲ್ಲಾಳ್‌ಬಾಗ್ ರಸ್ತೆಯ ಪಕ್ಕದಲ್ಲಿ ನಿರ್ಮಿಸಿರುವ ಅತ್ಯಾಕರ್ಷಕ ಬಿಸಿನೆಸ್ ಕ್ಲಾಸ್ ಡಿಸಾನರ್ ಅಪಾರ್ಟ್‌ಮೆಂಟ್ ‘ಇನ್‌ಲ್ಯಾಂಡ್ ಎಕ್‌ಲಾನ್’ ವಸತಿ ಸಮುಚ್ಚಯದ ಉದ್ಘಾಟನೆ ಕಾರ್ಯಕ್ರಮ ಶನಿವಾರ ನೆರವೇರಿತು.

ಎಕ್‌ಲಾನ್‌ನ್ನು ಮೇಯರ್ ಮಹಾಬಲ ಮಾರ್ಲ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿ ನಗರದ ಶೋಭೆ ಹೆಚ್ಚುಸುವಂತಹ ಆಕರ್ಷಕ ಕಟ್ಟಡಗಳನ್ನು ಇನ್‌ಲ್ಯಾಂಡ್ ಸಂಸ್ಥೆಯವರು ನಗರಕ್ಕೆ ಕೊಡುಗೆಯಾಗಿ ನೀಡುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

In_land_Echelon_1

ಉಪ ಮೇಯರ್ ಕವಿತಾ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕಾರ್ಪೊರೇಟರ್‌ಗಳಾದ ಡಿ.ಕೆ.ಅಶೋಕ್, ಭಾಸ್ಕರ್ ಮೊಯ್ಲಿ, ರಾಧಾಕೃಷ್ಣ, ಬಿಜೆಪಿ ನಾಯಕ ಜಗದೀಶ್ ಅಧಿಕಾರಿ, ಕ್ರೆಡೈ ಅಧ್ಯಕ್ಷ ಪುಷ್ಪರಾಜ್ ಜೈನ್, ಪ್ಲಾಮಾ ಬಿಲ್ಡರ್ಸ್‌ನ ಆಡಳಿತ ನಿರ್ದೇಶಕ ಪಿ.ಎಂ.ರಝಾಕ್, ರೋಹನ್ ಪ್ರಾಪರ್ಟಿ ಇನ್ಫ್ರಾಟೆಕ್ ಪ್ರೈವೇಟ್ ಲಿ. ಸಂಸ್ಥೆಯ ಆಡಳಿತ ನಿರ್ದೇಶಕ ರೋಹನ್ ಮೊಂತೇರೊ, ಇನ್‌ಲ್ಯಾಂಡ್ ಸಂಸ್ಥೆಯ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್, ನಿರ್ದೇಶಕರಾದ ಮೆರಾಜ್ ಮತ್ತು ವಹಾಜ್, ಜಯಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

inland_Echlane_Inugr_2 inland_Echlane_Inugr_3 inland_Echlane_Inugr_4 inland_Echlane_Inugr_5 inland_Echlane_Inugr_6 inland_Echlane_Inugr_7 inland_Echlane_Inugr_8 inland_Echlane_Inugr_9 inland_Echlane_Inugr_10 inland_Echlane_Inugr_11

ನಗರದ ಹೃದಯಭಾಗದ ಎಂ.ಜಿ. ರಸ್ತೆಯ ಸುಂದರ ಪರಿಸರದಲ್ಲಿ ನಿರ್ಮಾಣಗೊಂಡಿರುವ ‘ಇನ್‌ಲ್ಯಾಂಡ್ ಎಕ್‌ಲಾನ್’ 7 ಅಂತಸ್ತುಗಳ ಒಟ್ಟು 28 ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದೆ. ಈ ಅಪಾರ್ಟ್‌ಮೆಂಟ್‌ಗಳು ಎಲ್ಲಾ 3 ಬಿಎಚ್‌ಕೆಯ, 1956, 1988, 2129, 2183 ಚದರ ಅಡಿ ವಿಸ್ತೀರ್ಣದ ಫ್ಲಾಟ್‌ಗಳನ್ನು ಹೊಂದಿದೆ. ಶಾಲೆ, ಕಾಲೇಜು, ಶಾಪಿಂಗ್ ಮಾಲ್, ಮಾರುಕಟ್ಟೆ, ಸರಕಾರಿ ಬಸ್ ಸೌಲಭ್ಯ, ಕ್ರೀಡಾಂಗಣ ಮುಂತಾದ ಸೌಲಭ್ಯಗಳು ಈ ವಸತಿ ಸಮುಚ್ಚಯದ ಸ್ವಲ್ಪದೂರದಲ್ಲಿದೆ.

Write A Comment