ಮಂಗಳೂರು, ಅ.24: ಯೆನೆಪೊಯ ವಿಶ್ವವಿದ್ಯಾಲಯ ಹೈಟೆಕ್ ದಂತ ಚಿಕಿತ್ಸಾ ಸಂಚಾರಿ ವಾಹನ ‘ಯೆನ್ ಡೆಂಟಲ್ ಕೇರ್’ಗೆ ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ಬುಧವಾರ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು ಯೆನೆಪೊಯ ವಿವಿಯ ಸೇವಾ ಚಟು ವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
‘ಯೆನ್ ಡೆಂಟಲ್ ಕೇರ್’ ವಾಹನವು ಎರಡು ಸರ್ವ ಸನ್ನದ್ಧವಾದ ದಂತ ಕುರ್ಚಿಗಳು ಹಾಗೂ ಇತರ ಅಗತ್ಯ ಪರಿಕರಗಳನ್ನು ಒಳಗೊಂಡಿದೆ. ಮುಖ್ಯವಾಗಿ ಗ್ರಾಮಾಂತರ ಪ್ರದೇಶ ಗಳಲ್ಲಿರುವ ಬಡವರಿಗೆ ಅವರು ಇರುವ ಸ್ಥಳಗಳಲ್ಲಿಯೇ ದಂತ ವೈದ್ಯಕೀಯ ಸೇವೆಯನ್ನು ಒದಗಿಸುವ ಉದ್ದೇಶ ದಿಂದ ಈ ವಾಹನ ಪ್ರಾರಂಭಿಸಲಾಗಿದೆ.
ಇದೇ ಸಂದರ್ಭ ಯೆನೆಪೊಯ ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀರೋಗ ವಿಭಾಗ ವಾರ್ಡ್‌ನಲ್ಲಿ ತಮ್ಮ ಮಕ್ಕಳೊಂದಿಗೆ ಇರುವ ತಾಯಂದಿರಿಗೆ ಉಚಿತ ‘ಯೆನ್- ಕ್ರೇಡ್ಲ್’ ಕಿಟ್‌ನ್ನು ಸಚಿವ ಖಾದರ್ ವಿತರಿಸಿದರು. ಯೆನೆಪೊಯ ವಿವಿಯ ಕುಲಾಧಿಪತಿ ವೈ.ಅಬ್ದುಲ್ಲ ಕುಂಞಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಯೆನೆಪೊಯ ವಿವಿಯ ಉಪ ಕುಲಪತಿ ಡಾ.ಪಿ.ಚಂದ್ರಮೋಹನ್, ಪರೀಕ್ಷಾಂಗ ನಿಯಂತ್ರಣಾಧಿಕಾರಿ ಪ್ರೊ.ಜಯರಾಜನ್, ಆರ್ಥಿಕ ನಿರ್ದೇಶಕ ಫರ್ಹಾದ್, ಯೆನೆಪೊಯ ಮೆಡಿಕಲ್ ಕಾಲೇಜಿನ ಡೀನ್ ಡಾ.ಗುಲಾಂ ಜೀಲಾನಿ ಖಾದಿರಿ, ಡೆಂಟಲ್ ಕಾಲೇಜಿನ ಡೀನ್ ಡಾ.ಬಿ.ಎಚ್.ಶ್ರೀಪತಿ ರಾವ್, ಇಸ್ಲಾಮಿಕ್ ಅಕಾಡಮಿ ಟ್ರಸ್ಟ್‌ನ ಕಾರ್ಯದರ್ಶಿ ಡಾ.ಅಖ್ತರ್ ಹುಸೈನ್, ಪ್ರೊ.ಪಿ.ಸಿ.ಎಂ. ಕುಂಞಿ, ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ್ ಸಲ್ದಾನ್ಹ, ಹೆರಿಗೆ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ.ರಾಜ ಗೋಪಾಲ್ ಭಟ್, ಡಾ.ಸುನಿತಾ ಸಲ್ದಾನ್ಹ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕುಲಸಚಿವರಾದ ಪ್ರೊ.ಡಾ.ಸಿ. ವಿ.ರಘುವೀರ್ ಸ್ವಾಗತಿಸಿದರು. ಸಮುದಾಯ ದಂತ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಗಣೇಶ್ ಶೆಣೈ ಪಂಚ್‌ಮಾಲ್ ವಂದಿಸಿದರು.