ಅಂತರಾಷ್ಟ್ರೀಯ

ಪ್ರತಿಷ್ಟಿತ ಇನ್‌ಲ್ಯಾಂಡ್ ಸಂಸ್ಥೆಯ ಇನ್‌ಲ್ಯಾಂಡ್ ಎಕ್‌ಲಾನ್ ವಸತಿ ಸಮುಚ್ಚಯ ನಾಳೆ ಉದ್ಘಾಟನೆ

Pinterest LinkedIn Tumblr

In_land_Echelon

ಮಂಗಳೂರು, ಅ.24: ಕರ್ನಾಟಕದ ಪ್ರತಿಷ್ಠಿತ ಬಿಲ್ಡರುಗಳಲ್ಲಿ ಒಂದಾದ ಇನ್‌ಲ್ಯಾಂಡ್ ಸಂಸ್ಥೆಯು ನಗರದ ಎಮ್.ಜಿ. ರಸ್ತೆ, ಬಲ್ಲಾಳ್‌ಬಾಗ್ ರಸ್ತೆಯ ಪಕ್ಕದಲ್ಲಿ ನಿರ್ಮಿಸಿರುವ ಅತ್ಯಾಕರ್ಷಕವಾದ ವಿನೂತನ ಮಾದರಿಯ ಬಿಸಿನೆಸ್ ಕ್ಲಾಸ್ ಡಿಸಾನರ್ ಅಪಾರ್ಟ್‌ಮೆಂಟ್ ಇನ್‌ಲ್ಯಾಂಡ್ ಎಕ್‌ಲಾನ್ ವಸತಿ ಸಮುಚ್ಚಯವು ಅಕ್ಟೋಬರ್ 25 ರಂದು ಉದ್ಘಾಟನೆಗೊಳ್ಳಲಿರುವುದು.

ನಗರದ ಹೃದಯಭಾಗದ ಎಮ್.ಜಿ. ರಸ್ತೆಯ ಸುಂದರ ಪರಿಸರದಲ್ಲಿ ಅತ್ಯಾಧುನಿಕ ಶೈಲಿಯ ಬಿಸಿನೆಸ್ ಕ್ಲಾಸ್ ಡಿಸೈನರ್ ಇನ್‌ಲ್ಯಾಂಡ್ ಎಕ್‌ಲಾನ್ ವಸತಿ ಸಮುಚ್ಚಯವು 7 ಅಂತಸ್ತುಗಳ ಒಟ್ಟು 28 ಅಪಾರ್ಟ್‌ಮೆಂಟ್ ಗಳನ್ನು ಹೊಂದಿದೆ. ಈ ಅಪಾರ್ಟ್ ಮೆಂಟ್‌ಗಳು ಎಲ್ಲಾ 3 ಬಿಎಚ್‌ಕೆಯ, 1956, 1988, 2129, 2183 ಚದರ ಅಡಿ ವಿಸ್ತೀರ್ಣದ ಫ್ಲಾಟುಗಳನ್ನು ಹೊಂದಿದೆ. ಶಾಲೆ, ಕಾಲೇಜು, ಶಾಪಿಂಗ್ ಮಾಲ್, ಮಾರುಕಟ್ಟೆ, ಸರಕಾರಿ ಬಸ್ ಸೌಲಭ್ಯ, ಕ್ರೀಡಾಂಗಣ ಮುಂತಾದ ಸೌಲಭ್ಯ ಗಳು ಈ ವಸತಿ ಸಮುಚ್ಚಯದ ಸ್ವಲ್ಪದೂರ ದಲ್ಲಿದೆ. ಇನ್‌ಲ್ಯಾಂಡ್ ಸಂಸ್ಥೆಯು ಅತ್ಯಾಧುನಿಕ ಸೌಲಭ್ಯಗಳ ವಿಶಿಷ್ಟ ಡಿಸೈನ್‌ಗಳ ವಸತಿ ಸಮುಚ್ಚಯವನ್ನು ಹೊಂದಿದೆ.

ಈ ಸಂಸ್ಥೆಯು 1986 ರಲ್ಲಿ ಆರಂಭ ಗೊಂಡಿದ್ದು, ನಿರ್ಮಾಣ ಕ್ಷೇತ್ರದಲ್ಲಿ ಮುಂಚೂಣಿಯ ಸ್ಥಾನದಲ್ಲಿದೆ. ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಉನ್ನತ ಗುಣಮಟ್ಟ ಹಾಗೂ ವಿನ್ಯಾಸವನ್ನು ರೂಪಿಸಿ ತನ್ನದೇ ಆದ ವಿನೂ ತನ ಛಾಪು ಮೂಡಿಸಿದೆ. ಇನ್‌ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ಸ್‌ ಪ್ರೈ. ಲಿ. ಐ.ಎಸ್.ಒ 9001:2008 ಪ್ರಮಾಣಿತ ಸಂಸ್ಥೆಯಾಗಿದೆ. ಇನ್‌ಲ್ಯಾಂಡ್ ವಿಂಡ್ಸರ್ಸ್‌ ಕಟ್ಟಡಕ್ಕೆ ರಾಷ್ಟ್ರೀಯ ಸುರಕ್ಷ ಪುರಸ್ಕಾರ ಲಭಿಸಿದೆ. ಈ ಕಟ್ಟಡವು ಮಂಗಳೂರಿ ನಲ್ಲಿ ಅತೀ ದೊಡ್ಡ ಕಟ್ಟಡವಾಗಿದೆ.

In_land_Echelon_1

ಇನ್‌ಲ್ಯಾಂಡ್ ಸಂಸ್ಥೆಯ ಪ್ರತಿಯೊಂದು ವಸತಿ ಹಾಗೂ ವಾಣಿಜ್ಯ ಪ್ರಾಜೆಕ್ಟ್‌ಗಳು ವ್ಯೆಹಾತ್ಮಕ ಯೋಜನೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಬಳಸಿದ ತಜ್ಞರುಗಳನ್ನು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ.

ಶೀಘ್ರದಲ್ಲಿಯೇ ಈ ಸಂಸ್ಥೆಯು ಬರುವ ತಿಂಗಳಿನಲ್ಲಿ ಬೆಂಗಳೂರಿನ ಯಲಹಂಕ ನ್ಯೂಟೌನ್‌ನಲ್ಲಿ 116 ಅಪಾರ್ಟ್‌ಮೆಂಟ್‌ಗಳ ಇನ್‌ಲ್ಯಾಂಡ್ ಎಡಿಲಾನ್‌ಗೆ ಶಿಲಾ ನ್ಯಾಸ ನಡೆಸಲಿದೆ. ಇದೇ ರೀತಿ ಬೆಂಗಳೂರಿನ ಹೆಗ್ಡೆ ನಗರದಲ್ಲಿ ‘ಇನ್‌ಲ್ಯಾಂಡ್ ಇಮಾದ್’ ವಸತಿ ಸಮುಚ್ಚಯವು ಮುಂಬರುವ ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ. ಮಂಗಳೂರಿನ ವಿವಿಧ ಕಡೆ ವೆಲೆನ್ಸಿಯಾ (ಎಸ್ಟೋರಿಯಾ), ಕದ್ರಿ (ಎವಿನ್ಸ್), ಬಿಜೈ (ಎಸ್ಪಾ ನಾ), ಮಠದಕಣಿ (ಎಲಾನ್), ಪಳ್ನೀರ್ (ಸಿಯಾನ್) ಗಳಲ್ಲಿ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ. ಇನ್‌ಲ್ಯಾಂಡ್ ಸಂಸ್ಥೆಯ ಬುಕ್ಕಿಂಗ್ ಹಾಗೂ ಹೆಚ್ಚಿನ ಮಾಹಿತಿಗಾಗಿ  www.inlandbuilders.net ನ್ನು ಸಂಪರ್ಕಿಸಬಹುದಾಗಿದೆ.

ವಿಶೇಷತೆಗಳು:

7 ಅಂತಸ್ತು ಗಳು, 28 ಫ್ಲಾಟ್‌ಗಳು, 2 ಅಂತಸ್ತುಗಳ ಕಾರು ಪಾರ್ಕಿಂಗ್, ಈಜು ಕೊಳ, ಜಿಮ್ನೇಶಿಯಂ, ರೆಟಿಕ್ಯುಲೇಟ್ ಗ್ಯಾಸ್ ಸಂಪರ್ಕ, ವಿಶಾಲವಾದ ಎಂಟ್ರಿಲಾಬಿ, 8 ಪ್ರಯಾಣಿಕರ ಸೀನಿಕ್ ಲಿಫ್ಟ್ ಹಾಗೂ 13 ಜನರ ಸ್ಟ್ರೆಚ್ಚರ್ ಎಲಿವೇಟರ್.

Write A Comment