ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಒಳ ರಸ್ತೆಗಳಿಗೆ ಹೆಚ್ಚಿನ ಒತ್ತುಕೊಟ್ಟು ಅಭಿವೃದ್ಧಿಗೆ ಶ್ರಮಿಸಲಾಗುವುದು. ಮುಂದಿನ ಐದು ವರ್ಷಗಳ ಒಳಗೆ ನಗರ ವ್ಯಾಪ್ತಿಯ ಒಳರಸ್ತೆಗಳನ್ನು ಜನರಿಗೆ ಅನುಕೂಲಕರವಾಗುವಂತಹ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕೆ ಜನರ ಸಹಕಾರ ಅತ್ಯಗತ್ಯ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ ಜೆ.ಆರ್. ಲೋಬೋರವರು ಇಂದು ಅತ್ತಾವರ ವಾರ್ಡಿನ ಬಾಬುಗುಡ್ಡೆ 1ನೇ ರಸ್ತೆಯಿಂದ ೬ನೇ ರಸ್ತೆಗೆ ಸೇರುವಂತಹ ಕೂಡು ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಯ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.
ಸುಮಾರು 25 ಲಕ್ಷ ರೂಪಾಯಿ ವೆಚ್ಚದಿಂದ ಆಗುವಂತಹ ಈ ಕಾಮಗಾರಿಯನ್ನು ರಾಜ್ಯ ಸರಕಾರದ ವಿಶೇಷ ಅನುದಾನದ ನಿಧಿಯಿಂದ ಶಾಸಕ ಶ್ರೀ ಜೆ.ಆರ್. ಲೋಬೋರವರ ಶಿಫಾರಸಿನ ಮೇರೆಗೆ ಮಂಜೂರಾಗಿದೆ.
ಈ ಸಂದರ್ಭದಲ್ಲಿ ಕಾರ್ಪೋರೇಟರ್ ಶೈಲಜಾ, ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ. ಟಿ.ಕೆ. ಸುಧೀರ್, ಅರುಣ್ ಕುವೆಲ್ಲೋ, ವಾರ್ಡ್ ಅಧ್ಯಕ್ಷ ಜಯಂತ ಪೂಜಾರಿ, ಮಾಜೀ ಕಾರ್ಪೋರೇಟರ್ ವಿಜಯಲಕ್ಷ್ಮೀ, ಕೆ. ಭಾಸ್ಕರ ರಾವ್, ಮೊಹಮದ್ ನವಾಜ್, ಮೋಹನ ಮೆಂಡನ್, ವಿದ್ಯಾ, ಐವನ್ ಬಾಬುಗುಡ್ಡ, ಡೆನ್ನಿಸ್ ಡಿ’ಸಿಲ್ವಾ, ಕೀರ್ತಿ ಪೂಜಾರಿ, ಹರ್ಬಟ್ ಡಿ’ಸೋಜ, ಅಶೋಕ್ ಕುಡುಪಾಡಿ, ಕೆ. ಅಬೂಬಕ್ಕರ್ ಜಪ್ಪು, ದೇವಾನಂದ ಬಾಬುಗುಡ್ಡೆ, ಪ್ರೇಮಾ, ಸತೀಶ್, ಅಜಿತ್, ವಿಲ್ಸನ್ ಮೊದಲಾದವರು ಉಪಸ್ಥಿತರಿದ್ದರು.

