ಕರಾವಳಿ

ಹೆಲ್ತಿಝನ್’ ಯೋಜನೆಗೆ ಚಾಲನೆ : ಸಚಿವ ಯು.ಟಿ. ಖಾದರ್

Pinterest LinkedIn Tumblr

UTK_PM_OCT16_1

ಮಂಗಳೂರು, ಅ.17: ಅಪಘಾತದ ಸಂದರ್ಭದಲ್ಲಿ ಗಾಯಾಳುವಿನ ಜೀವ ಉಳಿಸಲು ನೆರವಾಗುವ ಉಚಿತ ತುರ್ತು ಚಿಕಿತ್ಸೆಗಾಗಿ ರಾಜ್ಯದಲ್ಲಿ ‘ಮುಖ್ಯಮಂತ್ರಿ ಸಾಂತ್ವನ ಯೋಜನೆ’ ಯನ್ನು ಜಾರಿಮಾಡಲು ತೀರ್ಮಾನಿ ಸಲಾಗಿದೆ. ಇಂತಹ ಯೋಜನೆ ಭಾರತ ಮಾತ್ರವಲ್ಲ, ದಕ್ಷಿಣ ಏಷ್ಯಾದಲ್ಲೇ ಪ್ರಪ್ರಥಮ ಎಂದು ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ಪತ್ರಿಕಾಗೋ ಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ಯೋಜನೆಯನ್ವಯ ರಸ್ತೆ ಅಪ ಘಾತದ ವೇಳೆ ತುರ್ತು ಚಿಕಿತ್ಸೆ ದೊರೆ ಯಬೇಕಾದ ‘ಅಮೂಲ್ಯ ಗಂಟೆಗಳ ಸಮಯದಲ್ಲಿ’ ವ್ಯಕ್ತಿಯ ಜೀವ ಉಳಿ ಸಲು ಅಗತ್ಯವಾದ 24 ಗಂಟೆಗಳ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸ ಲಿದೆ. ಅಪಘಾತಕ್ಕೀಡಾದಾತ ವಿದೇಶಿ ಯನಾಗಿದ್ದರೂ ಇದು ಅನ್ವಯವಾ ಗುತ್ತದೆ ಎಂದು ಖಾದರ್ ಹೇಳಿದರು. ಮೂರು ಹಂತ ಗಳಲ್ಲಿ ಈ ವೆಚ್ಚವನ್ನು ಸರಕಾರ ಭರಿಸಲಿದೆ. ಸಣ್ಣ ಪ್ರಮಾಣದ ವೆಚ್ಚಗಳನ್ನು ಜಿಲ್ಲಾ ಆಸ್ಪತ್ರೆಗಳಲ್ಲಿ (5,000 ರೂ.ನಿಂದ 15,000 ವರೆಗೆ) ಉಳಿದಂತೆ 25,000 ರೂ.ವರೆಗಿನ ವೆಚ್ಚವನ್ನು ರಾಜ್ಯ ಸರಕಾರ ಭರಿಸಲಿದೆ. ಅಪಘಾತಕ್ಕೀಡಾದ ವೇಳೆ ವ್ಯಕ್ತಿಯ ಜೀವ ಉಳಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ್ದಾಗಿದೆ ಎಂದವರು ವಿವರಿಸಿದರು.

UTK_PM_OCT16_2

ರಾಜ್ಯದಲ್ಲಿ ಹೆಲ್ತಿಝನ್ ಜಾರಿ :
ಸರಕಾರಿ ಆರೋಗ್ಯ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಹಾಗೂ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಫೋಟೊ ಕ್ಲಿಕ್ ಮಾಡಿ ಮೊಬೈಲ್ ಮೂಲಕವೂ ಆರೋಗ್ಯ ಇಲಾಖೆಗೆ ಕಳುಹಿಸಿ ಕೊಡಬಹುದು. ಇದಕ್ಕಾಗಿ ಆ್ಯಂಡ್ರಾಯಿಡ್ ಮೊಬೈಲ್ ಸೆಟ್‌ನಲ್ಲಿ ‘ಹೆಲ್ತಿಝನ್’ ಎಂಬ ಹೊಸ ಆ್ಯಪ್ ಒಂದನ್ನು ಆರೋಗ್ಯ ಇಲಾಖೆ ಪ್ರಥಮವಾಗಿ ಪರಿಚಯಿಸಲಿದೆ. ಈ ಯೋಜನೆ ನಾಳೆಯಿಂದಲೇ ರಾಜ್ಯದಲ್ಲಿ ಜಾರಿಗೆ ಬರಲಿದೆ. ಆರೋಗ್ಯ ಇಲಾಖೆಗೆ ತಳಮಟ್ಟದ ಸಮಸ್ಯೆಯ ಬಗ್ಗೆ ಸರಕಾರದ ಮಟ್ಟದಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳಲು ಹಾಗೂ ಸುಧಾರಣೆ ತರಲು ಅನುಕೂಲ ವಾಗಲಿದೆ. ಜೊತೆಗೆ ಆರೋಗ್ಯ ಇಲಾಖೆಯ ಮಾಹಿತಿಯನ್ನು ಇದರಿಂದ ಪಡೆಯಬಹುದಾಗಿದೆ. ಜನರ ಆರೋಗ್ಯ ಸಮಸ್ಯೆಯನ್ನು ಈ ತಂತ್ರಜ್ಞಾನದ ಬಳಕೆಯಿಂದ ಪರಿಹರಿಸಲುಯತ್ನಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.

UTK_PM_OCT16_3

ಕೇಂದ್ರಸರಕಾರವು ಈ ಯೋಜನೆ ಯನ್ನು ಇತರ ರಾಜ್ಯಗಳಿಗೆ ವಿಸ್ತರಿಸಲು ಆಸಕ್ತಿಹೊಂದಿದೆ. ‘ಹೆಲ್ತಿಝನ್’(ಹೆಲ್ದಿ ಸಿಟಿಝನ್) ಅಂದರೆ ಎಲ್ಲರನ್ನು ಆರೋಗ್ಯವಂತ ನಾಗರಿಕರನ್ನಾಗಿ ಮಾಡುವ ಯೋಜನೆ ಎನ್ನುವ ಮೂಲ ಉದ್ದೇಶವನ್ನು ಹೊಂದಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಕೇಂದ್ರ ಆರೋಗ್ಯ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗ ವಹಿಸಲಿದ್ದಾರೆ ಎಂದವರು ವಿವರಿಸಿದರು.

UTK_PM_OCT16_4

ಎಪಿ‌ಎಲ್ ಪಡಿತರದಾರರಿಗೂ ‘ರಾಜೀವ್ ಆರೋಗ್ಯ ಭಾಗ್ಯ’ ಯೋಜನೆ :
ರಾಜ್ಯದಲ್ಲಿ ಬಿಪಿ‌ಎಲ್ ಪಡಿತರ ಚೀಟಿದಾರರಿಗೆ ಈಗಾಗಲೇ ನೀಡಲಾಗತ್ತಿರುವ ವಾಜಪೇಯಿ ಆರೋಗ್ಯಶ್ರೀ ಮಾದರಿಯಲ್ಲಿ ಇನ್ನು ಮುಂದೆ ಎಪಿ‌ಎಲ್ ಕಾರ್ಡ್ ಹೊಂದಿರುವವರಿಗೂ ರಾಜೀವ್ ಆರೋಗ್ಯ ಭಾಗ್ಯ ಯೋಜನೆಯನ್ನು ಜಾರಿಗೆ ಮಾಡಲು ಸರಕಾರ ತೀರ್ಮಾನಿಸಿದೆ. ಇದರಿಂದ ಎಲ್ಲಾವರ್ಗದ ಜನರಿಗೂ ಆರೋಗ್ಯ ಯೋಜನೆಯ ಸೌಲಭ್ಯ ದೊರೆಯಲಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ಟಿ.ಕೆ.ಸುಧೀರ್, ಸಲೀಂ ಉಳ್ಳಾಲ್, ರಮಾನಂದ ಪೂಜಾರಿ, ರಹ್ಮತುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

Write A Comment