ಕರಾವಳಿ

ಅಡಿಕೆ ಕಳವು ಆರೋಪಿಗಳ ಸೆರೆ :1.48 ಲಕ್ಷ ರೂ. ವೌಲ್ಯದ ಅಡಿಕೆ ವಶ

Pinterest LinkedIn Tumblr
ಬೆಳ್ತಂಗಡಿ, ಅ.17: ಬಿ.ಸಿ.ರೋಡ್‌ನ ಅಡಿಕೆ ಅಂಗಡಿಯೊಂದರಿಂದ ಸುಮಾರು 1.48 ಲಕ್ಷ ರೂ. ವೌಲ್ಯದ ಅಡಿಕೆ ಕಳವುಗೈದ ಇಬ್ಬರು ಆರೋಪಿಗಳನ್ನು ಪೂಂಜಾಲಕಟ್ಟೆ ಪೊಲೀಸರು ಬಂಧಿಸಿದ್ದು, ಅವರಿಂದ ಅಡಿಕೆ ಹಾಗೂ ಲಾರಿಯನ್ನು ವಶಪಡಿಸಿ ಕೊಂಡಿದ್ದಾರೆ.ಬಂಟ್ವಾಳ ತಾಲೂಕು ಪಂಜಿಕಲ್ಲು ಆಚಾರಿಪಲ್ಕೆ ನಿವಾಸಿ ಸಂತೋಷ್ ಯಾನೆ ಸಂತು (29) ಹಾಗೂ ಬಂಟ್ವಾಳ ತಾಲೂಕು ಪಂಜಿಕಲ್ಲು ನಿವಾಸಿ ಪ್ರಸಾದ್(29) ಬಂಧಿತ ಆರೋಪಿಗಳಾಗಿದ್ದಾರೆ. ಕುಸುಮಾಧರ ಎಂಬಾತನ ಸಹಾಯದಿಂದ ಕಳೆದ ಅ.8ರಂದು ಈ ಕಳವು ಮಾಡಿದ್ದಾಗಿ ಆರೋಪಿಗಳು ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾರೆ.

ಪೂಂಜಾಲಕಟ್ಟೆ ಎಸ್ಸೈ ಲತೇಶ್ ಕುಮಾರ್ ಮತ್ತು ಸಿಬ್ಬಂದಿ ಗುರುವಾರ ಮಧ್ಯಾಹ್ನ ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ದೈಕಿನಕಟ್ಟೆ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮೂರ್ಜೆ ಕಡೆಯಿಂದ ಬರುತ್ತಿದ್ದ ಮಿನಿ ಲಾರಿಯೊಂದನ್ನು ನಿಲ್ಲಿಸುವಂತೆ ಸೂಚಿಸಿದಾಗ ನಿಲ್ಲಿಸದೆ ಪೂಂಜಾಲಕಟ್ಟೆ ಕಡೆಗೆ ಪರಾರಿಯಾಗಿದೆ. ಈ ವೇಳೆ ಬೆನ್ನಟ್ಟಿ ಬಂದ ಪೊಲೀಸರು ಪೂಂಜಾಲಕಟ್ಟೆಯ ನಂದಗೋಕುಲ ಸಭಾಭವನದ ಬಳಿ ಅಡ್ಡಗಟ್ಟಿ ನಿಲ್ಲಿಸಿ ತಪಾಸಣೆ ನಡೆಸಿದಾಗ 12 ಗೋಣಿ ಚೀಲದಲ್ಲಿದ್ದ 583 ಕೆ.ಜಿ. ಒಣ ಅಡಿಕೆ ಪತ್ತೆಯಾಗಿದೆ.

 

Write A Comment