ಕರಾವಳಿ

ಪಾನಮತ್ತ ಲಾರಿ ಚಾಲಕನಿಂದ ಕಾರು, ವಿದ್ಯುತ್ ಕಂಬಕ್ಕೆ ಢಿಕ್ಕಿ : ನಾಲ್ವರಿಗೆ ಗಾಯ

Pinterest LinkedIn Tumblr

Padubidre_accident_photo_1

ಪಡುಬಿದ್ರೆ, ಅ.17: ಪಾನಮತ್ತ ಲಾರಿ ಚಾಲಕನೋರ್ವ ಲಾರಿ ಚಲಾಯಿಸಿಕೊಂಡು ಬಂದು ಕಾರು, ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ನಾಲ್ವರನ್ನು ಗಾಯಗೊಳಿಸಿದ ಘಟನೆ ಹೆಜಮಾಡಿಯಲ್ಲಿ ಗುರುವಾರ ಸಂಜೆ ನಡೆದಿದೆ

ಪಾನಮತ್ತನಾಗಿದ್ದ ಲಾರಿ ಚಾಲಕ ಶ್ರೀನಿವಾಸನನ್ನು ಪಡುಬಿದ್ರೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಆತ ‘‘ತಾನು ಚಾಲಕನಲ್ಲ, ಲಾರಿಯ ನಿರ್ವಾಹಕ’’ ಎಂದು ಹೇಳಿಕೊಂಡಿದ್ದಾನೆ. ಆಂಧ್ರ ಪ್ರದೇಶದಿಂದ ಉಡುಪಿ ಮೂಲಕ ಮಂಗಳೂರಿಗೆ ತೆರಳುತ್ತಿದ್ದ ಗೂಡ್ಸ್ ತುಂಬಿದ ಲಾರಿ ಚಾಲಕನ ನಿಯಂತ್ರಣ ತಪ್ಪಿಹೆಜಮಾಡಿ ಡಾಬಾ ಬಳಿ ರಾ.ಹೆ 66ರಲ್ಲಿ ಮೊದಲು ವಿದ್ಯುತ್ ಕಂಬವೊಂದಕ್ಕೆ ಢಿಕ್ಕಿ ಹೊಡೆದಿದೆ. ಆ ಬಳಿಕ ಟೂರಿಸ್ಟ್ ಇಂಡಿಕಾ ಕಾರೊಂದಕ್ಕೆ ಢಿಕ್ಕಿ ಹೊಡೆದು ಕಾರನ್ನು 25 ಮೀ.ನಷ್ಟು ಮುಂದಕ್ಕೆ ಎಳೆದುಕೊಂಡು ಹೋಗಿ ಆ್ಯಕ್ಸಿಲ್ ತುಂಡಾಗಿ ರಸ್ತೆ ಮಧ್ಯೆ ನಿಂತಿದೆ.

Padubidre_accident_photo_2

ಘಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಲಾರಿಯು ಭಾಗಶಃ ಜಖಂಗೊಂಡಿದೆ. ಇದರಿಂದ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment