ಕರಾವಳಿ

ಮಹೇಶ್ ಪಿಯು ಕಾಲೇಜು ಗೋಲ್ಡನ್ ಶೆಟಲ್ ಕ್ಯಾಂಪ್ 2014  ಉದ್ಘಾಟನಾ ಸಮಾರಂಭ

Pinterest LinkedIn Tumblr

golden_setal_tornment_1

ಮಂಗಳೂರು,ಅ.10: ಮಂಗಳೂರಿನ ಪ್ರಸಿದ್ಧ ಗೋಲ್ಡನ್ ಶೆಟಲ್ ಅಕಾಡೆಮಿಯು ಆಯೋಜಿಸಿದ್ದ ಮಹೇಶ್ ಪಿಯು ಕಾಲೇಜು ಗೋಲ್ಡನ್ ಶೆಟಲ್ ಕ್ಯಾಂಪ್  2014, 3 ದಿನಗಳ ಶೆಟಲ್ ಬ್ಯಾಟ್‌ಮಿಂಟನ್ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭವು ಶುಕ್ರವಾರ ನಗರದ ಲಾಲ್‌ಬಾಗ್‌ನ ಯು.ಎಸ್ ಮಲ್ಯ ಇಂಡೋರ್ ಸೆಡಿಯಂನಲ್ಲಿ ನಡೆಯಿತು. ದೀಪ ಬೆಳಗುವುದರೊಂದಿಗೆ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಪೋಲಿಸ್ ಕಮಿಷನರ್ ಶ್ರೀ ಆರ್. ಹಿತೇಂದ್ರ ಎಲ್ಲಾ ಮಕ್ಕಳಿಗೆ ಶುಭಹಾರೈಸಿದರು ಮತ್ತು ಮಕ್ಕಳು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೈಂಟ್ ಜಾರ್ಜ್ ಹೋಮಿಯೋಪತಿಯ ವ್ಯವಸ್ಥಾಪಕ ಪಾಲುದಾರರಾದ ಡಾ.ಸೋಫಿಯಾ ಝಕಾರಿಯಾಸ್ ಮಾತನಾಡಿ ಪ್ರಯತ್ನ ಬಲದಿಂದ ಮಾತ್ರ ನಾವು ಯಶಸ್ಸನ್ನು ಸಾಧಿಸಬಹುದು ಎಂದರು. ಮಕ್ಕಳಲ್ಲಿ ಕ್ರೀಡಾ ಸ್ಪೂರ್ತಿ ಇರಬೇಕು ಹಾಗೂ ಇಂದಿನ ಸೋಲು ಗೆಲುವುಗಳು ಮುಂದಿನ ಪ್ರಯತ್ನಗಳಿಗೆ ಅಡ್ಡಿಯಾಗಬಾರದು ಎಂದರು. ಮುಖ್ಯವಾಗಿ ಹುಡುಗಿಯರಿಗೆ ಇದು ತಮ್ಮ ಸಾಮರ್ಥ್ಯವನ್ನು ತೋರಿಸಲು ಸರಿಯಾದ ವೇದಿಕೆ, ಇದನ್ನು ಸೂಕ್ತವಾಗಿ ಬಳಸಿಕೊಳ್ಳಿ ಎಂದು ಕರೆ ನೀಡಿದರು.

golden_setal_tornment_2

ಸಮಾರಂಭದ ಇನ್ನೂರ್ವ ಮುಖ್ಯ ಅತಿಥಿ ಶ್ರೀದೇವಿ ಎಜುಕೇಶನ್ ಟ್ರಸ್ (ರಿ)ನ ಅಧ್ಯಕ್ಷ ಹಾಗೂ ದ. ಕ ಜಿಲ್ಲಾ ಬ್ಯಾಡ್‌ಮಿಂಟನ್ ಅಸೋಸಿಯೇಷನ್‌ನ ಅಧ್ಯಕ್ಷರಾದ ಶ್ರೀ ಎ. ಸದಾನಂದ ಶೆಟ್ಟಿ ಮಾತನಾಡಿ ಕ್ರೀಡಾ ಕೂಟದ ಆಯೋಜನೆ ಬಹಳ ಕಷ್ಟದ ಕೆಲಸ ಆದರೆ ಈ ನಿಟ್ಟನಲ್ಲಿ ಗೋಲ್ಡನ್ ಶೆಟಲ್ ಅಕಾಡೆಮಿಯು ಕ್ರೀಡಾಕೂಟವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿದೆ ಎಂದು ಶ್ಲಾಘಿಸಿದರು.ಇನ್ನು ತರಬೇತುದಾರ ಒಬ್ಬ ಕ್ರೀಡಾಳುವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದರೆ ಅದುವೇ ಅವರು ಮಾಡುವ ಬಹುದೊಡ್ಡ ದೇಶ ಸೇವೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಗೋಲ್ಡನ್ ಶೆಟಲ್ ಕಪ್‌ನ ಟೂರ್ನಮೆಂಟ್ ಕಮಿಟಿಯ ಅಧ್ಯಕ್ಷರಾದ ಶ್ರೀ ಸುಧೀರ್ ಪಿ. ಘಾಟೆ ಮಾತನಾಡಿ ಕ್ರೀಡಾಕೂಟಗಳಿಗೆ ಹಾಗೂ ಕ್ರಿಡಾಪಟುಗಳಿಗೆ ಮಾಧ್ಯಮ ಪ್ರಚಾರ ಒದಗಿಸು ವಲ್ಲಿ ಇಂತಹ ಸಭಾ ಕಾರ್ಯಕ್ರಮಗಳು ಮಹತ್ವಪೂರ್ಣವಾಗಿವೆ ಎಂದರು. ಸುಮಾರು ನಾಲ್ಕು ವರ್ಷಗಳ ಹಿಂದೆ ಇಂತಹ ಕ್ರಿಡಾ ಕೂಟಗಳನ್ನು ನೋಡಲು ಬೆಂಗಳೂರಿಗೆ ಹೋಗಬೇಕಾಗಿತ್ತು ಆದರೆ ಇದೀಗ ನಮ್ಮದೇ ನಗರಗದಲ್ಲಿ ಆಯೋಜಿಸಲು ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ನಮ್ಮ ಕ್ರಿಡಾ ಪಟುಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು. ಈ ನಿಟಿನಲ್ಲಿ ನಾನು ಸಂಪೂರ್ಣ ಸಹಕಾರ ನೀಡಲಿದ್ದೇವೆ ಎಂದರು. ಎಮ್.ಟಿ ಎಜುಕೇಶನ್ ಟ್ರಸ್ ನ ಟ್ರಸಿ ಶ್ರೀ ಸುಜಿತ್ ಕೊಯೋಟ್, ಗೋಲ್ಡನ್ ಶೆಟಲ್ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜ್ಞಾನೇಶ್ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಜ್ಯದ ಸುಮಾರು 500 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ.

Write A Comment