ಮಂಗಳೂರು,ಅ.10: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಅಕ್ರಮ ಚಿನ ಸಾಗಾಟ ಪ್ರಕರಣ ಪತ್ತೆಯಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ದುಬೈಯಿಂದ ಆಗಮಿಸಿದ ಪ್ರಯಾಣಿಕನೊಬ್ಬ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಕರಣವನ್ನು ಭೇದಿಸಿದ್ದಾರೆ.
ಬಜ್ಪೆ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ದುಬೈಯಿಂದ ಅಗಮಿಸಿದ ಸರ್ಫಾಜ್ ಪವಾಲ ಮೊಹಮ್ಮದ್ ಕುಂಞ (30) ಎಂಬತಾ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 5,50,800 ಮೌಲ್ಯದ 204 ಗ್ರಾಂ ಅಕ್ರಮ ಚಿನ್ನವನ್ನು ಪತ್ತೆಹಚ್ಚಿರುವ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ
ಚಿನ್ನವನ್ನು ಒಂದು ಅಳತೆ ಟೇಪ್ ರೂಪದಲ್ಲಿ , ಒಂದು ರೆಕ್ಸೀನ್ ಪ್ರಯಾಣದ ಚೀಲ ರೂಪದಲ್ಲಿ, ಮಕ್ಕಳ ಸ್ಯಾಂಡಲ್, ಕೂದಲು ಬ್ರಷ್ ಮತ್ತು ಪೆನ್ ನಿಭ್ ನ ರೂಪದಲ್ಲಿ ಮಾರ್ಪಟ್ಟು ಮಾಡಿ ಮಂಗಳೂರಿಗೆ ತರಲಾಗಿತು.
ಕಾಸರಗೋಡು ನಾಗಾರಕಟ್ಟೆ ಕ್ರಾಸ್ ರಸ್ತೆಯ ನಿವಾಸಿ ಸರ್ಫಾಜ್ ಪವಾಲ ಮೊಹಮ್ಮದ್ ಕುಂಞ ಅಕ್ಟೋಬರ್ 9ರಂದು 10.15ಕ್ಕೆ ದುಬೈ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಇಲೆವೆನ್ 384 ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭ ಈ ಅಕ್ರಮ ಚಿನ್ನ ಸಾಗಾಟ ಜಾಲ ಪತ್ತೆಯಾಗಿದೆ.


