ಕರಾವಳಿ

ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಗುರುಪೂಜೆ

Pinterest LinkedIn Tumblr

kaladka_guru_pooja_1

ಕಲ್ಲಡ್ಕ,ಅ.07: ಬಿಲ್ಲವ ಸಮಾಜ ಸೇವಾ ಸಂಘ ಕಲ್ಲಡ್ಕ ಇದರ ವತಿಯಿಂದ ಬ್ರಹ್ರಶ್ರೀ ನಾರಾಯಣ ಗುರುವರ್ಯರ ೧೬೦ನೇ ಜನ್ಮ ದಿನಾಚರಣೆ ಅಂಗವಾಗಿ ಗುರುಪೂಜೆಯು ಇಲ್ಲಿನ ಪಂಚವಟಿ ವಾಣಿಜ್ಯ ಸಂಕೀರ್ಣದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಗುರು ಎನ್ನುವಂತದ್ದು ವಿಶಾಲವಾದುದು, ಬಲಿಷ್ಟವಾದುದು, ಜ್ಞಾನಸಂಪನ್ನವಾದುದು. ಹೊಸಬೆಳಕು ತೋರಿಸಿದವರು ನಾರಾಯಣ ಗುರು. ಸಂಘಟನೆಯಿಂದ ಬಿಲ್ಲವ ಸಮಾಜ ಶಕ್ತಿ ಪಡೆಯಬೇಕು. ಬಿಲ್ಲವ ಸಂಘಟನೆಗಳು ಎಲ್ಲಾ ಶೋಷಿತ ವರ್ಗದ ಶ್ರೇಯಾಭಿವೃಧ್ಧಿಗೆ ಶ್ರಮಿಸಬೇಕು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶ್ರೀ ಮುದ್ದು ಮೂಡ ಬೆಳ್ಳೆ ಹೇಳಿದರು.

ಬ್ರಹ್ಮ ಶ್ರೀ ನಾರಾಯಣ ಗುರುಗಳು ಜೀವನದಲ್ಲಿ ಪರಿಪಾಲಿಸಿ ನೀಡಿದ ಸಂದೇಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಅದೇ ನಿಜವಾದ ಗುರುಗಳ ದಿನಾಚರಣೆ ಎಂದು ಭೂ ಅಭಿವೃಧ್ಧಿ ಬ್ಯಾಂಕ್ ಬಂಟ್ವಾಳ ಮಾಜಿ ಅಧ್ಯಕ್ಷರಾದ ಶ್ರೀ. ಎ. ನೋಣಯ್ಯ ಪೂಜಾರಿ ಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಿಲ್ಲವ ಸಮಾಜ ಸೇವ ಸಂಘ ಕಲ್ಲಡ್ಕ ಇದರ ಅಧ್ಯಕ್ಷರಾದ ಎ. ರಾಮಪ್ಪ ಪೂಜಾರಿ ಏಳ್ತಿಮಾರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀ.ಯಶವಂತ ದೇರಾಜೆ , ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ. ಪ್ರೇಮನಾಥ್ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಪದಾಧಿಕಾರಿಗಳಾದ ಮೋನಪ್ಪ ಪೂಜಾರಿ ತೆಕ್ಕಿಪಾಪು, ಜನಾರ್ಧನ ನಾರುಕೋಡಿ, ಶರತ್ ಕುಮಾರ್ ಅಮ್ಟೂರು, ತಿಮ್ಮಪ್ಪ ಪೂಜಾರಿ ವೀರಕಂಭ, ಹರೀಶ ಕೇಪು ಗೋಳ್ತಮಜಲು, ಸತೀಶ್ ಪೂಜಾರಿ ಬಾಯಿಲ , ಮಹಾಬಲ ಪೂಜಾರಿ ದಾಸಕೋಡಿ, ಸುಜಾತ ರತ್ನಾಕರ ತೊಟ, ಸುಧಾ ಜನಾರ್ಧನ ಸುಧೆಕ್ಕಾರು, ಉಪಸ್ಥತರಿದ್ದರು.

ಉಪಧ್ಯಕ್ಷರಾದ ಸಿವಿಲ್ ಇಂಜಿನಿಯರ್ ಗಣೇಶ್ ಅಮ್ಟೂರ್ ಸ್ವಾಗತಿಸಿದ್ದರು. ಕಾರ್‍ಯಾದರ್ಶಿ ಬಿ. ಕರುಣಾಕರ ಪೂಜಾರಿ ಬಲ್ಕಟ ಧನ್ಯವಾದವಿತ್ತರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

Write A Comment