ಕರಾವಳಿ

ಬೈಂದೂರು ತಾಲೂಕು ಮಾಡಿ ಸ್ವಾಮೀ..: ಮುಖ್ಯ ಮಂತ್ರಿಗಳಿಗೆ ಮನವಿ

Pinterest LinkedIn Tumblr

ಕುಂದಾಪುರ: ತಾಲೂಕು ರಚನೆಯನ್ನು ಕರ್ನಾಟಕ ಸರಕಾರವು ಯಾವುದೇ ಕಾರಣಕ್ಕೂ ಕೈ ಬಿಡ ಬಾರದೆಂದು ಕೂಡಲೇ ಸರಕಾರವು ತಾಲೂಕು ರಚನೆಯನ್ನು ಘೋಷಿಸಲು ಕ್ರಮಕೈಗೊಂಡು ಬೈಂದೂರನ್ನು ತಾಲೂಕಾಗಿ ಘೋಷಿಸಬೇಕೆಂದು ಬೈಂದೂರಿನ ಸಾಮಾಜಿಕ ಕಾರ್ಯಕರ್ತ ರವೀಂದ್ರ ಶ್ಯಾನಭಾಗ್ ಅವರು ಬೈಂದೂರು ಶಾಸಕರನ್ನು ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ.

 Baindur.10

ಬೈಂದೂರು ತಾಲೂಕು ರಚನೆ ಬಹು ವರ್ಷದ ಹಿಂದಿನ ಬೇಡಿಕೆಯಾಗಿರುತ್ತದೆ. ಭೌಗೋಳಿಕ, ವಿಶಾಲತೆ, ಹಾಗೂ ತಾಲೂಕು ಮಟ್ಟದ ಹೆಚ್ಚಿನ ಸರಕಾರಿ ಕಛೇರಿಗಳು ಬೈಂದೂರಿನಲ್ಲಿ ಇದ್ದು ತಾಲೂಕು ರಚನೆಗೆ ಅರ್ಹತೆ ಹೊಂದಿರುತ್ತದೆ. ಹಿಂದಿನ ಸರಕಾರವು 43 ತಾಲೂಕುಗಳನ್ನು ರಚನೆ ಮಾಡಿತ್ತು. ನಂತರ ಬಂದ ಕಾಂಗ್ರೇಸ್ ಸರಕಾರ ತಾಲೂಕು ರಚನೆಯನ್ನು ಕೈಗೊಳ್ಳಲೇ ಇಲ್ಲ. ಹುಂಡೆಕರ್ ಹಾಗೂ ಗದ್ದಿಗೌಡರ್ ಅವರಂತ ಹಿರಿಯ ಅಧಿಕಾರಿಗಳು ಬೈಂದೂರು ತಾಲೂಕು ರಚನೆಗೆ ಶಿಪಾರಸ್ಸು ಮಾಡಿದ್ದರು.

ಬೈಂದೂರು ಹೋಬಳಿಯ ಹೆಚ್ಚಿನ ಗ್ರಾಮವನ್ನುನಾದರೂ ಸೇರಿಸಿ ಬೈಂದೂರು ತಾಲೂಕುನ್ನಾಗಿ ಕೂಡಾ ರಚಿಸಿ ಬಹುದು. ಬೈಂದೂರಿನಲ್ಲಿ ನ್ಯಾಯಾಲಯನ್ನು ಕೂಡಾ ಸ್ಥಾಪಿಸಬೇಕು. ಬೈಂದೂರು ಹಾಗೂ ಯಡ್ತರೆ ಗ್ರಾಮ ಪಂಚಾಯತ್ ಸೇರಿಸಿ ಪುರಸಭೆ ರಚನೆಯ ಬೇಡಿಕೆ‌ಇರುತ್ತದೆ.

ಹಾಗೂ ಬೈಂದೂರಿನ ಬೈಪಾಸು ಬಳಿ ರಸ್ತೆ ಅಗಲೀಕರಣ ಸಂದರ್ಭ(ರಾ.ಹೆ.66) ಮೇಲ್ ಸೇತುವೆಯನ್ನು ರಚಿಸಬೇಕೆಂದು, ಹಾಗೂ ಯಡ್ತರೆ ಬೈಪಾಸು ಬಳಿ ಕೊಲ್ಲೂರು ಹೋಗುವ ಪ್ರಮುಖರಾಜ್ಯ ಹೆದ್ದಾರಿ ಇದ್ದು ರಸ್ತೆ ಅಗಲೀಕಣ ಸಂದರ್ಭದಲ್ಲಿ ಜನರಿಗೆ ಉಪಯೋಗದ ದೃಷ್ಟಿಯಲ್ಲಿ ಹೆದ್ದಾರಿ ರಚಿಸಬೇಕೆಂದು ಅವರು ಶಾಸಕರನ್ನು ಒತ್ತಾಯಿಸಿದ್ದಾರೆ. ಸಾರ್ವಜನಿಕ ಸಹಿಯೊಂದಿಗೆ ಸ್ಥಳೀಯ ಶಾಸಕರಿಗೆ ಹಾಗೂ ಮುಖ್ಯ ಮಂತ್ರಿಗಳಿಗೆ ಈ ಬಗ್ಗೆ ಮನವಿಯನ್ನು ಬೈಂದೂರಿನ ಸಾಮಾಜಿಕ ಕಾರ್ಯಕರ್ತ ರವೀಂದ್ರ ಶ್ಯಾನಭಾಗ್‌ರವರು ಸಲ್ಲಿಸಿರುತ್ತಾರೆ.

Write A Comment