ಕರಾವಳಿ

ಸರಕಾರ ಸ್ಪಷ್ಟ ನಿಲುವು ಬಹಿರಂಗಪಡಿಸಲಿ: ಕೇಮಾರುಶ್ರೀ ಒತ್ತಾಯ

Pinterest LinkedIn Tumblr

UD-O6-HULI-PROTEST-bck

ಹುಲಿ ಯೋಜನೆ ವಿರುದ್ಧ ಮಲೆಕುಡಿಯರಿಂದ ಪ್ರತಿಭಟನೆ
ಮಣಿಪಾಲ, ಅ.6: ಪಶ್ಚಿಮ ಘಟ್ಟಗಳ ತಪ್ಪಲು ಗ್ರಾಮಗಳಲ್ಲಿನ ಜನರನ್ನು ಒಕ್ಕಲೆಬ್ಬಿಸುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹುಲಿ ಯೋಜನೆ, ಮಾಧವ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ವರದಿಯನ್ನು ಶಾಶ್ವತ ವಾಗಿ ರದ್ದು ಪಡಿಸಿ ರಕ್ಷಣೆ ನೀಡು ವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ನೇತೃತ್ವದಲ್ಲಿ ಸೋಮವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತ ನಾಡಿದ ಕೇಮಾರು ಶ್ರೀಈಶ ವಿಠ್ಠಲದಾಸ ಸ್ವಾಮೀಜಿ, ಪ್ರಕೃತಿಯನ್ನು ದೇವರಂತೆ ಪೂಜಿಸುವ ಮಲೆಕುಡಿಯರಿಂದ ಈಗ ಕಾಡುಗಳು ಉಳಿದುಕೊಂಡಿವೆ. ಯೋಜನೆಗಳು ಜನ ಪರವಾಗಿರಬೇಕೆ ಹೊರತು ಜನರ ಜೀವನದೊಂದಿಗೆ ಚೆಲ್ಲಾಟ ಆಡುವಂತಾಗಬಾರದು. ಎಸ್‌ಇಝೆಡ್, ಎಂಆರ್‌ಪಿಎಲ್, ಯುಪಿಸಿಎಲ್ ಯೋಜನೆಗಳ ಮೂಲಕ ಕರಾವಳಿ ಜನರಿಗೆ ಬೂದಿ ತಿನ್ನಿಸಿದವರು ಈಗ ಹುಲಿ ಯೋಜನೆ ಹೆಸರಿನಲ್ಲಿ ಹೆದರಿಸುತ್ತಿದ್ದಾರೆ ಎಂದು ಟೀಕಿಸಿದರು.

ಹುಲಿ ಯೋಜನೆ ವಿರುದ್ಧ ರಾಜ ಕೀಯ, ಜಾತಿಮತ ಮುಕ್ತ ಹೋರಾಟ ವನ್ನು ರೂಪಿಸಬೇಕಾದ ಅಗತ್ಯವಿದೆ. ಎಲ್ಲ ಧರ್ಮಗಳ ಮುಖಂಡರು ಹಾಗೂ ಎಲ್ಲ ಸ್ವಾಮೀಜಿಗಳನ್ನು ಇದರಲ್ಲಿ ಸೇರಿಸಿ ಕೊಳ್ಳಬೇಕು. ಹೋರಾಟಗಳು ಆರಂಭ ಶೂರತ್ವವಾಗಿರದೆ ಜಯ ಸಿಗುವವರೆಗೆ ಮುಂದುವರಿಯಬೇಕು ಎಂದರು.

ಹುಲಿ ಯೋಜನೆಯ ಬಗ್ಗೆ ಜನ ರಲ್ಲಿ ಸಾಕಷ್ಟು ಗೊಂದಲಗಳಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರ ಇದನ್ನು ನಿವಾರಿಸಿ, ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಜನಪ್ರತಿನಿಧಿಗಳು ಈ ವಿಚಾರದಲ್ಲಿ ಜನರನ್ನು ಮೋಸ ಗೊಳಿಸುವ ಬದಲು ಇದರ ವಿರುದ್ಧ ವಿಧಾನಸೌಧ ಹಾಗೂ ಸಂಸತ್ತಿನಲ್ಲಿ ಧ್ವನಿ ಎತ್ತಲಿ. ಜನಪ್ರತಿನಿಧಿಗಳು ಜನ ರೊಂದಿಗೆ ಇರಬೇಕು. ಈ ಯೋಜನೆ ವಿರುದ್ಧ ಕಾನೂನು ಹೋರಾಟಕ್ಕೂ ಸಿದ್ಧರಾಗಬೇಕು ಎಂದರು.

ಉಡುಪಿ ಜಿಪಂ ಅಧ್ಯಕ್ಷೆ ಸವಿತಾ ಕೋಟ್ಯಾನ್, ಗಿರಿಜನ ಮುಖಂಡ ಗಿರಿಯಪ್ಪ ಚಿಕ್ಕಮಗಳೂರು ಮಾತನಾಡಿದರು.
ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿಯ ಮೂಲಕ ಮುಖ್ಯ ಮಂತ್ರಿಗೆ ಸಲ್ಲಿಸಲಾಯಿತು. ಪ್ರತಿಭಟನೆ ಯಲ್ಲಿ ಸಂಘದ ಅಧ್ಯಕ್ಷ ಸುಂದರ ಗೌಡ, ಮಾಜಿ ಅಧ್ಯಕ್ಷ ಶ್ರೀಧರ ಗೌಡ, ರೈತ ಸಂಘದ ಕಮಲಾಕ್ಷ, ಮಾಜಿ ತಾಪಂ ಅಧ್ಯಕ್ಷೆ ರಶ್ಮಿ ಶೆಟ್ಟಿ, ಶ್ಯಾಮಲಾ ಕುಂದರ್, ಶೋಭಾ ನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಮಣಿಪಾಲದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

Write A Comment