ಕರಾವಳಿ

ಶ್ರೀ ವೆಂಕಟ್ರಮಣ ದೇವಸ್ಥಾನದ 92ನೇ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಾಪನ

Pinterest LinkedIn Tumblr

vt_shardha_photo_2

ಮಂಗಳೂರು,ಅ.06: ಕರ್ನಾಟಕ ಕರಾವಳಿ ಜಿಲ್ಲೆಗಳ ಸುಪ್ರಸಿದ್ಧವಾದ ಉತ್ಸವ ಮಂಗಳೂರು ರಥಬೀದಿಯ ಶ್ರೀ ವೆಂಕಟ್ರಮಣ ದೇವಸ್ಥಾನದ ಆಚಾರ್ಯಮಠ ವಠಾರದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ವಿಶೇಷ ಶೋಭಾಯಾತ್ರೆ ಅಕ್ಟೋಬರ್ 5 ಅದಿತ್ಯವಾರ ಅತೀ ವಿಜೃಂಭಣೆಯಿಂದ ನಡೆಯಿತು.

ಶಾರದಾ ಮಾತೆಯ ಈ ಭವ್ಯ ಉತ್ಸವಕ್ಕೆ 92ನೇ ವರ್ಷದ ಸಂಭ್ರಮ. ಪ್ರತೀ ದಿನವೂ ಆ ದಿನದ ಸಂದರ್ಭ ಹಾಗೂ ಶಾಸ್ತ್ರಕ್ಕನುಗುಣವಾಗಿ ಶ್ರೀ ಮಾತೆಯ ವಿಗ್ರಹಕ್ಕೆ ಮಹಾಲಕ್ಷ್ಮಿ, ಸ್ಕಂದಮಾತಾ, ದುರ್ಗಾ, ಮಹಾಕಾಳಿ ಹೀಗೆ ಬೇರೆ ಬೇರೆ ರೂಪಗಳನ್ನು  ವಿಗ್ರಹಕ್ಕೆ ನೀಡಿ ಅಲಂಕರಿಸಲಾಯಿತು .

vt_shardha_photo_3a

ಸೇವಾ ರೂಪದಲ್ಲಿ ನವರಾತ್ರಿಯ ಸಂದರ್ಭದಲ್ಲಿ ವೇಷಧಾರಿಗಳು ರಸ್ತೆಯ ಉದ್ದಗಲಕ್ಕೂ ವೇಷಧಾರಿಗಳು ತಾವು ತೊಡುವ ವೇಷ ಹರಕೆಯ ರೂಪದಲ್ಲೂ ಹರಕೆ ಹೊತ್ತು ಶ್ರೀ ಮಾತೆಯ ಚರಣಗಳಿಗೆ ಸಮರ್ಪಿಸಿ ವೇಷಧಾರಿಗಳು ಪುನೀತರಾದರು .

vt_shardha_photo_3 vt_shardha_photo_4aa

ಅಬಾಲ ವೃದ್ಧರು, ಸ್ತ್ರೀ-ಪುರುಷರು ಈ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು  ಸಂಭ್ರಮಿಸಿದರು. ಉತ್ಸಾಹಿ ತರುಣರಿಂದ ಶ್ರೀದೇವಿಯ ವಿಗ್ರಹ ವಿಸರ್ಜನೆ ಸಂದರ್ಭದಲ್ಲಿ ದಾರಿಯುದ್ದಕ್ಕೂ ಭುಜ ಸೇವೆಯ ಮೂಲಕ ಸಾಗುವ ಶೋಭಾಯಾತ್ರೆ ಇದಾಗಿದ್ದು, ಈ ಭವ್ಯ ಶೋಭಾಯಾತ್ರೆ ಹಾಗೂ ಶಾರದಾ ಮಾತೆಯನ್ನು ನೋಡಲು ಸಹಸ್ರಾರು ಜನರು ದೇಶ ವಿದೇಶಗಳಿಂದ ಬಂದು ಪಾಲ್ಗೊಂಡು ಕೃತಾರ್ಥರಾದರು .

ಚಿತ್ರ : ಮಂಜು ನೀರೆಶ್ವಾಲ್ಲ್ಯ

Write A Comment