ಕರಾವಳಿ

ಕುದ್ರೋಳಿ : ಮಂಗಳೂರು ದಸರಾ ಶೋಭಾಯಾತ್ರೆ ಹಿನ್ನೆಲೆ – ಶನಿವಾರ ನಗರದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

Pinterest LinkedIn Tumblr

Kudroli_dasara_Prosetion_22

File Photo

ಮಂಗಳೂರು, ಅ.2: ಅ.4ರಂದು ನಡೆಯುವ ಮಂಗಳೂರು ದಸರಾ ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ನಗರ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ಮಂಗಳೂರು ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.

ಅ.4ರಂದು ಸಂಜೆ 4ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ವಿವಿಧ ಟ್ಯಾಬ್ಲೋಗಳ ಜನರೇಟರ್ ವಾಹನಗಳನ್ನೊಳಗೊಂಡ ಶೋಭಾಯಾತ್ರೆಯು ಮಣ್ಣಗುಡ್ಡೆ- ಲೇಡಿಹಿಲ್- ಲಾಲ್‌ಭಾಗ್-ಪಿವಿಎಸ್- ಕೆಎಸ್‌ಆರ್ ರಸ್ತೆ- ಕೆ.ಬಿ. ವೃತ್ತ-ಗಣಪತಿ ಹೈಸ್ಕೂಲ್ ರಸ್ತೆ-ಮೋಹಿನಿ ವಿಲಾಸ-ರಥಬೀದಿ-ಲೋವರ್ ಕಾರ್‌ಸ್ಟ್ರೀಟ್-ನ್ಯೂಚಿತ್ರ-ಅಳಕೆಯ ಮೂಲಕ ಕುದ್ರೋಳಿ ದೇವಸ್ಥಾನಕ್ಕೆ ಬಂದು ದೇವಳದ ಕೆರೆಯಲ್ಲಿ ಜಲಸ್ಥಂಭನಗೊಳ್ಳಲಿದೆ.

Kudroli_dasara_Prosetion_29

File Photo

ಈ ಸಮಯ ಸುಮಾರು 30,000 ಕ್ಕಿಂತಲೂ ಹೆಚ್ಚಿನ ಜನರು ಸೇರುವ ನಿರೀಕ್ಷೆ ಇದೆ. ಅಲ್ಲದೇ ಮೆರವಣಿಗೆಯುದ್ದಕ್ಕೂ ಜನರು ನಿಂತು ಮೆರವಣಿಗೆ ವೀಕ್ಷಿಸಲಿದ್ದಾರೆ. ಆದುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸದರಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತಾತ್ಕಾಲಿಕವಾಗಿ ಮಾರ್ಪಾಡು ಪರ್ಯಾಯ ವ್ಯವಸ್ಥೆ ಯನ್ನು ಸೂಚಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಪೊಲೀಸ್ ಕಮಿಷನರ್‌ರ ಆದೇಶದಲ್ಲಿ ತಿಳಿಸಲಾಗಿದೆ.

ಕೊಟ್ಟಾರ ಚೌಕಿ ಮತ್ತು ಬಜಪೆ ಕಡೆಗಳಿಂದ ನಗರಕ್ಕೆ ಬರುವ ಎಲ್ಲಾ ತರಹದ ವಾಹನಗಳು ಕುಂಟಿಕಾನ-ಕೆ.ಪಿ.ಟಿ-ನಂತೂರು ಮುಖೇನ ನಗರ ಪ್ರವೇಶಿಸುವುದು. ನಗರದಿಂದ ಕೊಟ್ಟಾರ, ಕುಂಟಿಕಾನ, ಬಜಪೆ, ಉಡುಪಿ, ಕಾರ್ಕಳ ಕಡೆಗೆ ಹೋಗುವ ಎಲ್ಲಾ ತರಹದ ವಾಹನಗಳು ಬಂಟ್ಸ್ ಹಾಸ್ಟೆಲ್ ಮೂಲಕ ನಂತೂರು ಸೇರಿ ಹೆದ್ದಾರಿ ಮುಖೇನ ಮುಂದುವರಿಯುವುದು.

Kudroli_dasara_Prosetion_36

File Photo

ಮೆರವಣಿಗೆ ಆರಂಭವಾದ ಕೂಡಲೇ ಜನಸಂದಣಿ ಅನುಸರಿಸಿ ಅದಕ್ಕೆ ಮೊದಲೇ ನ್ಯೂಚಿತ್ರಾದಿಂದ ಕುದ್ರೋಳಿ ಕಡೆಗೆ, ಅಳಕೆ ಜಂಕ್ಷನ್‌ನಿಂದ ಕುದ್ರೋಳಿ ದೇವಸ್ಥಾನದ ಕಡೆಗೆ ಎಲ್ಲಾ ತರಹದ ವಾಹನ ಸಂಚಾರವನ್ನು ನಿಷೇಧಿಸಬೇಕಾಗಿದೆ. ಸದರಿ ವಾಹನಗಳು ಕಂಡತ್‌ಪಳ್ಳಿ -ಮಂಡಿ-ಕುದ್ರೋಳಿ-ಬೊಕ್ಕಪಟ್ಣ ಮೂಲಕ ಸಂಚರಿಸುವುದು.

ಮೆರವಣಿಗೆಯ ಹಾದಿಯನ್ನೂ ಅನುಸರಿಸಿ ಆಯಾ ಮಾರ್ಗಗಳಲ್ಲಿ ಮೆರವಣಿಗೆ ಸಮಯದಲ್ಲಿ ಸಂಚಾರ ನಿಷೇಧಿಸಲಾಗಿದೆ. ಮೆರವಣಿಗೆಯು ಆಯಾ ಜಂಕ್ಷನ್‌ಗಳನ್ನು ತಲುಪುವ ಸಂದರ್ಭದಲ್ಲಿ ಎದುರಿನಿಂದ ಮತ್ತು ಕೂಡು ರಸ್ತೆಗಳಿಂದ ಬರುವ ಎಲ್ಲಾ ತರಹದ ವಾಹನಗಳನ್ನು ನಿಷೇಧಿಸಲಾಗಿದೆ.

Kudroli_dasara_Prosetion_33

File Photo

ಮೆರವಣಿಗೆಯು ಪ್ರಾರಂಭವಾದ ನಂತರ ನಗರದ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣಕ್ಕೆ ಬಂದು ಹೋಗುವ ಎಲ್ಲಾ ಕೆಎಸ್ಸಾರ್ಟಿಸಿ ಬಸ್ಸುಗಳು ಕೆ.ಪಿ.ಟಿ – ಕುಂಟಿಕಾನದ ಮೂಲಕವೇ ಸಂಚರಿಸುವುದು. ಮೆರವಣಿಗೆ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲಾ ತರಹದ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

Write A Comment