ಕರಾವಳಿ

ಕಾರಂತರು ಇದ್ದಿದ್ದರೇ ಇಷ್ಟು ವರ್ಷ ಈ ಪ್ರಶಸ್ತಿಗೆ ಆಯ್ಕೆಯಾದ ವ್ಯಕ್ತಿಗಳನ್ನು ಆಕ್ಷೇಪಿಸುತ್ತಿದ್ದರು : ಶಾಸಕ ರಮೇಶ್ ಕುಮಾರ್ ಅಭಿಪ್ರಾಯ

Pinterest LinkedIn Tumblr

ಕುಂದಾಪುರ: ರಾಷ್ಟ್ರ ನಾಯಕರ ಭಾವಚಿತ್ರದೊಂದಿಗೆ ಸಿನಿಮಾ ನಾಯಕರ ಭಾವಚಿತ್ರವನ್ನು ತೋರಿಸಿದಾಗ ಇಂದಿನ ವಿದ್ಯಾರ್ಥಿಗಳು ರಾಷ್ಟ್ರ ನಾಯಕರನ್ನು ಗುರುತಿಸುವಲ್ಲಿ ವಿಫಲರಾಗುತ್ತಾರೆ. ಆದರೆ ಸಿನಿಮಾ ನಾಯಕ ನಟರನ್ನು ಗುರಿತಿಸುತ್ತಾರೆ. ಇದು ಶಿಕ್ಷಣ ವ್ಯವಸ್ಥೆಯ ಅವಸ್ಥೆ. ನಮ್ಮ ಶಿಕ್ಷಣ ಸಂಸ್ಕೃತಿಯನ್ನು ಕಲಿಸುತ್ತಿಲ್ಲ ಎಂದು ಮಾಜಿ ಸಭಾಪತಿ, ಶಾಸಕ ರಮೇಶ ಕುಮಾರ್ ಹೇಳಿದರು.

Kota_Karantha_bhavana
ಅವರು ಅ.೧ರಂದು ಕೋಟ ಕಾರಂತ ಕಲಾಭವನದಲ್ಲಿ, ಕೋಟತಟ್ಟು ಗ್ರಾ.ಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಡಾ.ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನ ಕೋಟ ಇದರ ಸಂಯುಕ್ತ ಆಶ್ರಯದಲ್ಲಿ, ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ಹುಟ್ಟೂರು ಪ್ರಶಸ್ತಿ ಪ್ರಧಾನ ದಶಮಾನೋತ್ಸವದ ಸರಣಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಶ್ರೀರಾಮಚಂದ್ರ ಜಾತಿ,ಧರ್ಮ, ಸಂಘಟನೆಗಳಿಗೆ ಸೀಮಿತನಲ್ಲ. ರಾಜಕೀಯದಲ್ಲಿ ಅಽಕಾರಕ್ಕಾಗಿ ಆಸೆ ಹೊಂದದ ಪ್ರತಿಯೊಬ್ಬ ಜನಪ್ರತಿನಿಽಗೂ ಶ್ರೀರಾಮಚಂದ್ರ ಆದರ್ಶಮೂರ್ತಿಯಾಗಬೇಕು. ನಾನು ಪದವಿ ಅಽಕಾರಗಳಿಂದ ದೂರವಿರುವೆ ಎಂಬ ಅತೃಪ್ತಿ ನನಗಿಲ್ಲ. ನಾನೊಬ್ಬ ಸಂತೃಪ್ತ ರಾಜಕಾರಣಿ ಎಂದರು. ಕಾರಂತರು ಜೀವಂತವಾಗಿದ್ದರೆ ಇಷ್ಟು ವರ್ಷ ಈ ಪ್ರಶಸ್ತಿಗೆ ಆಯ್ಕೆಯಾದ ವ್ಯಕ್ತಿಗಳನ್ನು ಆಕ್ಷೇಪಿಸುತ್ತಿದ್ದರು ಎಂದು ನುಡಿದರು.

ಕೋಟತಟ್ಟು ಗ್ರಾ.ಪಂ ಅಧ್ಯಕ್ಷೆ ಶೋಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ಹುಟ್ಟೂರು ಪ್ರಶಸ್ತಿ ಕುರಿತಾದ ಸ್ಮರಣ ಸಂಚಿಕೆಯನ್ನು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಡುಗಡೆಗೊಳಿಸಿದರು. ಶ್ರೀಕ್ಷೇತ್ರ ಅಂಬಲಪಾಡಿ ದೇವಾಲಯದ ಧರ್ಮದರ್ಶಿ ಡಾ.ವಿಜಯ ಬಲ್ಲಾಳ ಅವರು ಸಾಂಸ್ಕೃತಿ ಸುಗ್ಗಿಯನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಪ್ರಯುಕ್ತ ಕ.ಸಾ.ಪ ಉಡುಪಿ ಜಿಲ್ಲೆ ಹಾಗೂ ಜೆ.ಸಿ.ಐ ಕಲ್ಯಾಣಪುರ, ವಿವೇಕಾ ಬಾಲಕಿಯರ ಪ್ರೌಡಶಾಲೆ ಕೋಟ, ಚೇತನಾ ಪ್ರೌಡಶಾಲೆ ಹಂಗಾರಕಟ್ಟೆ, ಕವೆಂಪು ಶತಮಾನೋತ್ಸ ಶಾಲೆ ತೆಕಟ್ಟೆ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಲನ ಜರುಗಿತು.

ವಿವೇಕಾ ಪ್ರೌಡಶಾಲೆಯ ವಿದ್ಯಾರ್ಥಿನಿ ಪಾವನ ಸಾಹಿತ್ಯ ಸಮ್ಮೇಲನದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಾನು ಓದಿದ ಪುಸ್ತಕ, ಕಥಾಗೋಷ್ಠಿ, ಕವಿಗೋಷ್ಠಿ ನಡೆಯಿತು.

ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಜಿ.ಪಂ.ಸದಸ್ಯೆ ಸುನಿತಾ ರಾಜಾರಾಮ್, ತಾ.ಪಂ ಸದಸಯ ರಾಘವೇಂದ್ರ ಕಾಂಚನ್, ಭರತ್ ಕುಮಾರ್ ಶೆಟ್ಟಿ, ಪಂಚಾಯತ್ ಸದಸ್ಯ ಪ್ರಮೋದ್ ಹಂದೆ, ಪ್ರಭಾಕರ ಕಾಂಚನ್, ಜಯಶ್ರೀ, ಮಲ್ಯಾಡಿ ಸದರಾಮ ಶೆಟ್ಟಿ, ಉಡುಪಿ ಜಿಲಾ ಕ.ಸಾ.ಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜೆ.ಸಿ ಅಧ್ಯಕ್ಷ ವಿಜಯ್ ಸುವರ್ಣ ಬಕಾಡಿ, ವಿವೇಕಾ ಬಾಲಕಿಯರ ಪ್ರೌಡಶಾಲೆಯ ಮುಖ್ಯ ಶಿಕ್ಷಕ ಜಗದೀಶ್ ಹೊಳ್ಳ, ಚೇತನಾ ಪ್ರೌಡ ಶಾಲೆಯ ಗಣೇಶ ಜಿ. ಮುಂತಾದವರು ಉಪಸ್ಥಿತರಿದ್ದರು.

ಸಮಿತಿಯ ಕಾರ್ಯಧ್ಯಕ್ಷ ಆನಂದ್ ಸಿ.ಕುಂದರ್ ಸ್ವಾಗತಿಸಿ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕ ಮಾತನಾಡಿ, ಸತೀಶ್ ಕುಮಾರ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು.

Write A Comment