ಕರಾವಳಿ

ವೃಕ್ಷ ಬಿಸ್‌ನೆಸ್‌ ಸೊಲ್ಯೂಶನ್ಸ್‌ ವಂಚನೆ ಪ್ರಕರಣ: ಅರೋಪಿಗಳ ಬಂಧನ

Pinterest LinkedIn Tumblr

Vriksha_Two_Arest

ಮಂಗಳೂರು,ಸೆ.27: ನಗರದ ಕೆ.ಎಸ್‌.ರಾವ್‌ ರಸ್ತೆಯ ಯುಟಿಲಿಟಿ ಟವರ್ನಲ್ಲಿರುವ ವೃಕ್ಷ ಬಿಸ್‌ನೆಸ್‌ ಸೊಲ್ಯೂಶನ್ಸ್‌ ಸಂಸ್ಥೆಯು ಏಜಂಟರ ಮುಖಾಂತರ ಸಾರ್ವಜನಿಕರಿಗೆ ಲಕ್ಷಾಂತರ ರೂಪಾಯಿ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂದರು ಪೊಲೀಸ್ ಇಬ್ಬರನ್ನು ಬಂಧಿಸಿದ್ದಾರೆ.

ಸಂಸ್ಥೆಯ ಆಡಳಿತ ನಿರ್ದೇಶಕ ಸುಲ್ತಾನ್‌ ಬತ್ತೇರಿಯ ಜೀವರಾಜ್‌ ಪುರಾಣಿಕ್‌ (50) ಮತ್ತು ನಿರ್ದೇಶಕ ಕೋಡಿಕಲ್‌ನ ರೋಶನ್‌ ಡಿ’ಸೋಜಾ (45) ಬಂಧಿತ ಅರೋಪಿಗಳು.

ವೃಕ್ಷ ಸಂಸ್ಥೆಯು ತನ್ನ ವ್ಯವಹಾರವನ್ನು6  ವರ್ಷಗಳ ಹಿಂದೆ ಆರಂಭಿಸಿದ್ದು ಸಾರ್ವಜನಿಕರಿಂದ ಏಜಂಟರ ಮುಖಾಂತರ ಸುಮಾರು 35 ಕೋಟಿ ರೂ. ಸಂಗ್ರಹಿಸಿರ ಬೇಕೆಂದು ಹೇಳಲಾಗಿದೆ. ಏಜಂಟರಿಗೆ ಶೇ. 16 ಮತ್ತು ಸಾರ್ವಜನಿಕರಿಗೆ ಶೇ. 18 ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ ಠೇವಣಿ ಸಂಗ್ರಹಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಸಂಸ್ಥೆಯು ತನ್ನ ವ್ಯವಹಾರವನ್ನು 2012 ರ ತನಕ ಚೆನ್ನಾಗಿ ನಡೆಸಿತಿದ್ದು ಆ ಬಳಿಕ ಕೆಲವು ಮಂದಿ ಹೊಸ ನಿರ್ದೇಶಕರ ಮತ್ತು ಸಿಬಂದಿಯ ಪ್ರವೇಶ ಆರಂಭವಾದ ಬಳಿಕ ಅವ್ಯವಹಾರಕ್ಕೆ ನಾಂದಿಯಾಯಿತು ಎನ್ನಲಾಗಿದೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Write A Comment