ಕರಾವಳಿ

ವಾಮದಪದವು: ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ

Pinterest LinkedIn Tumblr

nss_bntwl_photo_1

ಬಂಟ್ವಾಳ,ಸೆ.26: ಬದುಕಿನ ಮೌಲ್ಯಗಳನ್ನು ಬೆಳೆಸಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಜಾಗತೀಕರಣದ ಇಂದಿನ ದಿನಗಳಲ್ಲಿ ಬದುಕಿನ ಪಡಿ ಅಚ್ಚುಗಳನ್ನು ರೂಪಿಸಲು ಸಕರಾತ್ಮಕ ಚಿಂತನೆ ಅತ್ಯಗತ್ಯ ಎಂದು ಬೆಳ್ತಂಗಡಿಯ ವಾಣಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಯದುಪತಿ ಗೌಡ ಹೇಳಿದರು. ಅವರು ವಾಮದಪದವು ಸರಕಾರಿಕಾಲೇಜಿನರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಮನಸ್ಸುಕಟ್ಟುವ ಸಾಮಾಜಿಕ ಸಾಮರಸ್ಯ ಬಿಂಬಿಸುವ ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳು ನೈತಿಕ ಮೌಲ್ಯಗಳ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರ್ಥಶಾಸ್ತ್ರ‌ಉಪನ್ಯಾಸಕರಾದ ಪ್ರೊ.ಹರಿಪ್ರಸಾದ್.ಬಿ.ಶೆಟ್ಟಿ ವಹಿಸಿದ್ದರು. ಯೋಜನಾಧಿಕಾರಿಯಾದ ಪ್ರೊ.ಸುರೇಶ್ ವಿಟ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು.ಸೌಮ್ಯ ಸ್ವಾಗತಿಸಿ , ಕು. ಹೆಲನ್ ವಂದಿಸಿ ,ಕವಿತಾ ಕಾರ್ಯಕ್ರಮ ನಿರೂಪಿಸಿದರು. ವೇದಿPಯಲ್ಲಿ ಯೋಜನಾಧಿಕಾರಿ ಪ್ರೊ.ಶಶಿಕಲಾ.ಕೆ ಉಪಸ್ಥಿತರಿದ್ದರು.ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಪ್ರಯುಕ್ತ ರಸಪ್ರಶ್ನೆ ,ಗ್ರಾಮ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Write A Comment