ಮಂಗಳೂರು,ಸೆ.25: ಮುಸ್ಲಿಂ ಸೆಂಟ್ರಲ್ ಕಮಿಟಿಯ ವತಿಯಿಂದ ಕಾಶ್ಮೀರದಲ್ಲಿ ನೆರೆಯಿಂದ ನಿರಾಶ್ರಿತರಾದವರಿಗೆ ಗುರುವಾರ ಸೌತ್‌ವಾರ್ಫ್‌ನಲ್ಲಿ ನಿಧಿ ಸಂಗ್ರಹಿಸಲಾಯಿತು.
ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಹಾಜಿ.ಕೆ.ಎಸ್.ಮೊಹಮ್ಮದ್ ಮಸೂದ್, ಉಪಾಧ್ಯಕ್ಷರಾದ ಇಬ್ರಾಹಿಂ ಕೋಡಿಜಾಲ್, ಕೆ.ಅಶ್ರಫ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್, ಕಾರ್ಯದರ್ಶಿ ಮೊಹಮ್ಮದ್ ಬಾವ, ಸಿ.ಎಂ.ಹನೀಫ್, ಸಿ.ಎಂ.ಮುಸ್ತಾಫಾ, ರಿಯಾಜುದ್ದೀನ್, ಅಬ್ದುಲ್ ಮಜೀದ್.ಪಿ.ಪಿ, ಅಹಮ್ಮದ್, ಬಾವಾ ಬಜಲಾ, ಪತ್ರಿಕಾ ಕಾರ್ಯದರ್ಶಿ ಬಿ.ಅಬೂಬಕ್ಕರ್ ಭಾಗವಹಿಸಿದ್ದರು.






