ಕರಾವಳಿ

ಹರ್ಷ ವಾರದ ಅತಿಥಿ _ ಇತಿಹಾಸ ತಜ್ಞ ಡಾ.ಕೆ.ಜಿ.ವಸಂತ ಮಾಧವ

Pinterest LinkedIn Tumblr

harsha_varada_athti_1

ಮಂಗಳೂರು,ಸೆ.25: ಮಂಗಳೂರು ಆಕಾಶವಾಣಿಯ ಹರ್ಷ ವಾರದ ಅತಿಥಿಯ 161 ನೇ ಕಾರ್ಯಕ್ರಮದಲ್ಲಿ ಸೆಪ್ಟಂಬರ್ 28 ರಂದು ಬೆಳಿಗ್ಗೆ 8.50 ಕ್ಕೆ ಇತಿಹಾಸ ತಜ್ಞ ಡಾ. ಕೆ.ಜಿ .ವಸಂತ ಮಾಧವ ಭಾಗವಹಿಸಲಿದ್ದಾರೆ.

ಮೂಲ್ಕಿ ವಿಜಯ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ನಿವೃತ್ತರಾದ ಇವರು ಧಾರವಾಢ ವಿ.ವಿ. ಯಿಂದ ‘ಕರ ಜಿಲ್ಲೆಯ ರಾಜಕೀಯ ಇತಿಹಾಸ 1565  ರಿಂದ 1763 ‘ ಎಂಬ ವಿಷಯದಲ್ಲಿ ಸಂಶೋಧನೆ ಮಾಡಿ ಪಿಹೆಚ್‌ಡಿ ಪದವಿ ಪಡೆದರು. ಕಲ್ಲಿಕೋಟೆ ಮತ್ತು ಕೊಯಂಬುತ್ತೂರಿನ ಭಾರತೀಯಾರ್ ವಿ.ವಿ.ಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಪಿಹೆಚ್‌ಡಿ, ಎಂಫಿಲ್ ಪರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇಂಗ್ಲೆಂಡಿನ ರಾಯಲ್ ವಶಿಯಾಟಿಕ್ ಸೊಸೈಟಿಯ ಫೆಲೋ ಆಗಿ ಕಾರ್ಯಸಲ್ಲಿಸಿದ್ದಾರೆ.

harsha_varada_athti_2

ಶ್ರೀಲಂಕಾ, ಅಮೇರಿಕದಲ್ಲೂ ತಮ್ಮ ಪ್ರಬಂಧ ಮಂಡಿಸಿದ್ದಾರೆ. ಕರಾವಳಿ ಕರ್ನಾಟಕದ ಧರ್ಮಗಳು, ಪಶ್ಚಿಮ ಕರ್ನಾಟಕ ಮತ್ತದರ ಭೂಮಿಯ ಸಂಬಂಧಗಳು, ಕರ್ನಾಟಕದಲ್ಲಿ ಆಯುರ್ವೇದದ ಸಂಧಿಗ್ಧತೆ ಮತ್ತು ಪುನರುತ್ಥಾನ, ಟಿಪ್ಪು ಸುಲ್ತಾನ್ ಕಾಲದ ವೈದ್ಯಕೀಯ ವ್ಯವಸ್ಥೆ, ಕಡತ ಈ ಕುರಿತಾಗಿ ಸಂಶೋಧನೆ ನಡೆಸಿದ್ದಾರೆ. ಇತಿಹಾಸ ತಜ್ಞರಾದ ಬಿ.ಎ.ಸಾಲೆತ್ತೂರು, ಜಿ.ಎಸ್.ದೀಕ್ಷಿತ್ ಕೊಡುಗೆಗಳ ಕುರಿತು ಪ್ರಬಂಧ ಮಂಡನೆ ಮಾಡಿದ ಇವರು ತಮ್ಮ ಸಾಧನೆಯನ್ನು ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇವರನ್ನು ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಸಂದರ್ಶಿಸಿದ್ದಾರೆ. ಮುಂದಿನ ವಾರದ ಅತಿಥಿಯಾಗಿ ನಿವೃತ್ತ ಲೋಕಾಯುಕ್ತರಾದ ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ ಭಾಗವಹಿಸಲಿದ್ದಾರೆ.

Write A Comment