ಅಂತರಾಷ್ಟ್ರೀಯ

ಲಂಡನ್‌ನಲ್ಲಿ ಆರ್ಯವೇದ ವೈದ್ಯ ಪದ್ದತಿಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಉಡುಪಿ ಮೂಲದ ವೈದ್ಯೆ

Pinterest LinkedIn Tumblr

Pratheema Nagesha Udupi

ಉಡುಪಿ: ಭಾರತದ ಆರ್ಯುವೇದ ಪದ್ದತಿಗೆ ಶತಮಾನಗಳ ಇತಿಹಾಸವಿದ್ದು, ಇಂದು ಆಧುನಿಕ ವೈದ್ಯ ಪದ್ದತಿಯ ಪ್ರಭಾವದಿಂದ ಆರ್ಯುವೇದ ಬೇಡಿಕೆ ಕಳೆದುಕೊಳ್ಳುತ್ತಿದೆ. ಆದರೆ ವಿದೇಶಗಳಲ್ಲಿ ನಮ್ಮ ಪ್ರಾಚೀನ ಆರ್ಯುವೇದ ಪದ್ದತಿಯನ್ನು ಅಬಿವೃದ್ಧಿಪಡಿಸುವ ಕುರಿತು ಚಿಂತನೆ, ಅಧ್ಯಯನಗಳು ನಡೆಯುತ್ತಿದೆ. ಲಂಡನ್‌ನಲ್ಲಿ ಭಾರತೀಯ ಆರ್ಯುವೇದ ವೈದ್ಯ ತಂಡದ ನೆರವಿನಿಂದ ಈ ಪದ್ದತಿ ಅಳವಡಿಕೆಗೆ ಕ್ರಮಕೈಗೊಳ್ಳುತ್ತಿದ್ದು, ಉಡುಪಿ ಮೂಲದ ವೈದ್ಯೆಯೊಬ್ಬರು ತಂಡದಲ್ಲಿ ಪ್ರಮುಖ ಕಾರ್‍ಯ ನಿರ್ವಹಿಸುತ್ತಿದ್ದಾರೆ.

Pratheema Nagesha Udupi (1)

ಉಡುಪಿ ಮೂಲದ ಪ್ರತಿಮ ನಾಗೇಶ : ಉಡುಪಿ ಜಿಲ್ಲೆಯ ಪ್ರಸಿದ್ಧ ಗರಿಕೆಮಠದ ಅರ್ಕಗಣಪತಿ ದೇವಾಲಯದ ಅನುವಂಶಿಕ ಮುಖ್ಯಸ್ಥ ಜಿ.ಆನಂತಪದ್ಮನಾಭ ಅಡಿಗರ ಪುತ್ರಿಯಾಗಿರುವ ಪ್ರತಿಮಾ ನಾಗೇಶ ಅವರು ವೃತ್ತಿಯಲ್ಲಿ ಆರ್ಯುವೇದ ವೈದ್ಯಯಾಗಿದ್ದು, ಲಂಡನ್‌ನಲ್ಲಿ ಆರ್ಯುವೇದ ಹಾಗೂ ವಾಸ್ತುಶಾಸ್ತ್ರದ ಪ್ರಚಾರಕ್ಕೆ ಸಾಕಷ್ಟು ಕೋಡುಗೆ ನೀಡುತ್ತಿದ್ದಾರೆ.

ಲಂಡನ್‌ನಲ್ಲಿ ಆರ್ಯುವೇದದ ಅಭಿವೃದ್ಧಿ : ಲಂಡನ್‌ನ ಸರಕಾರದ ಕಾನೂನು ಸಚಿವ ಸಿಮಾನ್ ಹಗ್ಸ್ ಅವರು ಆರ್ಯುವೇದ ಪದ್ದತಿಯ ಅಭಿವೃದ್ಧಿಗೆ ಶಾಸನವೊಂದನ್ನು ರಚಿಸಿದ್ದು, ಅಲ್ಲಿನ ಪಾರ್ಲಿಮೆಂಟ್‌ನ ಸಮಾನ್ಯ ಸಭೆಯಲ್ಲಿ ನೂರು ಮಂದಿ ಆರ್ಯುವೇದ ವೈದ್ಯರ ಸಭೆ ನಡೆಸಿ ಆರ್ಯುವೇದ ಕುರಿತು ಮಾಹಿತಿ ಸಂಗ್ರಹಿಸಲಾಗಿತ್ತು. ಈ ಸಭೆಯಲ್ಲಿ ಉಡುಪಿಯ ಡಾ.ಪ್ರತಿಮಾ ನಾಗೇಶರವರು, ಆರ್ಯುವೇದ ಮಹತ್ವ ಮತ್ತು ಭಾರತದಲ್ಲಿ ಈ ಪದ್ದತಿಗಿರುವ ಇತಿಹಾಸ, ಇತರ ವೈದ್ಯ ಪದ್ದತಿಗಿಂತ ಆರ್ಯುವೇದದ ಭಿನ್ನತೆಯ ಕುರಿತು ಗಮನಸೆಳೆದು, ಲಂಡನ್ ಸರಕಾರ ಈ ಪದ್ದತಿಯನ್ನು ಅಳವಡಿಸಿಕೊಳ್ಳಲು ಪ್ರಮುಖ ಪಾತ್ರವಹಿಸಿದ್ದಾರೆ.

 

Write A Comment