ಕರಾವಳಿ

ಮುಸ್ಲಿ ವಿಧ್ಯಾರ್ಥಿಗಳ ಮೇಲೆ ಹಿಂದೂಪರ ಸಂಘಟನೆಗಳು ನಡೆಸಿರುವ ಹಲ್ಲೆಯನ್ನು ಮುಸ್ಲಿಂ ಸೆಂಟ್ರಲ್ ಕಮಿಟಿ ಖಂಡಿಸುತ್ತದೆ : ಕೆ.ಎಸ್.ಮಸೂದ್

Pinterest LinkedIn Tumblr

Muslim_central_comity_ (1)

ಮಂಗಳೂರು, ಸೆ.22: ಸೆಪ್ಟಂಬರ್ ೧೮ರಂದು ಪಂಪ್‌ವೆಲ್‌ನಲ್ಲಿರುವ ಇನ್ಸಿಟ್ಯೂಟ್ ಆಫ್ ಫೆಯರ್ ಆಫ್ ಸೇಪ್ಟಿ ಇಂಜಿನಿಯರ್ ಕಾಲೇಜಿನಲ್ಲಿ ಕಲಿಯುತ್ತಿರುವ ಆರು ಮಂದಿ ಮುಸ್ಲಿ ವಿಧ್ಯಾರ್ಥಿಗಳ ಮೇಲೆ ಬಜರಂಗದಳದ ಕಾರ್ಯಕರ್ತರ ತಂಡ ನಡೆಸಿರುವ ಹಲ್ಲೆಯನ್ನು ಖಂಡಿಸುವುದಾಗಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಗೂ ಮಾಜಿ ಎಮ್.ಎಲ್.ಸಿ ಕೆ.ಎಸ್.ಮೊಹಮ್ಮದ್ ಮಸೂದ್ ಅವರು ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೆಲವು ಪುಂಡ ಯುವಕರು ಕಾನೂನನ್ನು ಕೈಗೆತ್ತಿಕೊಂಡು ನೈತಿಕ ಪೊಲೀಸ್ ಗಿರಿಯನ್ನು ಮಾಡುತ್ತಿರುವುದು ನಿಜಕ್ಕೂ ಖಂಡನೀಯ. ಇತ್ತೀಚಿಗೆ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಬ್ದುಲ್ ಖಾದರ್ ಎಂಬ ಮುಸ್ಲಿಂ ಯುವಕನ ಮೇಲೆ ಸುಳ್ಳು ಅಪಾದನೆ ಮಾಡಿ ಸುಳ್ಳು ಕೇಸು ಹಾಕಿರುವುದನ್ನು ಕೂಡ ನಮ್ಮ ಸಂಸ್ಥೆ ಖಂಡಿಸುತ್ತದೆ. ಗೋ ಸಾಗಾಟದ ನೆಪದಲ್ಲಿ ಕೆಲವು ಕೋಮುವಾದಿ ಹಿಂದೂ ಸಂಘಟನೆಗಳ ಯುವಕರು ಕಾನೂನನ್ನು ಕೈಗೆತ್ತಿಕೊಂಡು ಲಾರಿ ಚಾಲಕ ಹಾಗೂ ಕ್ಲೀನರ್ ಗೆ ಮರಣಾಂತಿಕ ಹಲ್ಲೆ ನಡೆಸಿದ್ದು, ಇದು ಕೂಡ ಕೋಮ ಘರ್ಷಣೆ ಮಾಡಲು ನಡೆಸಿರುವ ಹುನ್ನಾರವಾಗಿರುತ್ತದೆ ಎಂದು ಹೇಳಿದರು.

ಇತ್ತೀಚೆಗೆ ಲೋಕಾಸಭಾ ಸದಸ್ಯರಾದ ಶ್ರೀ ಸಾಕ್ಷಿ ಮಹರಾಜ್ ಎಂಬವರು ಮುಸ್ಲಿಂ ಸಮುದಾಯದ ಮದರಸಗಳು ಭಯೋತ್ಪಾದನೆಯ ಕೇಂದ್ರವಾಗಿರುತ್ತದೆ ಎಂದು ನೀಡಿದ ಹೇಳಿಕೆಯನ್ನು ನಮ್ಮ ಸಂಸ್ಥೆಯು ಖಂಡ ತುಂಡವಾಗಿ ಖಂಡಿಸುತ್ತದೆ. ಎಲ್ಲಾ ಧರ್ಮಗಳು ಪರಸ್ಪರ ಸಹೋದರತೆಯನ್ನು ಪ್ರತಿಪಾದಿಸಿದ್ದು , ಇದಕ್ಕೆ ವಿರುದ್ದವಾಗಿ ಕೆಲವು ಕೋಮುವಾದಿ ಪಕ್ಷಗಳು ಹಾಗೂ ನಾಯಕರು ಶಾಂತಿ ಕೆದಕುವ ಹೇಳಿಕೆ ನೀಡಬಾರದೆಂದು ನಾವು ಈ ಮೂಲಕ ಸರ್ವ ಧರ್ಮಿಯರಲ್ಲಿ ವಿನಂತಿಸುತ್ತೇವೆ ಎಂದರು.

Muslim_central_comity_ (4) Muslim_central_comity_ (2) Muslim_central_comity_ (3)

ಆಕ್ಟೋಬರ್ ಮೊದಲ ವರದಲ್ಲಿ ನಡೇಯುವ ಬಕ್ರೀದ್ ಹಬ್ಬ ಹಾಗೂ ನಂತರದ ಮೂರು ದಿನಗಳಲ್ಲಿ ಮುಸ್ಲಿಂ ಸಮುದಾಯದವರು ಖುರ್ಬಾನಿ ಮಾಡುವ ಸಂಪ್ರದಾಯವು ಕಡ್ಡಾಯವಾಗಿದ್ದು ಈ ಸಂದರ್ಭಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಜಿಲ್ಲಾಡಳಿತ ಮತ್ತು ಪೊಲಿಸ್ ಇಲಾಖೆ ಸಹಕರಿಸಬೇಕೆಂದು ಮನವಿ ಸಲ್ಲಿಸಲಾಗುವುದು. ಅಲ್ಲದೇ ಮುಂಬರುವ ದಸಾರ ಮತ್ತು ಇತರ ಹಬ್ಬದ ಸಂಧರ್ಭಗಳಲ್ಲಿ ಶಾಂತಿ ಕಾಪಾಡುವಂತೆ ವಿನಂತಿಸುತ್ತಿದ್ದೇವೆ ಎಂದು ಮಸೂದ್ ತಿಳಿಸಿದರು.

ಇದೇ ಸಂದರ್ಭದಲ್ಲಿ ನಮ್ಮ ದೇಶದ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು ಭಾರತದ ಮುಸ್ಲಿಂಮರು ದೇಶಕ್ಕಾಗಿ ಪ್ರಾಣ ಕೊಡಲು ಸಿದ್ಧ ಎಂಬುದಾಗಿ ನೀಡಿರುವ ಹೇಳಿಕೆಯನ್ನು ಶ್ಲಾಘಿಸುವುದಾಗಿ ಮಸೂದ್ ತಿಳಿಸಿದರು.

ಮುಸ್ಲಿಂ ಸೆಂಟ್ರಲ್ ಕಮಿಟಿಯು 1968 ರಲ್ಲಿ ಆರಂಭಗೊಂಡಿದ್ದು, ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಮು ಸೌಹಾರ್ದತೆ ಕಾಪಾಡುವಲ್ಲಿ ದುಡೀಯುತ್ತಿದ್ದು ಕೋಮು ಗಲಭೆಗಳು ನಡೆದ ಸಂದರ್ಭಗಳಲ್ಲಿ ಸೌಹಾರ್ಧತೆಯನ್ನು ಮೂಡಿಸುವಲ್ಲಿ ಹಾಗೂ ನೊಂದವರಿಗೆ ಸಹಾಯವನ್ನು ಮಾಡುವಲ್ಲಿ ಯಶಸ್ವಿಗೊಂಡಿರುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸೆಂಟ್ರಲ್ ಕಮಿಟಿಯ ಪದಾಧಿಕಾರಿಗಳಾದ ಹಮೀಸ್ ಕಂದಕ್, ಕೋಡಿಜಾಲ್ ಇಬ್ರಾಹಿಂ, ಕೆ.ಅಶ್ರಫ್ ಮುಂತಾದವರು ಉಪಸ್ಥಿತರಿದ್ದರು.

Write A Comment