ಕುಂದಾಪುರ: ಸಮಾಜದಲ್ಲಿ ಜಾಗೃತಿ ಮೂಡಿಸುವುದರರ ಜೊತೆಯಲ್ಲಿ ಮಾಜವು ಒಗ್ಗಟ್ಟಿನಿಂದ ಸಂಘಟಿತವಾಗಬೇಕಾಗಿದೆ. ಈ ಸಂಘಟನೆ ಯಾರ ವಿರುದ್ದವೂ ಅಲ್ಲ. ಬದಲಾಗಿ ತಮ್ಮತನವನ್ನು ಉಳಿಸಿಕೊಂಡು ಪ್ರತಿಯೊಬ್ಬರೂ ಸ್ವಾಭಿಮಾನಿಯಾಗಿ ಬೆಳೆಯಬೇಕೆನ್ನುವ ನೆಲೆಯಲ್ಲಿ ಹಿತರಕ್ಷಣಾ ವೇದಿಕೆಯ ಮೂಲಕ ಕಾರ್ಯ ನಿರ್ವಹಿಸುತ್ತಿದೆ. ಜಿಎಸ್‌ಬಿ ಸಮಾಜದವರು ಶಾಂತಿಪ್ರಿಯರು ಹಾಗೂ ದೇಶಪ್ರೇಮಿಗಳು. ಈ ಸಮಾಜಕ್ಕೆ ರಾಜಕೀಯವಾಗಿ ಅಥವಾ ಸರಕಾರಿ ಸೌಲಭ್ಯಗಳ ಅಪೇಕ್ಷೆಯಿಲ್ಲ ಎಂದು ಖ್ಯಾತ ಲೆಕ್ಕಪರಿಶೋಧಕ ಉಪ್ಪುಂದ ರಾಮಚಂದ್ರ ಪ್ರಭು ಹೇಳಿದರು.
ಯಡ್ತರೆ ಜೆಎನ್‌ಆರ್ ಕಲಾಮಂದಿರದಲ್ಲಿ ಭಾನುವಾರ ನಡೆದ ಬೈಂದೂರು ವಲಯ ಮಟ್ಟದ ಜಿಎಸ್‌ಬಿ ಸಾಮಾಜಿಕ ಜಾಗೃತಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಸಮಾಜದಲ್ಲಿ ಉತ್ತಮ ಕಾರ್ಯಕರ್ತರ ನಿರ್ಮಾಣವಾಗಬೇಕು. ಸಮಾಜದಲ್ಲಿ ದಾನಿUಳ ಸಮಸ್ಯೆಯಿಲ್ಲ. ಸಮಾಜದಲ್ಲಿ ಶೇ೩% ರಷ್ಟಿರುವ ಬಡಜನರನ್ನು ಮುಖ್ಯವಾಹಿನಿಗೆ ತರುವಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ನಂತರ ಖ್ಯಾತ ಕೈಗಾರಿಕೋದ್ಯಮಿ ಗಂಗೊಳ್ಳಿ ಎಚ್. ಗಣೇಶ ಕಾಮತ್ ಮಾತನಾಡಿ, ಬುದ್ದಿ ಬರುತ್ತಲೇ ಮಕ್ಕಳಿಗೆ ಇಂಗ್ಲೀಷ್ ಪದಗಳಿಂದ ಹೆತ್ತವರು ಕರೆಸಿಕೊಳ್ಳುವುದಕ್ಕಿಂತ ನಮ್ಮದೇ ಸಿಹಿಯಾದ ಕೊಂಕಣಿ ಭಾಷೆಯನ್ನು ಕಲಿಸುವುದನ್ನು ಅರಿಯಬೇಕು ಎಂದು ನೈತಿಕ ಶಿಕ್ಷಣದ ಅಗತ್ಯತೆಗಳ ಬಗ್ಗೆ ತಿಳಿಸಿದರು. ಅಲ್ಲದೆ ಗಂಗೊಳ್ಳಿ ಸ.ವಿ.ಕಾಲೇಜಿನಲ್ಲಿ ಇಗಾಗಲೇ ಕೊಂಕಣಿ ಭಾಷೆಯನ್ನು ಒಂದು ವಿಷಯವಾಗಿ ಕಲಿಸಲಾಗುತ್ತಿದೆ ಎಂದ ಅವರು ಇನ್ನೊಬ್ಬರ ಭಾವನೆಗಳಿಗೆ ಸ್ಪಂದಿಸುವ ಮೂಲಕ ಬೆಳೆದು ಬಂದ ನಾವುಗಳು ಎಲ್ಲರ ಕಷ್ಟ-ನಷ್ಟಗಳಲ್ಲಿ ಭಾಗಿಯಾಗಿ ಜಿಎಸ್‌ಬಿ ಸಮಾಜದವರು ಎತ್ತರದ ಸ್ಥಾನದಲ್ಲಿರಬೇಕು ಎಂದರು.
ವಿಶ್ವಕೊಂಕಣಿ ವಿದ್ಯಾರ್ಥಿವೇತನ ನಿಧಿ ಕಾರ್ಯದರ್ಶಿ ಪ್ರದೀಪ್ ಜಿ. ಪೈ ಸಮಾವೇಶ ಉದ್ಘಾಟಿಸಿದರು. ಸಭೆಯಲ್ಲಿ ಹಲವಾರು ಯೋಜನೆಗಳಿಗೆ ಚಾಲನೆ ನೀಡಲಾಯಿತು. ಮದ್ಯಾಹ್ನ ವಿಚಾರ ಗೋಷ್ಠಿ, ಮಹಿಳಾ ಗೋಷ್ಠಿ ನಡೆಯಿತು. ದೇವದಾಸ ಕಮತ ಮಂಗಳೂರು, ಯು. ಶ್ರೀನಿವಾಸ ಪ್ರಭು ಉಪ್ಪುಂದ, ಜಿಲ್ಲಾ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕೋಟಾ ಸತೀಶ್ ಹೆಗ್ಡೆ, ಸಂಚಾಲಕ ವಿವೇಕಾನಂದ ಶೆಣೈ, ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್, ಬೈಲೂರು ಮಂಜುನಾಥ ಪೈ, ವಲಯ ಗೌರವಾಧ್ಯಕ್ಷ ಸದಾನಂದ ಪ್ರಭು, ಅಧ್ಯಕ್ಷ ಯು. ವಿಷ್ಣು ಪಡಿಯಾರ್, ಉದ್ಯಮಿ ವಸಂತ್ ಪಡಿಯಾರ, ವಲಯ ಜಿಎಸ್‌ಬಿ ದೇವಾಲಯಗಳ ಆಡಳಿತ ಮಮಡಳಿಯ ಪದಾಧಿಕಾರಿಗಳು, ಮಹಿಳಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
ವಲಯ ಕಾರ್ಯದರ್ಶಿ ಯು. ಸತೀಶ್ ಪಡಿಯಾರ್ ಸ್ವಾಗತಿಸಿ, ಬಿಜೂರು ಗಿರೀಶ ಶ್ಯಾನುಭಾಗ್ ವಂದಿಸಿದರು. ಗಂಗೊಳ್ಳಿ ರಾಮನಾಥ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಸಮಾಜದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
