ಕರಾವಳಿ

ಪಂಪ್‌ವೆಲ್ : ಹಲ್ಲೆ ಪ್ರಕರಣ – ಬಜರಂಗದಳದ 9 ಮಂದಿ ಪೊಲೀಸ್ ವಶ – ಬಿಡುಗಡೆಗೆ ಆಗ್ರಹಿಸಿ ಠಾಣೆಗೆ ಮುತ್ತಿಗೆ

Pinterest LinkedIn Tumblr

BajrangDal_protest_staion_4

ಮಂಗಳೂರು: ನಗರದ ಪಂಪ್‌ವೆಲ್‌ನ ಕಾಲೇಜೊಂದರ ಆರು ಮಂದಿ ವಿದ್ಯಾರ್ಥಿಗಳಿಗೆ ಗುರುವಾರ ಮಧ್ಯಾಹ್ನ ನಡೆದಿದ್ದ ಹಲ್ಲೆ ಪ್ರಕಣಕ್ಕೆ ಸಂಬಂಧಿಸಿದಂತೆ ಬಜರಂಗ ದಳದ 9 ಮಂದಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

BajrangDal_protest_staion_1

BajrangDal_protest_staion_8

ಗುರುವಾರ ಮಧ್ಯಾಹ್ನ ಖಲಂದರ್ ಶಾಹಿದ್, ಶಮೀಮ್, ಮಹಮ್ಮದ್ ಶಾಹಿದ್, ಅಶೀಕ್, ಅಶ್ಪತುಲ್ಲಾ ಹಾಗೂ ಶಬಾಜ್ ಎಂಬವರಿಗೆ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ ಪ್ರತೀಶ್ ಕುಮಾರ್ ಹಾಗೂ ಇತರ 15 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

BajrangDal_protest_staion_2

BajrangDal_protest_staion_3

ಗುರುವಾರ ರಾತ್ರಿಯೇ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ಆರು ಮಂದಿಯನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿದೆ. ಬಜರಂಗದಳದ ಭುಜಂಗ ಕುಲಾಲ್, ಪುನೀತ್, ಪ್ರಮೋದ್ ಸುವರ್ಣ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

BajrangDal_protest_staion_7 BajrangDal_protest_staion_5 BajrangDal_protest_staion_6

BajrangDal_protest_staion_9

ಇದೇ ಸಂದರ್ಭದಲ್ಲಿ ಈ ಪ್ರಕರಣದಲ್ಲಿ ಅಮಾಯಕರನ್ನು ಗುರುವಾರವೇ ಪೊಲೀಸರು ವಶಕ್ಕೆ ಪಡೆದಿದ್ದು, ಠಾಣೆಯಲ್ಲಿ ಅನಗತ್ಯವಾಗಿ ಬಂಧಿಸಿಟ್ಟಿದ್ದಾರೆ ಎಂದು ಆರೋಪಿಸಿರುವ ಬಜರಂಗದಳ ಕಾರ್ಯಕರ್ತರು ಠಾಣೆ ಎದುರು ಜಮಾಯಿಸಿ ಅಮಾಯಕರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

Write A Comment