ಮಂಗಳೂರು,ಸೆ.20: ಪಂಪ್‌ವೆಲ್‌ನಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಯೂತ್ ಕಾಂಗ್ರೆಸ್ ನಿಯೋಗ ಭೇಟಿ ನೀಡಿ ಸಾಂತ್ವನ ಹೇಳಿತು. ವಿದ್ಯಾರ್ಥಿಗಳ ಮೇಲಾದ ಹಲ್ಲೆಯನ್ನು ತೀವ್ರವಾಗಿ ಯೂತ್ ಕಾಂಗ್ರೆಸ್ ಖಂಡಿಸಿದ್ದು ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿನ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತು.
ನಿಯೋಗದಲ್ಲಿ ಯೂತ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಲುಕ್ಮಾನ್ ಬಿ.ಸಿ ರೋಡ್, ಯೂತ್ ಕಾಂಗ್ರೆಸ್ ಉಳ್ಳಾಲ ವಿಧಾನ ಸಭಾ ಅಧ್ಯಕ್ಷ ನಝರ್ ಉಳ್ಳಾಲ ಮತ್ತಿತರು ಉಪಸ್ಥಿತರಿದ್ದರು.