ಕರಾವಳಿ

ಕ್ಯಾಥೋಲಿಕ್ ಅಸೋಸಿಯೇಷನ್ ಒಫ್ ಸೌತ್ ಕೆನರಾ (ಕಾಸ್ಕ್)ಮಂಗಳೂರು ಇದರ ಕರ್ನಾಟಕ ಶತಮಾನೋತ್ಸವ ಆಚರಣೆ.

Pinterest LinkedIn Tumblr

cask_press_meet_1

ಮಂಗಳೂರು,ಸೆ.18: ಕ್ಯಾಥೋಲಿಕ್ ಅಸೋಸಿಯೇಷನ್ ಒಫ್ ಸೌತ್ ಕೆನರಾ ವು ತನ್ನ ಶತಮಾನೋತ್ಸವದ ಆಚರಣೆಯ ಸಮಾರೋಪ ಸಮಾರಂಭ ಭಾನುವಾರ ಸೆಪ್ಟೆಂಬರ್ 21, 2014 ರಂದು ಸಂಜೆ 5.30 ಕ್ಕೆ ಮಿಲಾಗ್ರಿಸ್ ಹಾಲ್ ಮಂಗಳೂರು ಇಲ್ಲಿ ನಡೆಯಲಿದೆ.

ಈ ಸಮಾರಂಭದ ಮುಖ್ಯ ಅಥಿತಿಯಾಗಿ ಭಾರತದ ಉಪಾಧ್ಯಕ್ಷ – ಗೌರವಾನ್ವಿತ ಶ್ರೀ ಎಮ್. ಹಮಿದ್ ಅನ್ಸಾರಿಯವರು ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಕರ್ನಾಟಕದ ರಾಜ್ಯಪಾಲ ಸನ್ಮಾನ್ಯ ಶ್ರೀ ವಜುಬಾಯ್ ವಾಲಾ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಇವರುಗಳು ಆಗಮಿಸಲಿದ್ದಾರೆ. ಶ್ರೀ ಎರಿಕ್ ಗೊನ್ಸಾಲ್ವಿಸ್, ಐ‌ಎಫ್‌ಎಸ್ (ನಿವೃತ್ತ), ಮಾಜಿ ರಾಯಭಾರಿ ಹಾಗೂ ಕಾರ್ಯದರ್ಶಿ – ವಿದೇಶಾಂಗ ಸಚಿವಾಲಯ ಮತ್ತು ಶ್ರೀ ಎಮ್.ಎಸ್.ರಾಮಾನುಜನ್, ಚೀಫ್ ಪೋಸ್ಟ್ ಮಾಸ್ಟರ್ ಜನರಲ್, ಕರ್ನಾಟಕ ವೃತ್ತ ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.

ಅತೀ ವಂದನೀಯ ಡಾ | ಅಲೋಶಿಯಸ್ ಪೌಲ್ ಡಿಸೋಜಾ, ಮಂಗಳೂರು ಬಿಷಪ್ ಮತ್ತು ಕಾಸ್ಕ್ ಆಶ್ರಯದಾತ ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು ಎಂದು ಕಾಸ್ಕ್ ಅಧ್ಯಕ್ಷ ಡಾ | ಡೆರೆಕ್ ಲೋಬೊ, ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

ಕಾಸ್ಕ್ ಕಾರ್ಯದರ್ಶಿ ಕ್ಯಾಪ್ಟನ್ ಜೊನ್ ಪ್ರಸಾದ್ ಮಿನೇಜಸ್, ಉಪಾಧ್ಯಕ್ಷ ಉಲ್ಲಾಸ್ ರಸ್ಕೀನ್ಹಾ, ಉಪಾಧ್ಯಕ್ಷೆ ಶ್ರೀಮತಿ ನಯನ ಫೆರ್ನಾಂಡಿಸ್, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Write A Comment