ಕರಾವಳಿ

ಉಪೇಂದ್ರ ಹುಟುಹಬ್ಬಕ್ಕೆ ಶುಭಾಶಯ ಕೋರಿದ ತೆಕ್ಕಟ್ಟೆಯ ಮೂಲ ಮನೆಯಲ್ಲಿರುವ ದೊಡ್ಡಮ್ಮ

Pinterest LinkedIn Tumblr

ಉಡುಪಿ: ಉಪ್ಪಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಬರ್ತ್‌ಡೇ ಆಚರಿಸುತ್ತಿರುವ ಉಪೇಂದ್ರ ಅವರಿಗೆ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.
ಉಪೇಂದ್ರ ಜನಿಸಿದ್ದು ಕುಂದಾಪುರದ ತೆಕ್ಕಟ್ಟೆ ಎಂಬ ಪುಟ್ಟ ಹಳ್ಳಿಯಲ್ಲಿ. ಅಡುಗೆ ಕೆಲಸ, ಕೃಷಿ ಆಧರಿತ ಬಡ ಕುಟುಂಬದಿಂದ ಬಂದ ಉಪ್ಪಿ ಬೆಂಗಳೂರಿಗೆ ಬಂದ ಸ್ವ ಪ್ರಯತ್ನದ ಮೂಲಕ ನಟ-ನಿರ್ಧೇಶಕರಾದವರು.

uppi (1)

 ಕಳೆದ ವರ್ಷ ಊರಿಗೆ ಬಂದಿದ್ದ ವೇಳೆ ತೆಕ್ಕಟ್ಟೆ ನಿವಾಸದಲ್ಲಿ ತಂದೆ-ತಾಯಿ ದೊಡ್ಡಮ್ಮ ಹಾಗೂ ಪತ್ನಿ-ಮಕ್ಕಳೊಂದಿಗೆ ಉಪ್ಪಿ (ಫೈಲ್ ಫೋಟೋ)

 ಉಪ್ಪಿಗೆ ದೊಡ್ಡಮ್ಮನೆಂದರೇ ತುಂಬಾ ಪ್ರೀತಿ. ಹೀಗಾಗಿ ತೆಕ್ಕಟ್ಟೆ ನಿವಾಸಕ್ಕೆ `ಕನ್ನಡಿಗ ವರ್ಲ್ಡ್’ ಪ್ರತಿನಿಧಿ ಭೇಟಿ ನೀಡಿ ಉಪ್ಪಿ ಬಗ್ಗೆ ಮಾತನಾಡಿಸಿದಾಗ ಸಂತಸದಿಂದಲೇ ಉಪ್ಪಿ ದೊಡ್ಡಮ್ಮ (ತಾಯಿ ಅಕ್ಕ)ಗಿರಿಜಮ್ಮ ಶುಭಾಷಯ ಕೋರಿ ಉಪ್ಪಿಯನು ಹರಿಸಿದರು.

ಮೊದಲಿದ್ದ ಹಳೆ ಮನೆ ಶಿಥಿಲಗೊಂಡ ಹಿನ್ನೆಲೆ ಗಿರಿಜಮ್ಮ ಸಮೀಪದಲ್ಲಿಯೇ ಸಣ್ಣದೊಂದು ಹೆಂಚಿನ ಮನೆಯಲ್ಲಿದ್ದಾರೆ. ಇವರೊಂದಿಗೆ ಉಪ್ಪಿಯವರ ಚಿಕ್ಕಮ್ಮನ ಮಗ ಮಧ್ವರಾಜ್ ಹಾಗೂ ಮಧ್ವರಾಜ್ ಪತ್ನಿ ಪ್ರೇಮಾ ಮನೆಯಲ್ಲಿದ್ದು ಕೃಷಿ, ಹೈನುಗಾರಿಕೆ ಮಾಡುತ್ತಿದ್ದಾರೆ.

Upendra- Girijamma

ಗಿರಿಜಮ್ಮ (ಉಪ್ಪಿ ದೊಡ್ಡಮ್ಮ)

ಬಾಲ್ಯದಿಂದಲೇ ಬೆಂಗಳೂರಿನಲ್ಲಿ ವಾಸವಿರುವ ಉಪೇಂದ್ರ ಮೊದಮೊದಲು ಶಾಲೆ-ಕಾಲೇಜು ರಜೆಯಲ್ಲಿ ಬರುತ್ತಿದ್ದರು ಆದರೇ ಈಗಂತೂ ಕೆಲಸದ ಒತ್ತಡದಲ್ಲಿ ಮನೆಯತ್ತ (ಊರಿನತ್ತ) ಬರುತ್ತಿಲ್ಲ ಎಂದು ಹೇಳುತ್ತಾರೆ ಇಳಿವಯಸ್ಸಿನ ಗಿರಿಜಮ್ಮ.

ದೊಡ್ಡಮ್ಮನೆಂದರೇ ಉಪ್ಪಿಗೂ ಸಿಕ್ಕಾಪಟ್ಟೆ ಪ್ರೀತಿಯಂತೆ. ಊರಿಗೆ ಬಂದಾಗ ತೆಕ್ಕಟ್ಟೆ ಸಮೀಪದ ಕೊಮೆ ರಸ್ತೆಯಲ್ಲಿರುವ ಮನೆಗೆ ಬಂದು ದೊಡ್ಡಮ್ಮನ ಬಳಿ ಮತನಾಡಿ ಹೋಗ್ತಾರೆ. ತಂಗಿ ಮಗ (ಉಪ್ಪಿ) ಹುಟ್ಟುಹಬ್ಬದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಉಪೇಂದ್ರ ಇನ್ನಷ್ಟು ಬೆಳೆಯಬೇಕು, ದೇವರು ಒಳ್ಳೆಯದು ಮಾಡಲಿ ಎಂದು ಆಶಿಸಿದರು.

Write A Comment