ಕರಾವಳಿ

ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಸಭಾಂಗಣದಲ್ಲಿ ರಕ್ತದಾನ ಶಿಬಿರ.

Pinterest LinkedIn Tumblr

bntwl_news_photo_1

ಬಂಟ್ವಾಳ:ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ರೋಟರಿ ಕ್ಲಬ್ ಬಂಟ್ವಾಳ, ರೋಟರಿ ಆನ್ಸ್ ಕ್ಲಬ್ ಬಂಟ್ವಾಳ ಇವರ ಆಶ್ರಯದಲ್ಲಿ ಕೆ.ಎಂ.ಸಿ.ಆಸ್ಪತ್ರೆ ಮಂಗಳೂರು ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ , ವೆನ್‌ಲಾಕ್ ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ ಸೇವಾಂಜಲಿ ಫರಂಗಿಪೇಟೆ ಸಭಾಂಗಣದಲ್ಲಿ ರಕ್ತದಾನ ಶಿಬಿರ ಜರಗಿತು.

ಕೆ.ಎಸ್.ಹೆಗ್ಡೆ ಕಾಲೇಜಿನ ಡೀನ್ ಸತೀಶ್ ಭಂಡಾರಿ ಮಾತನಾಡುತ್ತಾ ರಕ್ತದ ಅವಶ್ಯಕತೆ ಮತ್ತು ಅಮೂಲ್ಯ ಜೀವಗಳನ್ನು ಉಳಿಸುವ ಸಲುವಾಗಿ ರಕ್ತದಾನ ಮಾಡಲು ಜನ ಮುಂದೆ ಬರಬೇಕೆಂದು ಕರೆ ನೀಡಿ ಶಿಬಿರವನ್ನು ಉದ್ಘಾಟಿಸಿದರು. ಶಿಬಿರದಲ್ಲಿ ೧೦೦ಯುನಿಟ್ ಮೇಲ್ಪಟ್ಟು ರಕ್ತ ಸಂಗ್ರಹ ಮಾಡಲಾಯಿತು. ಸಂಗ್ರಹಿಸಿದ ರಕ್ತವನ್ನು ಕೆ.ಎಂ.ಸಿ.ಆಸ್ಪತ್ರೆ ಮಂಗಳೂರು, ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ , ವೆನ್‌ಲಾಕ್ ಆಸ್ಪತ್ರೆ ಮಂಗಳೂರು ಇವರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಕೆ.ಯು.ಬೆಳ್ಳಿಯಪ್ಪ , ಸೇವಾಂಜಲಿ ಪ್ರತಿಷ್ಠಾನದ ಅಧ್ಯಕ್ಷ ಅರ್ಕುಳ ಬೀಡು ವಜ್ರನಾಭ ಶೆಟ್ಟಿ , ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ, ಸದಸ್ಯರುಗಳಾದ ಪ್ರಶಾಂತ್ ಕುಮಾರ್ ತುಂಬೆ, ಭಾಸ್ಕರ ಚೌಟ ಕುಮ್ಡೇಲು , ಎಂ.ಕೆ.ಖಾದರ್ ಮಾರಿಪಳ್ಳ , ಸುಕುಮಾರ್ ಅರ್ಕುಳ, ಚಂದ್ರಹಾಸ ತುಂಬೆ, ಪದ್ಮನಾಭ ಕಿದೆಬೆಟ್ಟು , ಬಿ.ನಾರಾಯಣ ಬೆಳ್ಚಡ ಮೇರೆಮಜಲು, ಧನಂಜಯ ಅರ್ಕುಳ, ಜಯರಾಜ್ ಕರ್ಕೇರ ಮೊಂಟಮೆ, ಆರ್.ಎಸ್ ಜಯ ರಾಮಲ್‌ಕಟ್ಟೆ , ಕೊಡ್ಮನ್ ದೇವದಾಸ್ ರೈ , ಅರ್ಜುನ್ ಕೆ.ಪೂಂಜ, ರೋಟರಿ ಕಾರ್ಯದರ್ಶಿ ಸಂಜೀವ ಪೂಜಾರಿ, ಸದಸ್ಯರುಗಳಾದ ಕಿರಣ್ ಹೆಗ್ಡೆ , ಕರುಣಾಕರ ರೈ ,ಬಸ್ತಿ ಮಾಧವ ಶೆಣೈ, ಕೆ.ನಾರಾಯಣ ಹೆಗ್ಡೆ ,ನವೀನ್ ಸಲ್ಡಾನ, ಡಾ|ಹರಿಕೃಷ್ಣ ಕಾಮತ್, ಅರುಣ್ ಕುಮಾರ್ ಶೆಟ್ಟಿ ,ರಮೇಶ್ ರಾವ್, ಪ್ರಭಾಕರ್ ಪ್ರಭು, ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ವಾಣಿ ಪಿ.ಕಾರಂತ, ಕಾರ್ಯದರ್ಶಿ ಸ್ಮಿತಾ ಸಲ್ಡಾನ, ಸದಸ್ಯೆ ವಾಣಿ ಪ್ರಭು, ಮತ್ತು ಕೆ.ಎಂ.ಸಿ.ಆಸ್ಪತ್ರೆಯ ಡಾ|ವಿಕ್ರಮ್ ಮತ್ತು ವೈಧ್ಯರ ತಂಡ ಮತ್ತಿತರರು ಉಪಸ್ಥಿತರಿದ್ದರು.

Write A Comment