ಕರಾವಳಿ

ಉಡುಪಿಯಲ್ಲಿ ಶ್ರೀಕೃಷ್ಣ ಲೀಲೋತ್ಸವ-ವಿಟ್ಲಪಿಂಡಿ ಉತ್ಸವ – ಪುಳಕಿತರಾದ ಭಕ್ತರು (pics updated)

Pinterest LinkedIn Tumblr

udupi ashtami-2014 (2)

ಉಡುಪಿ: ಅಷ್ಠಮಿಯ ಅಂಗವಾಗಿ ಬುಧವಾರ ಉಡುಪಿ ಕೃಷ್ಣಮಠದಲ್ಲಿ ವೈಭವದ ಶ್ರೀಕೃಷ್ಣಲೀಲೋತ್ಸವ-ವಿಟ್ಲಪಿಂಡಿ ಉತ್ಸವ ನಡೆಯಿತು. ಬೆಳಿಗ್ಗೆ ಮಹಾಪೂಜೆಯ ಬಳಿಕ ಭಕ್ತಾದಿಗಳಿಗೆ ಅನ್ನಪ್ರಸಾದ ನೀಡಲಾಯಿತು..ಮಧ್ಯಾಹ್ನ ಎರಡೂವರೆ ಸುಮಾರಿಗೆ ಗೊಲ್ಲರು ಕೃಷ್ಣಮಠದ ಮುಂಭಾಗ ಮೊಸರುಗಡಿಗೆಗಳನ್ನು ಒಡೆಯುವುದರೊಂದಿಗೆ ವಿಟ್ಲಪಿಂಡಿಗೆ ಚಾಲನೆ ದೊರೆಯಿತು.ಬಳಿಕ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಚಿನ್ನದ ರಥದಲ್ಲಿಟ್ಟು ವೈಭವದ ಶೊಭಾಯಾತ್ರೆ ನಡೆಸಲಾಯಿತು.ವಿವಿಧ ತಂಡಗಳ ಹುಲಿವೇಷ ಮತ್ತು ಮೊಸರು ಗಡಿಗೆ ಒಡೆಯುವ ಸ್ಪರ್ಧೆ ಉತ್ಸವದ ಸಂಭ್ರಮವನ್ನು ಪರಾಕಾಷ್ಠೆಗೆ ಒಯ್ದಿತು.

2014-Udupi ashtami programme 2014-Udupi ashtami programme (5)

udupi shri krishna

2014-Udupi ashtami programme (6) 2014-Udupi ashtami programme (10) 2014-Udupi ashtami programme (8) 2014-Udupi ashtami programme (11) 2014-Udupi ashtami programme (12) 2014-Udupi ashtami programme (9) 2014-Udupi ashtami programme (7) 2014-Udupi ashtami programme (4) 2014-Udupi ashtami programme (3) 2014-Udupi ashtami programme (1) 2014-Udupi ashtami programme (2)

ಉಡುಪಿಯಲ್ಲಿ  ಕೃಷ್ಣಜನ್ಮಾಷ್ಠಮಿ ಉತ್ಸವ ಬುಧವಾರ  ಶ್ರೀಕೃಷ್ಣ ಲೀಲೋತ್ಸವ-ವಿಟ್ಲಪಿಂಡಿ ಉತ್ಸವದೊಂದಿಗೆ ತಾರಕಕ್ಕೇರಿತು.ವಿಟ್ಲಪಿಂಡಿ ಉತ್ಸವವಾದ ಬೆಳಗ್ಗಿನಿಂದಲೇ ಸಾವಿರಾರು ಭಕ್ತಾದಿಗಳು ಶ್ರೀಕೃಷ್ಣನ ದರ್ಶನ ಪಡೆದರು.ಬೆಳಿಗ್ಗೆ ಏಳೂವರೆ ಸುಮಾರಿಗೆ ಮಹಾಪೂಜೆ ಬಳಿಕ ರಾಜಾಂಗಣ -ರಥಬೀದಿಗಳಲ್ಲಿ ಕೀರ್ತನೆಗಳು ಭಜನೆಗಳು ಅನುರಣಗೊಂಡವು.ಮಧ್ಯಾಹ್ನದ ಹೊತ್ತಿಗೆ ಕೃಷ್ನಮಠದೆದುರು ಗೊಲ್ಲವೆಷಧಾರಿಗಳು ಮೊಸರುಗಡಿಗೆಗಳನ್ನು ಒಡೆಯುವ ಸಾಂಪ್ರದಾಯಿಕ ಆಚರಣೆ ಭಕ್ತಗಣವನ್ನು ರಂಜಿಸಿತು.ಬಳಿಕ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಚಿನ್ನದ ರಥದಲ್ಲಿಟ್ಟು ಶೋಭಾಯಾತ್ರೆ ಮಾಡಲಾಯಿತು.ಪರ್ಯಾಯ ಕಾಣಿಯೂರು ಶ್ರೀಗಳ ನೇತೃತ್ವದಲ್ಲಿ ನಡೆದ ರಥೋತ್ಸವದಲ್ಲಿ ಸಹಸ್ರ ಸಹಸ್ರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡು ಪುಳಕಿತರಾದರು.

udupi ashtami-2014 (6) udupi ashtami-2014 (3) udupi ashtami-2014 (1) udupi ashtami-2014 (4) udupi ashtami-2014 (7) udupi ashtami-2014 (5)

ವಿಟ್ಲಪಿಂಡಿ ಉತ್ಸವದಲ್ಲಿ ನೆರೆದ ಸಹಸ್ರ ಸಹಸ್ರ ಸಂಖ್ಯೆಯ ಭಕ್ತಾದಿಗಳು ಹುಲಿ ವೇಷಧಾರಿಗಳ ಕುಣಿತಕ್ಕೆ ಮೂಕವಿಸ್ಮಿತರಾದರು.ಉಳಿದಂತೆ ರಥಬೀದಿಯ ಸುತ್ತ ಇಡಲಾಗಿದ್ದ ಮೊಸರು ಗಡಿಗೆಗಳನ್ನು ಗೊಲ್ಲ ವೇಷಧಾರಿಗಳು ಒಡೆಯುವ ಮೂಲಕ ಶೊಭಾಯಾತ್ರೆಗೆ ಶೋಭೆ ತಂದರು.ರಥಬೀದಿಯಲ್ಲ್ಲಿ ಹಾಕಲಾದ ಬೃಹತ್ ವೇದಿಕೆಯಿಂದ ಪರ್ಯಾಯ ಶ್ರೀಗಳು ಭಕ್ತಾದಿಗಳಿಗೆ ಪ್ರಸಾದ ಎಸೆಯುವಾಗ ಭಕ್ತರ ಕರತಾಡನ-ಕೇಕೆ ಮುಗಿಲು ಮುಟ್ಟಿತ್ತು;ಈ ವೇಳೆ ಸ್ತಬ್ಧಚಿತ್ರಗಳು ;ಮರಕಾಲು ;ವಾದ್ಯ -ಓಲಗ ;ವೇಷಧಾರಿಗಳು ರಥೋತ್ಸವಕ್ಕೆ ವಿಶೇಷ ಮೆರುಗು ತಂದವು.

ವಿಟ್ಲಪಿಂಡಿಯ ಅಂಗವಾಗಿ ಬುಧವಾರ  ಬೆಳಿಗ್ಗೆ ರಾಜಾಂಘನ ಸಮೀಪ ಆಲಾರೇ ಗೋವಿಂದ ತಂಡದವರು ಮಾನವ ಗೋಪುರ ನಿರ್ಮಿಸಿ ಮೊಸರು ಕುಡಿಕೆಯಲ್ಲಿ ಪಾಲ್ಗೊಂಡರು.ಕೃಷ್ಣಮಠಕ್ಕೆ ಕೃಷ್ಣಮಠವೇ ಸಾಟಿ ಎಂಬಂತಿದ್ದ ಉತ್ಸವ ಕೃಷ್ನನ ಮೃಣ್ಮಯ ಮೂರ್ತಿಯನ್ನು ಜಲಸ್ಥಂಭನ ಮಾಡುವುದರೊಂದಿಗೆ ಉತ್ಸವಕ್ಕೆ ಕೃಷ್ಣಾರ್ಪಣ ಮಾಡಲಾಯಿತು.

Write A Comment