ಕರಾವಳಿ

ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ತರಬೇತಿ  ಕಾರ್ಯಗಾರ

Pinterest LinkedIn Tumblr

women_child_welfare_1

ಬಂಟ್ವಾಳ: ರಸ್ತೆ, ಸೇತುವೆಗಳ ಆಬಿವೃದಿ ಮಾತ್ರ ಸರಕಾರದ ಹೊಣೆಯಲ್ಲ, ಜೊತೆಗೆ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಅದಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಕೂಡ ಅಷ್ಟೇ ಮುಖ್ಯವಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ಮಲ್ಲೇಸ್ವಾಮಿ ತಿಳಿಸಿದರು.ತಾ.ಪಂ.ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಸೋಮವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಬಾಲ್ಯ ವಿವಾಹ ನಿಷೇಧಾದಿಕಾರಿಗಳ ತರಭೇತಿ ಕಾರ್‍ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಸರಕಾರದ ಜೊತೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಕೈಜೊಡಿಸಿದಾಗ ಕಾನೂನಿನಡಿಯಲ್ಲಿ ಉತ್ತಮ ಸೇವೆ ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರಶ್ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ.ನ ಉಪಾಧ್ಯಕ್ಷೆ ವಿಲಾಸಿನಿ, ನಗರ ಠಾಣಾ ಉಪನಿರೀಕ್ಷಕ ನಂದಕುಮಾರ್, ದಯಾವತಿ, ಮಂಜುವಿಟ್ಲ, ಮಂಗಳೂರು ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿ.ಸೋಜ ಉಪಸ್ಥಿತರಿದ್ದರು.

ಸಿ.ಡಿ.ಪಿ.ಒ ಮಲ್ಲಿಕಾ ಸ್ವಾಗತಿಸಿದರು. ಮೇಲ್ವಿಚಾರಕಿ ಪುಷ್ಪಾಲತಾ ವಂದಿಸಿದರು. ಮೇಲ್ವಿಚಾರಕಿ ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು.

Write A Comment