ಕರಾವಳಿ

ಬಿ.ಸಿರೋಡ್-ಹಾಸನ ಚತುಷ್ಪಥ ರಸ್ತೆ ಕಾಮಗಾರಿಗೆ ಶೀಘ್ರ ಸರ್ವೆ: ನಳಿನ್

Pinterest LinkedIn Tumblr

bntwl_nalin_visit_1

ಬಂಟ್ವಾಳ: ಬಿ.ಸಿರೋಡ್-ಹಾಸನ ಚತುಷ್ಪಥ ರಸ್ತೆಯ ಕಾಮಗಾರಿಗೆ ಸರಕಾರದಿಂದ ಅನುಮೋದನೆ ಸಿಕ್ಕಿದ್ದು, ಶೀಘ್ರವೇ ಸರ್ವೆ ಕಾರ್ಯ ಆರಂಭಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ. ಅವರು ಸೋಮವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬ್ರಹ್ಮರಕೂಟ್ಲು, ವಗ್ಗ, , ಕಾವಳಪಡೂರು, ಕಾವಳಮೂಡುರು ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರು, ಪಕ್ಷದ ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

bntwl_nalin_visit_2

ಬಹುತೇಕ ಡಿಸೆಂಬರ್‌ನಲ್ಲಿ ಚತುಷ್ಪಥ ರಸ್ತೆಯ ಮೊದಲ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಹೇಳಿದ ಅವರು ಬಿ.ಸಿರೋಡಿನ ಸರ್ವೀಸ್ ರಸ್ತೆಯ ಡಾಮರೀಕರಣ ಮತ್ತು ಬಾಕಿ ಇರುವ ರಸ್ತೆ ಅಗಲೀಕರಣದ ಕಾಮಗಾರಿಯನ್ನು ಕೂಡಾ ಮಾಡಲಾಗುವುದು ಎಂದು ಭರವಸೆ ನೀಡಿದರು. ಇದೇ ಸಂದರ್ಭ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಸಂಸದ ನಳಿನ್ ಕೆಲ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕೆ ಸೂಚಿಸಿದರು.

ಈ ಸಂದರ್ಭ ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕ್ಷೇತ್ರ ಸಮಿತಿ.ಅಧ್ಯಕ್ಷ ಜಿ.ಆನಂದ, ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್ಟ್,ಪಕ್ಷದ ಪ್ರಮುಖರಾದ ರಾಮ್‌ದಾಸ್ ಬಂಟ್ವಾಳ್, ದಿನೇಶ್ ಅಮ್ಟೂರು, ತುಂಗಪ್ಪ ಬಂಗೇರ, ಪುರುಷ ಸಾಲಿಯಾನ್, ಆನಂದ ಕುಲಾಲ್, ಶಶಿಧರ ಟೈಲರ್ ಮತ್ತಿತತರು ಉಪಸ್ಥಿತರಿದ್ದರು.

ಪಿಲಾತಬೆಟ್ಟು ಪಂಚಾಯತ್ ಗೆ ಭೇಟಿ : ಸಂಸದ ನಳಿನ್ ಕುಮಾರ್ ಕಟೀಲ್ ರವರು ಪಿಲಾತಬೆಟ್ಟು ಗ್ರಾ,ಪಂ. ಕಛೇರಿಗೆ ಭೇಟಿ ನೀಡಿ ಉದ್ಯೋಗ ಖಾತರಿ ಯೋಜನೆಯಡಿ ಕೈಗೆತ್ತಿಗೊಳ್ಳಲಾದ ಕಾಮಗಾರಿಗಳ ಮಾಹಿತಿಯನ್ನು ಪಡೆದರು. ಇದೇ ವೇಳೆ ಕೆಲವೊಂದು ಸಮಸ್ಯೆಗಳನ್ನು ಪಂಚಾಯತ್ ಪಿ.ಡಿ.ಓ ರವರು ಸಂಸದರ ಗಮನಕ್ಕೆ ತಂದರು. ಇದನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರ ಗಮನಕ್ಕೆ ತರಲಾಗುವುದೆಂದು ಭರವಸೆ ನೀಡಿದರು. ಬಳಿಕ ನಂದಗೋಕುಲ ಸಭಾಭವನದಲ್ಲಿ ಇರ್ವತ್ತೂರು, ಮೂಡುಪಡುಕೋಡಿ, ಪಿಲಾತಬೆಟ್ಟು ಗ್ರಾಮದ ಪಕ್ಷ ಕಾರ್ಯಕರ್ತರನ್ನು ಭೇಟಿಯಾಗಿ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಜನಧನ್ ಯೋಜನೆಯಲ್ಲಿ ಗ್ರಾಮಸ್ಥರ ಬ್ಯಾಂಕ್ ಖಾತೆ ತೆರೆಸುವಲ್ಲಿ ಕಾರ್ಯಕರ್ತರು ಮುಂದಾಗುವಂತೆ ತಿಳಿಸಿದರು.

Write A Comment