ಮಂಗಳೂರು, ಸೆ.14: ಬ್ರಹ್ಮಶ್ರೀ ನಾರಾಯಣ ಗುರು ಅವರ ಸಂದೇಶ ವಿಶ್ವ ಮಾನವರನ್ನು ಒಗ್ಗೂಡಿಸುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ನಾರಾಯಣಗುರು ವಿಶ್ವ ಚೇತನ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಅಭಿ ಪ್ರಾಯಪಟ್ಟರು.
ಅಖಿಲ ಭಾರತ ಬಿಲ್ಲವರ ಯೂನಿಯನ್ ಮಂಗಳೂರು ಹಾಗೂ ಕುದ್ರೋಳಿಯ ನಾರಾಯಣ ಗುರು ವಿದ್ಯಾ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಗರದ ಪುರಭವನದಲ್ಲಿ ರವಿವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಗಳ 160ನೆ ಜನ್ಮದಿನಾಚರಣೆ ಮತ್ತು ದಾಮೋದರ ಆರ್.ಸುವರ್ಣ ಸ್ಮಾರಕ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಿಲ್ಲವ ಸಮಾಜಕ್ಕೆ ಆರ್ಥಿಕ, ರಾಜ ಕೀಯ, ಸಾಮಾಜಿಕ, ಶೈಕ್ಷಣಿಕ ಶಕ್ತಿ ತುಂಬುವಲ್ಲಿ ದಾಮೋದರ ಆರ್.ಸುವರ್ಣರ ಕೊಡುಗೆ ಅಪಾರ. ಬದು ಕಿನುದ್ದಕ್ಕೂ ಅವರು ಅತ್ಯುತ್ತಮ ಕಾರ್ಯ ಗಳನ್ನು ನಡೆಸುವ ಮೂಲಕ ಹಿಂದು ಳಿದ ಸಮಾಜದ ಆತ್ಮಶಕ್ತಿಯಾಗಿದ್ದರು ಎಂದವರು ನುಡಿದರು.
ದಾಮೋದರ ಆರ್.ಸುವರ್ಣ ಸ್ಮಾರಕ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದ ಸಂಸದ ನಳಿನ್ಕುಮಾರ್ ಕಟೀಲ್, ದೇಶಕ್ಕೆ ನಾರಾಯಣಗುರು ಸಾಮಾಜಿಕ ನ್ಯಾಯ ನೀಡಿದರೆ, ಕರಾವಳಿ ಭಾಗದಲ್ಲಿ ದಾಮೋದರ ಆರ್. ಸುವರ್ಣ ಅವರು ಸಾಮಾಜಿಕ ನ್ಯಾಯ ಒದಗಿಸಿ ಕೊಟ್ಟಿದ್ದಾರೆ ಎಂದರು.
ಸಮಾರಂಭದಲ್ಲಿ ಬೆಂಗಳೂರಿನ ಉದ್ಯಮಿ ಉದಯಚಂದ್ರ ಡಿ. ಸುವರ್ಣ ಹಾಗೂ ದ.ಕ. ಜಿ.ಪಂ. ಉಪಾಧ್ಯಕ್ಷ ಸತೀಶ್ ಕುಂಪಲರನ್ನು ಸನ್ಮಾನಿಸಲಾಯಿತು. ಅಲ್ಲದೆ 400 ವಿದ್ಯಾರ್ಥಿಗಳಿಗೆ 15 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಬಿಲ್ಲವರ ಯೂನಿ ಯನ್ ಮತ್ತು ನಾರಾಯಣ ಗುರು ವಿದ್ಯಾ ಸಂಸ್ಥೆಗಳ ಅಧ್ಯಕ್ಷ ನವೀನ್ಚಂದ್ರ ಡಿ. ಸುವರ್ಣ, ‘ಬ್ರಹ್ಮಶ್ರೀ ನಾರಾಯಣ ಗುರುಗಳು ಕೇವಲ ಬಿಲ್ಲವ ಸಮುದಾಯಕ್ಕೆ ಮಾತ್ರ ಗುರುಗಳಲ್ಲ. ಶೋಷಿತ ವರ್ಗಕ್ಕೆ ಸ್ವಾಭಿ ಮಾನದ ಬದುಕು ನೀಡಿದವರು. ಹಾಗಾಗಿ ಸರಕಾರದ ವತಿಯಿಂದ ಮುಂದಿನ ವರ್ಷದಿಂದ ನಾರಾಯಣ ಗುರು ಜಯಂತಿ ನಡೆಯಬೇಕು. ಜತೆಗೆ ಶಾಲಾ ಪಠ್ಯಪುಸ್ತಕದಲ್ಲಿ ಅವರ ಮಾಹಿತಿ ನೀಡುವ ಕಾರ್ಯವನ್ನು ಸರಕಾರ ಕೈಗೆತ್ತಿಕೊಳ್ಳಬೇಕು’ ಎಂದರು.
ಪಡುಬಿದ್ರೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವೈ.ಸುಧೀರ್ ಕುಮಾರ್, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಿ.ಆರ್.ರಾಜು, ಕದ್ರಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಕದ್ರಿ, ಕಂಕನಾಡಿ-ಗರೋಡಿ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ವಸಂತ ಪೂಜಾರಿ, ಜಪ್ಪಿನಮೊಗರು ನಾರಾಯಣಗುರು ಸೇವಾ ಸಂಘದ ಪ್ರಧಾನ ಕಾರ್ಯ ದರ್ಶಿ ದಿನೇಶ್ ಅಂಚನ್, ಕೂಳೂರು ಬ್ರಹ್ಮ ಶ್ರೀನಾರಾಯಣ ಗುರು ಸೇವಾ ಮಂದಿರದ ಗೌರವ ಕಾರ್ಯದರ್ಶಿ ಬಿ.ಕೆ. ಸಂದೀಪ್ ಉಪಸ್ಥಿತರಿದ್ದರು.
ಬಿಲ್ಲವರ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಸುವರ್ಣ ಸ್ವಾಗತಿಸಿದರು. ಯೂನಿಯನ್ ಪ್ರಧಾನ ಕಾರ್ಯ ದರ್ಶಿ ಸೀತಪ್ಪ ಕೂಡೂರು ಪ್ರಸ್ತಾವಿಸಿ ದರು. ನಾರಾಯಣಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಗುರು ಸಂದೇಶ ನೀಡಿದರು. ಕೆ.ಟಿ. ಸುವರ್ಣ ಹಾಗೂ ಎಸ್.ಎಸ್.ಪೂಜಾರಿ ಅಭಿ ನಂದನ ಭಾಷಣ ಮಾಡಿದರು.
ನಾರಾಯಣಗುರು ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಪ್ರೊಕೆ. ಬಾಲಕೃಷ್ಣ ಗಟ್ಟಿ ವಂದಿಸಿದರು. ಉಪನ್ಯಾಸಕರಾದ ರೇಣುಕಾ ಅರುಣ್ ಹಾಗೂ ಕೇಶವ ಬಂಗೇರ ಕಾರ್ಯಕ್ರಮ ನಿರೂಪಿಸಿದರು.