ಗಲ್ಫ್

ಅಲ್ಲಾಹನ ಅತಿಥಿಗಳ ಸೇವೆಗೆ ಸನ್ನದ್ದರಾಗುತ್ತಿರುವ ಐ.ಎಫ್. ಎಫ್. ನ ಸ್ವಯಂ ಸೇವಕ ತಂಡ

Pinterest LinkedIn Tumblr

IFF

ಅಲ್ಲಾಹನ ಅಥಿತಿಗಳ ಸೇವೆಗೆ ಸನ್ನದ್ದರಾಗುತ್ತಿರುವ ಐ.ಎಫ್.ಎಫ್. ಸ್ವಯಂ ಸೇವಕರು ( ಸಂಗ್ರಹಿತ ಚಿತ್ರ )

ಜಿದ್ದಾ: ಹಜ್ಜ್ ಎಂಬುದು ಪ್ರತಿಯೊಬ್ಬ ಮುಸಲ್ಮಾನನೂ ಸಾಧ್ಯವಾದರೆ ಜೀವನದಲ್ಲೊಮ್ಮೆಯಾದರೂ ನಿರ್ವಹಿಸಲೇಬೇಕಾದ ಪಂಚಕರ್ಮಗಳಲ್ಲಿ ಒಂದಾದ ಮಹತ್ಕಾರ್ಯವಾಗಿದೆ. ಪವಿತ್ರವಾದ ಈ ಪುಣ್ಯಕಾರ್ಯವನ್ನು ನಿರ್ವಹಿಸುವ ಸಲುವಾಗಿ ಪ್ರತಿವರ್ಷವೂ ಕೂಡ ಭಾರತ ಸೇರಿದಂತೆ ಜಗತ್ತಿನ ವಿವಿಧ ಭಾಗದಿಂದ ಸರಿಸುಮಾರು 35 ಲಕ್ಷಗಳಷ್ಟು ಮುಸ್ಲಿಮರು ಸೌದಿ ಅರೇಭಿಯಾ ತಲುಪುತ್ತಾರೆ. ಇವರಲ್ಲಿ ಬಹುತೇಕ ಮಂದಿ ಹಣ್ಣು ಹಣ್ಣು ಮುದುಕರೆಂಬುದು ವಾಸ್ತವ. ಪವಿತ್ರ ಹಜ್ಜ್ ಕರ್ಮದ ಭಾಗವಾಗಿ ಅತ್ಯಂತ ಜನದಟ್ಟನೆಯ ಪ್ರದೇಶಗಳಾದ ಅರಫಾ, ಮುಝ್ಹ್ದಲಿಫಾ, ಮೀನಾ, ಜಮ್ರಾತ್ ಸೇರಿದಂತೆ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಭಾರೀ ಸಂಕಷ್ಟವನ್ನೆದುರಿಸಬೇಕಾಗಿದೆ. ಇಂತಹ ಸಂಧಿಘ್ನ ಪರಿಸ್ಥಿತಿಯನ್ನು ಅವಲೋಕಿಸಿದ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕ್ಕೊಂಡು ಜನಮನ್ನಣೆ ಗಳಿಸಿರುವ ಇಂಡಿಯಾ ಪ್ರೆಟರ್ನಿಟಿ ಫೋರಮ್ ಎಂಬ ಸಾಮಾಜಿಕ ಸಂಘಟನೆಯು ಅಲ್ಲಾಹನ ಅತಿಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸರಿಸುಮಾರು 1200 ಕ್ಕೂ ಮಿಕ್ಕಿದ ಸ್ವಯಂ ಸೇವಕರನ್ನು ಈ ವರ್ಷ ಕಣಕ್ಕಿಳಿಸಲು ನಿರ್ದರಿಸಿದೆ. ಕಳೆದ ಸತತ 11 ವರ್ಷಗಳಿಂದ ಹಜ್ಜಾಜಿಗಳಿಗೆ ನೆರವಾಗುತ್ತಿರುವ ಐ.ಎಫ್.ಎಫ್. ನ ಸ್ವಯಂ ಸೇವಕರು ಸಾಮಾಜಿಕವಾಗಿ ಪ್ರಶಂಸೆಗೆ ಪಾತ್ರವಾಗಿದೆ.

ನೀಲಿ ಬಣ್ಣದ ಟೀ-ಶರ್ಟ್ ನ ಮೇಲೆ ಕೇಸರಿ ಬಣ್ಣದ ವೆಸ್ಟ್ , ಕೆಂಪು ಬಣ್ಣದ ಟೋಪಿ, ಕೈಯಲ್ಲೊಂದು ಅಚ್ಚುಕಟ್ಟಾದ ನಕ್ಷೆಯನ್ನಿಡಿದು ಮೀನಾ, ಮುಝ್ಹ್ದಲಿಫಾ, ಜಮ್ರಾತ್ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಅತ್ತಿತಾ ಅಡ್ಡಾಡುವ ಸ್ವಯಂ ಸೇವಕರು ಅಶಕ್ತ ಮತ್ತು ವ್ರದ್ದ ಹಾಜಿಗಳಿಗೆ ಸೂಕ್ತ ಮಾರ್ಗದರ್ಶನ ಒದಗಿಸುವುದು , ಅಗತ್ಯವಾದ ಸಲಹೆ-ಸೂಚನೆ ಯನ್ನು ನೀಡುವುದು, ದಿನದ 24 ಘಂಟೆಗಳ ಸಹಾಯವಾಣಿ ಘಟಕದ ಮೂಲಕ ಮಾಹಿತಿಯನ್ನು ಒದಗಿಸುವುದು, ಅನಾರೋಗ್ಯ ಪೀಡಿತ ಹಾಜಿಗಳಿಗೆ ವೈಧ್ಯಕೀಯ ಸೇವೆ ಒದಗಿಸುವುದು, ಅಗತ್ಯವಿದ್ದಲ್ಲಿ ಆರೋಗ್ಯ ಕೇಂದ್ರಕ್ಕೆ ತಲುಪಿಸುವುದು ಸೇರಿದಂತೆ ಇನ್ನಿತರ ಮಹತ್ತರ ಸೇವೆಯ ಒದಗಿಸುವ ಮೂಲಕ ಹಜ್ಜಾಜಿಗಳಿಗೆ ನೆರವಾಗುತ್ತಾರೆ. ಮಾತ್ರವಲ್ಲದೆ ಹಜ್ಜ್ ನಿರ್ವಹಿಸಲು ಮದೀನಾ, ಮಕ್ಕಾ ಮತ್ತು ಜಿದ್ದಾ ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ತಮ್ಮ ಸೇವೆಯನ್ನು ಒದಗಿಸುತ್ತಿರುವ ಐ.ಎಫ್.ಎಫ್. ನ ಸ್ವಯಂ ಸೇವಕರು, ಈ ಸಲ ಹೊಸದಾಗಿ ಅರಫಾ ಭಾಗಕ್ಕೆ ಸೇವೆಯನ್ನು ವಿಸ್ತರಿಸುವ ಯೋಜನೆಯನ್ನು ಹಮ್ಮಿಕ್ಕೊಂಡಿದೆಯೆಂದು ಹಜ್ಜ್ ಕಾರ್ಯಕಾರಿಣಿ ಸಮಿತಿ ತಿಳಿಸಿದೆ. ಭಾರತದಿಂದ ಹಜ್ಜ್ ನಿರ್ವಹಿಸಲು ಕಳೆದ ತಿಂಗಳ 27 ರಂದು ಪವಿತ್ರ ಮದೀನಾ ನಗರವನ್ನು ತಲುಪಿದ ಅಲ್ಲಾಹನ ಅತಿಥಿ ಗಳಿಗೆ ಆತ್ಮೀಯವಾಗಿ ಬರಮಾಡಿಕ್ಕೊಂಡದನ್ನು ನಾವು ಸ್ಮರಿಸಬಹುದು.

IFF1

ಹಜ್ಜ್ ಕೌನ್ಸಿಲರ್ ನೊಂದಿಗೆ ಸಮಾಲೋಚನೆಯಲ್ಲಿ ತೊಡಗಿರುವ ಐ.ಎಫ್.ಎಫ್. ನ ಸ್ವಯಂ ಸೇವಕರ ಪಧಾದಿಕಾರಿಗಳ ತಂಡ

ಕರ್ನಾಟಕ, ಕೇರಳ, ತಮಿಳ್ನಾಡು, ಅಂದ್ರಪ್ರದೇಶ, ಉತ್ತಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ರಾಜಸ್ತಾನ ಸೇರಿದಂತೆ ಭಾರತದ ಸರಿಸುಮಾರು 23 ರಾಜ್ಯಗಳನ್ನು ಪ್ರತಿನಿಧಿಸುವ ಸೌದಿ ಅರೇಭಿಯಾದ ವಿವಿಧ ಪ್ರದೇಶದಿಂದ ಆಗಮಿಸುವ 1200 ಕ್ಕೂ ಮಿಕ್ಕಿದ ಸ್ವಯಂ ಸೇವಕರು ಸತತವಾಗಿ ಮುಝ್ದಲಿಫಾ, ಅರಫಾ, ಮೀನಾ, ಜಮ್ರಾತ್ ನಲ್ಲಿ 4 ದಿನಗಳ ಹಾಜಿಗಳ ಸೇವೆಯಲ್ಲಿ ನಿರತರಾಗುತ್ತಾರೆ. ಐ.ಎಫ್. ಎಫ್. ನ ಸ್ವಯಂ ಸೇವಕರು ಮಕ್ಕಾ, ಅಝ್ಹೀಝಿಯಾ ಸೇರಿದಂತೆ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಈಗಾಗಲೇ ತಮ್ಮ ಸೇವೆಯನ್ನು ಪ್ರಾರಂಬಿಸಿದ್ದು, ಸತತವಾಗಿ ಸರಿ ಸುಮಾರು 40 ದಿನಗಳ ಕಾಲ ಎಲ್ಲಾ ರೀತಿಯಲ್ಲಿ ಹಜ್ಜಾಜಿಗಳ ಸೇವೆಯನ್ನು ಕೈಗೊಳ್ಳುವುದು ವಿಶೇಷವಾಗಿದೆ.

IFF2

ಐ.ಎಫ್. ಎಫ್. ಸ್ವಯಂ ಸೇವಕರು ನಡೆಸುತ್ತಿರುವ ಹಜ್ಜಾಜಿಗಳ ಸೇವೆಯನ್ನು ಪರಿಶೀಲಿಸುತ್ತಿರುವ ಭಾರತದ ಹಜ್ಜ್ ಕೌನ್ಸಿಲರ್

ಮಾತ್ರವಲ್ಲದೆ ಐ.ಎಫ್.ಎಫ್. ನ ವತಿಯಿಂದ ಏರ್ಪಡುವ ಈ ಸ್ವಯಂ ಸೇವೆಯು ತನ್ನ ಗುಣಮಟ್ಟಕ್ಕಾಗಿ ನೂತನ ಹಜ್ಜ್ ಕಾರ್ಯಕಾರಿಣಿ ಸಮಿತಿ ಯೊಂದನ್ನು ಪರಿಚಯಿಸಿದ್ದು, ಇದರ ಸಂಯೋಜಕರಾಗಿ ಕರ್ನಾಟಕದ ಜನಾಬ್ ಮುದಸ್ಸರ್ ಅಕ್ಕರಂಗಡಿ ಯವರು ಆಯ್ಕೆಯಾಗಿದ್ದರೆ, ಇವರಿಗೆ ಸಹಾಯಕರಾಗಿ ಕೇರಳದ ಜನಾಬ್ ಅಬ್ದುಲ್ ರವೂಪ್ ರವರನ್ನು ನೇಮಿಸಲಾಗಿದೆ. ಐ. ಎಫ್.ಎಫ್. ನ ವತಿಯಿಂದ ಆಯೋಜಿಸಲ್ಪಡುವ ಹಜ್ಜ್ ಸೇವೆಯ ಕುರಿತು ಮಾಹಿತಿ ನೀಡಲು ಪತ್ರಿಕಾ ಗೋಷ್ಠಿ ಕರೆದಿದ್ದ ಐ.ಎಫ್. ಎಫ್. ಪಧಾದಿಕಾರಿಗಳು ಹಜ್ಜ್ ಸಮಯದಲ್ಲಿ ಐ.ಎಫ್.ಎಫ್. ಕೈಗೊಳ್ಳುವ ಕಾರ್ಯವೈಖರಿಯ ಬಗ್ಗೆ ನೆರೆದ ಪತ್ರಕರ್ತರಿಗೆ ವಿಸ್ತಾರವಾಗಿ ವಿವರಿಸಿದರಲ್ಲದೆ ಪ್ರಸಕ್ತ ಸಾಲಿನ ಹಜ್ಜ್ ಸಮಿತಿಯನ್ನು ಪರಿಚಯಿಸಿದರು.

ಜನಾಬ್ ಮೊಹಮ್ಮದ್ ಅಲಿ ಕೇರಳ, ಜನಾಬ್ ಸಿ.ವಿ. ಅಶ್ರಫ್ ಕೇರಳ, ಅಮೀರ್ ಸುಲ್ತಾನ್ ತಮಿಳ್ನಾಡು , ಜನಾಬ್ ನಝ್ಹೀರ್ ಪಾರೂಖಿ ಸಿದ್ದೀಕ್ ಅಂದ್ರಪ್ರದೇಶ, ಜನಾಬ್ ಇರ್ಷಾದ್ ಅಹ್ಮದ್ ( ಉ.ಪ್ರ ), ಜನಾಬ್ ಶೈಖ್ ಜೋಯಿಲ್ (ಪ.ಬಂಗಾಳ), ಜನಾಬ್ ಮೊಹಮ್ಮದ್ ಸಾಜಿದ್ (ಬಿಹಾರ್ ), ಜನಾಬ್ ಮೊಹಮ್ಮದ್ ಅನಿಸುದ್ದೀನ್ ( ಮಹಾರಾಷ್ಟ್ರ ), ಮಕ್ಕಾ ಪ್ರತಿನಿಧಿ ಜನಾಬ್ ಅಬ್ದುಲ್ ಗಫ್ಫಾರ್ ( ಕೇರಳ) ಮತ್ತು ಮದೀನಾ ಪ್ರತಿನಿಧಿಯಾದ ಜನಾಬ್ ಮೊಹಮ್ಮದ್ ಮುಸ್ತಫಾ (ಕೇರಳ) ರವರನ್ನೊಳಗೊಂಡ ಸದಸ್ಯರ ತಂಡವನ್ನು ಹಜ್ಜ್ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ನೇಮಿಸಲಾಗಿದೆ. ಐ.ಎಫ್. ಎಫ್ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ದೇಶದ ವಿವಿಧ ಭಾಗದ ಖ್ಯಾತ ಪತ್ರಕರ್ತರು ಭಾಗವಸಿದ್ದರು. ಜನಾಬ್ ಮುದಸ್ಸರ್ ಅಬ್ದುಲ್ ( ಸಂಯೋಜಕರು, ಐ.ಎಫ್.ಎಫ್. ಹಜ್ಜ್ ಸಮಿತಿ), ಜನಾಬ್ ಅಬ್ದುಲ್ ರವೂಪ್ ( ಉಪ ಸಂಯೋಜಕರು, ಐ.ಎಫ್.ಎಫ್. ಹಜ್ಜ್ ಸಮಿತಿ) ಜನಾಬ್ ಸಂಶುದ್ದೀನ್ (ಅಧ್ಯಕ್ಷರು, ಐ.ಎಫ್.ಎಫ್. ಕೇರಳ ಚಾಪ್ಟರ್ ಜಿದ್ದಾ), ಜನಾಬ್ ಉಮರ್ ಹುಸೈನ್ ( ಪ್ರಧಾನ ಕಾರ್ಯದರ್ಶಿ, ಐ.ಎಫ್.ಎಫ್. ಕೇಂದ್ರ ಸಮಿತಿ ಜಿದ್ದಾ), ಜನಾಬ್ ಅಮೀರ್ ಸುಲ್ತಾನ್ (ಮಾಧ್ಯಮ ವಕ್ತಾರ, ಐ.ಎಫ್.ಎಫ್. ಹಜ್ಜ್ ಸಮಿತಿ) ಯವರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

IFF3

ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡುತ್ತಿರುವ ಐ.ಎಫ್.ಎಫ್. ಸ್ವಯಂ ಸೇವಕರು

ಇಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ ಅಲ್ಲಾಹನ ಅಥಿತಿಗಳ ಸೇವೆಗಾಗಿ ಐ.ಎಫ್.ಎಫ್. ಪ್ರತಿವರ್ಷದಂತೆ ಈ ವರ್ಷವೂ ಕೂಡ ಸರಿಸುಮಾರು 1200 ಕ್ಕೂ ಮಿಕ್ಕಿದ ಪುರುಷ ಸ್ವಯಂ ಸೇವಕರೊಂದಿಗೆ ವನಿತಾ ವಿಭಾಗ ಮತ್ತು ಚಿಣ್ಣರನ್ನು ಕಣಕ್ಕಿಳಿಸುವ ಯೋಜಯನೆಯನ್ನು ಹಾಕಿರುವ ಐ.ಎಫ್.ಎಫ್. ಪ್ರಸಕ್ತ ಸಾಲಿನಲ್ಲಿ ಹಜ್ಜ್ ತೆರಳುವ ಯಾತ್ರಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಈ ವರ್ಷದಿಂದ ಹಜ್ಜ್ ಕ್ಯಾಂಪ್ ಗಳನ್ನೂ ಆಯೋಜಿದ್ದು, ನುರಿತ ತಜ್ಞರಿಂದ ರಚಿಸಲಾದ ಮೀನಾದ ನಕ್ಷೆಯನ್ನು ಅನಾವರಣ ಗೊಳಿಸುತ್ತದೆ ಎಂಬುದು ಗಮನಾರ್ಹವಾಗಿದೆ. ಐ.ಎಫ್. ಎಫ್. ನ ವನಿತಾ ವಿಭಾಗವಾದ ವುಮೆನ್ಸ್ ಪ್ರೆಟರ್ನಿಟಿ ಫೋರಮ್ ( ಡಬ್ಲೂ. ಎಫ್.ಎಫ್.) ಹಾಗೂ ಐ.ಎಫ್. ಎಫ್. ನ ವಿಧ್ಯಾರ್ಥಿ ಸಂಘಟನೆಯಾದ ಸ್ಟೂಡೆಂಟ್ ಪ್ರೆಟರ್ನಿಟಿ ಫೋರಮ್ (ಎಸ್. ಎಫ್.ಎಫ್.) ನ ಚಿಣ್ಣರು ರೈಲು ನಿಲ್ದಾಣದಲ್ಲಿ ತಮ್ಮ ಸೇವೆಯನ್ನು ನೀಡಲಿದ್ದಾರೆಂದು ಐ.ಎಫ್.ಎಫ್. ನ ಪಧಾದಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.. ಆದ್ದರಿಂದ ಅಲ್ಲಾಹನ ಸಂತೃಪ್ತಿ ಸಂಪಾದನೆಗಾಗಿ ಐ.ಎಫ್. ಎಫ್. ನಡೆಸುತ್ತಿರುವ ಈ ಪುಣ್ಯಕಾರ್ಯವನ್ನು ಅಲ್ಲಾಹನು ಸ್ವೀಕರಿಸಲಿ. ಆಮೀನ್.

Write A Comment