ಅಂತರಾಷ್ಟ್ರೀಯ

ನೈಜೀರಿಯಾದಲ್ಲಿ ಮತ್ತೊಂದು ಹೊಸ ರೂಪಾಂತರದ ಕೊರೋನಾ ಸೋಂಕು ಪತ್ತೆಯಾಗಿರುವ ಶಂಕೆ

Pinterest LinkedIn Tumblr


ಲಾಗೋಸ್‌: ಬ್ರಿಟನ್‌ನಲ್ಲಿ ಹೊಸ ರೂಪಾಂತರದ ಕೊರೋನಾ ವೈರಸ್‌ ಕಾಣಿಸಿಕೊಂಡ ಬೆನ್ನಲ್ಲೇ ನೈಜೀರಿಯಾದಲ್ಲಿ ಕೂಡ ಹೊಸ ಸ್ವರೂಪದ ಸೋಂಕು ಪತ್ತೆಯಾಗಿದೆ ಎಂದು ಆಫ್ರಿಕಾದ ಆರೋಗ್ಯ ಇಲಾಖೆ ಮಾಹಿತಿ ನಿಡಿದೆ.

ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿರುವ ಆರೋಗ್ಯ ಅಧಿಕಾರಿಯೊಬ್ಬರು, ಈ ಕುರಿತು ಇನ್ನೂ ತನಿಖೆ ನಡೆಯಬೇಕಿದೆ. ಆದರೆ, ಇದು ಬ್ರಿಟನ್‌ ಮತ್ತು ದಕ್ಷಿಣ ಆಫ್ರಿಕಾದ ಸೋಂಕಿಗಿಂತ ಭಿನ್ನವಾಗಿದೆ ಎಂದಿದ್ದಾರೆ.

ಈ ಸೋಂಕಿನಿಂದ ಅಪಾಯದ ಪ್ರಮಾಣ ಎಷ್ಟಿರಲಿದೆ ಎಂಬುದರ ಕುರಿತು ಈಗಲೇ ಮಾಹಿತಿ ನೀಡಲಾಗದು ಎಂದು ಅವರು ತಿಳಿಸಿದ್ದಾರೆ.

ತಜ್ಞರು ಹೆಚ್ಚಿನ ರೂಪಾಂತರ ವೈರಸ್‌ ಹಾನಿಕಾರಕವಾಗಿದ್ದರೂ ಅಥವಾ ಯಾವುದೇ ಪರಿಣಾಮವನ್ನು ಬೀರುವುದಿಲ್ಲವಾದರೂ, ಈ ಹೊಸ ರೂಪಾಂತರದಲ್ಲಿನ ಕೆಲವು ರೂಪಾಂತರಿತ ಕೊರೋನಾ ಹೇಗೆ ಹರಡುತ್ತವೆ ಎಂಬುದರ ಮೇಲೆ ಪರಿಣಾಮ ಬೀರಬಹುದೆಂದು ಹೇಳಿದ್ದಾರೆ.

Comments are closed.