ಅಂತರಾಷ್ಟ್ರೀಯ

ಕರೊನಾ ಲಸಿಕೆ ಸಿದ್ಧಪಡಿಸುತ್ತಿದ್ದ ವಿಜ್ಞಾನಿ ಆತ್ಮಹತ್ಯೆ!

Pinterest LinkedIn Tumblr


ಮಾಸ್ಕೋ: ಕರೊನಾ ಬಂದಾಗಿನಿಂದ ವಿಜ್ಞಾನಿಗಳು ಕರೊನಾ ಲಸಿಕೆ ಸಿದ್ಧಪಡಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಅದೇ ರೀತಿ ಔಷಧ ಸಿದ್ಧಪಡಿಸಲು ಹಗಲು ರಾತ್ರಿ ಕೆಲಸ ಮಾಡುತ್ತಿದ್ದ ವಿಜ್ಞಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಷ್ಯಾದಲ್ಲಿ ನಡೆದಿದೆ.

ರಷ್ಯಾದ ಸೇಂಟ್ ಪೀಟರ್ಸ್ಬರ್ಗ್​ ನಿವಾಸಿ ಅಲೆಕ್ಸಾಂಡರ್ ಸಶಾ ಕಗಾನ್ಸ್ಕಿ (45) ಸಾವನ್ನಪ್ಪಿರುವ ವಿಜ್ಞಾನಿ. ಇವರು ತಾವು ವಾಸವಿದ್ದ ಬಿಲ್ಡಿಂಗ್​ನ 14ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ. ಮೃತ ದೇಹದ ಮೇಲೆ ಕೇವಲ ಅಂಡರ್​ವೇರ್​ ಮಾತ್ರವೇ ಕಾಣಿಸಿದೆ. ಇದು ನಿಜಕ್ಕೂ ಆತ್ಮಹತ್ಯೆಯೇ ಅಥವಾ ಕೊಲೆಯೋ ಎನ್ನುವ ಅನುಮಾನಗಳು ವ್ಯಕ್ತವಾಗಿವೆ.

ವಿಜ್ಞಾನಿಯ ಆತ್ಮಹತ್ಯೆಗೆ ಕಾರಣವೇನು ಎನ್ನುವುದು ತಿಳಿದುಬಂದಿಲ್ಲ. ಈ ವಿಚಾರದಲ್ಲಿ ಹೆಚ್ಚಿನ ತನಿಖೆ ನಡೆಸಿ, ಸತ್ಯಾಂಶವನ್ನು ಹೊರತರುವುದಾಗಿ ಪೊಲೀಸರು ತಿಳಿಸಿದ್ದಾರೆ.

Comments are closed.