ಅಂತರಾಷ್ಟ್ರೀಯ

ಅಮೆರಿಕ ವಾಯುಪಡೆಯ ಕರ್ನಲ್ ಭಾರತ ಮೂಲದ ರಾಜಾ ಚಾರಿಯನ್ನು ಚಂದ್ರನ ಮೇಲೆ ಮಾನವ ಸಹಿತ ಮಿಷನ್ ಗಾಗಿ ಆಯ್ಕೆ ಮಾಡಿದ ನಾಸ

Pinterest LinkedIn Tumblr


ವಾಷಿಂಗ್ಟನ್:  ಅಮೆರಿಕ ವಾಯುಪಡೆಯ ಕರ್ನಲ್ ಭಾರತೀಯ ಮೂಲದ ರಾಜಾ ಜಾನ್ ವುರ್ಪುಟೂರ್ ಚಾರಿಯನ್ನು ನಾಸ ತನ್ನ ಮಹತ್ವಾಕಾಂಕ್ಷೆಯ ಮಾನವ ಸಹಿತ ಮಿಷನ್ ಗಾಗಿ ನಾಸಾ ಆಯ್ಕೆ ಮಾಡಿದೆ.

ಇದೇ ವೇಳೆ ಈ ತಂಡದಲ್ಲಿ 18 ಗಗನಯಾತ್ರಿಗಳಲ್ಲಿ ಅರ್ಧದಷ್ಟು ಮಂದಿ ಮಹಿಳೆಯರು ಇದ್ದಾರೆ ಎನ್ನಲಾಗಿದೆ. ನಾಸಾ ಬುಧವಾರ ತನ್ನ ಆರ್ಟೆಮಿಸ್ ಚಂದ್ರ-ಲ್ಯಾಂಡಿಂಗ್ ಕಾರ್ಯಕ್ರಮದಲ್ಲಿ ತರಬೇತಿ ನೀಡುವ 18 ಗಗನಯಾತ್ರಿಗಳಿಗೆ ಹೆಸರಿಸಿದೆ.ಯುಎಸ್ ಏರ್ ಫೋರ್ಸ್ ಅಕಾಡೆಮಿ, ಮೆಸಾಚುಸೆಟ್ಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಮತ್ತು ಯುಎಸ್ ನೇವಲ್ ಟೆಸ್ಟ್ ಪೈಲಟ್ ಸ್ಕೂಲ್ ಪದವೀಧರರಾಗಿರುವ 43 ವರ್ಷದ ರಾಜಾ ಚಾರಿ ಈ ಪಟ್ಟಿಯಲ್ಲಿ ರುವ ಏಕೈಕ ಭಾರತೀಯ-ಅಮೆರಿಕನ್ ಆಗಿದ್ದಾರೆ.ನಾಸಾ ಭಾರತೀಯ-ಅಮೆರಿಕನ್ ಗಗನಯಾತ್ರಿ ರಾಜಾ ಚಾರಿ ಚಂದ್ರನ ಮೇಲೆ ಮಾನವ ಸಹಿತ ಮಿಷನ್ ಗಾಗಿ ಆಯ್ಕೆ ಭಾರತೀಯ-ಅಮೆರಿಕನ್ ರಾಜಾ ಚಾರಿ ಅವರು ಮಾನವ ಸಹಿತ ಚಂದ್ರಯಾನಕ್ಕೆ ನಾಸಾ ದಿಂದ ಆಯ್ಕೆಯಾದ 18 ಗಗನಯಾತ್ರಿಗಳಲ್ಲಿ ಒಬ್ಬರಾಗಿದ್ದಾರೆ ಅಂತ ತಿಳಿಸಿದೆ.

Comments are closed.