ಅಂತರಾಷ್ಟ್ರೀಯ

ಕೊರೋನಾ ಲಸಿಕೆ ಫೈಝರ್ ನಿಂದ ಅಡ್ಡಪರಿಣಾಮ; ಬ್ರಿಟಿಷ್‌ ಔಷಧ ನಿಯಂತ್ರಕರ ಎಚ್ಚರಿಕೆ

Pinterest LinkedIn Tumblr


ಲಂಡನ್: ಕೊರೋನಾ ಸೋಂಕು ನಿವಾರಣೆಗಾಗಿ ಫೈಝರ್-ಬಯೋಎನ್‌ಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆಗೆ ಬ್ರಿಟನ್ ಸರ್ಕಾರ ಅನುಮೋದನೆ ನೀಡಲಾಗಿತ್ತು. ಈಗ ಫೈಝರ್ ಲಸಿಕೆಯ ಅಡ್ಡ ಪರಿಣಾಮದ ಬಗ್ಗೆ ವರದಿಯಾಗಿದೆ.

ಬ್ರಿಟಿಷ್‌ ಔಷಧ ನಿಯಂತ್ರಕರು ಈ ಬಗ್ಗೆ ಎಚ್ಚರಿಕೆಯನ್ನು ರವಾನಿಸಿದ್ದು, ಅಲರ್ಜಿಗೆ ಒಳಗಾಗುವ ಜನರು ಕೋವಿಡ್ 19 ವೈರಸ್‌ಗೆ ನೀಡಲಾಗುವ ಲಸಿಕೆ ತೆಗೆದುಕೊಳ್ಳದಂತೆ ಸೂಚಿಸಿದೆ.

ಔಷಧಿ, ಆಹಾರ ಅಥವಾ ಅಲರ್ಜಿ (Anaphylaxis) ಪ್ರತಿ ಪರಿಣಾಮ ಹೊಂದಿರುವವರು ಫೈಝರ್ ಬಯೋಎನ್‌ಟೆಕ್ ಕೋವಿಡ್ 19 ಲಸಿಕೆ ಪಡೆಯಬಾರದು ಎಂದು ಬ್ರಿಟನ್ ಔಷಧ ನಿಯಂತ್ರಕ ಸೂಚಿಸಿದೆ.

ಬ್ರಿಟನ್‌ನಲ್ಲಿ ವಯಸ್ಸಾದವರು, ಮುಂಚೂಣಿಯ ಕೊರೊನಾ ಹೋರಾಟಗಾರರಿಗೆ ಮಂಗಳವಾರದಿಂದ ಲಸಿಕೆ ವಿತರಣೆ ಪ್ರಾರಂಭಿಸಿತ್ತು. ಲಸಿಕೆ ವಿತರಣೆ ಆರಂಭವಾದ ಬಳಿಕ ಎರಡು ಅಲರ್ಜಿ ಪ್ರಕರಣಗಳು ವರದಿಯಾಗಿದೆ ಎಂದು ಮೆಡಿಸಿನ್ಸ್ ಮತ್ತು ಹೆಲ್ತ್‌ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಏಜೇನ್ಸಿ (ಎಂಎಚ್‌ಆರ್‌ಎ) ವರದಿ ಮಾಡಿದೆ.

ಹಾಗಾಗಿ ಅಲರ್ಜಿ ಇತಿಹಾಸ ಹೊಂದಿರುವ ಯಾವುದೇ ವ್ಯಕ್ತಿಯು ಫೈಜರ್ ಬಯೋಎನ್‌ಟೆಕ್ ಲಸಿಕೆಯನ್ನು ಪಡೆಯಬಾರದು ಎಂದು ಎಂಎಚ್‌ಆರ್‌ಎ ಕಾರ್ಯ ನಿರ್ವಾಹಕ ಜೂನ್ ರೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಹೆಚ್ಚಿನ ಜನರಿಗೆ ಅಲರ್ಜಿ ತೊಂದರೆಗಳು ಎದುರುಗಾವುದಿಲ್ಲ. ಹಾಗೆಯೇ ಲಸಿಕೆಯು ಎಂಎಚ್‌ಆರ್ ಸುರಕ್ಷತೆ, ಗುಣಮಟ್ಟ ಮಾನದಂಡಗಳನ್ನು ಹೊಂದಿದ್ದು, ಸಂಪೂರ್ಣವಾಗಿ ವಿಶ್ವಾಸಾರ್ಹವಾಗಿದೆ’ ಎಂದಿದ್ದಾರೆ.

Comments are closed.