ಅಂತರಾಷ್ಟ್ರೀಯ

ಆತನ ಪ್ರಿಯತಮೆ ಆತನ ಮಲತಂದೆಯ ಜೊತೆ ಸಂಬಂಧದಲ್ಲಿದ್ದಳು!: ಮುಂದೆ ನಡೆದಿದ್ದು ಶಾಕಿಂಗ್ ಸ್ಟೋರಿ

Pinterest LinkedIn Tumblr


ಫ್ಲೋರಿಡಾ: ಫ್ಲೋರಿಡಾದಲ್ಲೂ ನಡೆದ ತ್ರಿಕೋನ ಲವ್​​ ಸ್ಟೋರಿಯೊಂದು ದುರಂತ ಅಂತ್ಯಕಂಡಿದೆ. ಆದರೆ ಈ ಪ್ರೀತಿಯಿಂದಾಗಿ ಕೇವಲ ಒಬ್ಬರಲ್ಲಿ ಮೂರೂ ಜನರೂ ನೋವಿನಲ್ಲೇ ಮುಳುಗುವಂತಾಗಿದೆ.

ಬೇಗ ಸಾಯಲು ನೇಣು ಹಾಕಿಕೋ ಎಂದು ಸಲಹೆ ಕೊಟ್ಟ ಬಾಯ್​ಫ್ರೆಂಡ್​; ವಿಡಿಯೋ ಕಾಲ್​ನಲ್ಲೇ ಅಂತ್ಯವಾಯಿತು ಯುವತಿಯ ಬಾಳು

ಫ್ಲೋರಿಡಾದ ಲೂಯಿಸ್ ಏಂಜಲ್ ಕ್ವಿನೋನೆಜ್(53) ಹೆಸರಿನ ವ್ಯಕ್ತಿಯ ತಾಯಿಗೆ ಆರೋಗ್ಯ ಸರಿಯಿರಲಿಲ್ಲ. ಆದ ಕಾರಣ ಆತ ಏಂಜೆಲಿಕಾ ಅಕೋಸ್ಟಾ ಬ್ಲಾಂಕೊ(61) ಹೆಸರಿನ ಮಹಿಳೆಯನ್ನು ತಾಯಿಯ ಸೇವೆ ಮಾಡಲು ನೇಮಿಸಿಕೊಂಡಿದ್ದ. ಹಲವು ವರ್ಷಗಳಿಂದ ಆಕೆ ಆತನ ತಾಯಿಯ ಸೇವೆ ಮಾಡುತ್ತಿದ್ದಳು. ಇವರಿಬ್ಬರ ಜತೆ ಲೂಯಿಸ್​ನ ಮಲತಂದೆಯೂ ವಾಸಿಸುತ್ತಿದ್ದ. ಜತೆಯಲ್ಲಿ ಬದುಕುತ್ತಿದ್ದರಿಂದಾಗಿ ಏಂಜೆಲಿಕಾ ಮತ್ತು ಮಲತಂದೆಯ ನಡುವೆ ಪ್ರೀತಿ ಹುಟ್ಟಿದೆ. ಇವರಿಬ್ಬರ ನಡುವೆ ಸಂಬಂಧವೂ ಏರ್ಪಟ್ಟಿದೆ.

ಆದರೆ ಇನ್ನೊಂದತ್ತ ಲೂಯಿಸ್​, ಏಂಜೆಲಿಕಾ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಲಾರಂಭಿಸಿದ್ದಾನೆ. ಈ ವಿಚಾರವನ್ನು ಆಕೆಗೆ ಹೇಳಬೇಕೆನ್ನುವಷ್ಟರಲ್ಲಿ ಆಕೆ ತನ್ನ ಮಲತಂದೆಯ ಜತೆ ಸಂಬಂಧದಲ್ಲಿರುವುದು ತಿಳಿದುಬಂದಿದೆ. ಇದರಿಂದ ಸಿಟ್ಟಿಗೆದ್ದ ಲೂಯಿಸ್​ ಮಾಡಬಾರದ ತಪ್ಪನ್ನು ಮಾಡಿಬಿಟ್ಟಿದ್ದಾನೆ.

ಇತ್ತೀಚೆಗೆ ಒಂದು ದಿನ ರಾತ್ರಿ ಕುಡಿದು ಬಂದ ಲೂಯಿಸ್​, ಏಂಜೆಲಿಕಾ ಮೇಲೆ ಗ್ಯಾಸೋಲಿನ್​ ಸುರಿದು ಬೆಂಕಿ ಹಚ್ಚಿದ್ದಾನೆ. ಸ್ಥಳೀಯರಿಗೆ ಮಾಹಿತಿ ತಿಳಿದು ಅಗ್ನಿಶಾಮಕ ದಳ ಮತ್ತು ಆಯಂಬುಲೆನ್ಸ್​ಗೆ ಕರೆ ಮಾಡಲಾಗಿದೆ. ಇದೀಗ ಏಜೆಂಲಿಕಾರನ್ನು ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ.

Comments are closed.